Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ವರದಿ :ಹಣಮಂತ್ ದೇಶಮುಖ ಕರಂಜಿ ಕೆ

ಔರಾದ ಬಾ ತಾಲ್ಲೂಕಿನ ಕರಂಜಿ ಕೆ ಗ್ರಾಮದಲ್ಲಿ ಗಾಥ ಪೂಜೆ ನೆರೆವೇರಿಸಲಾಯಿತು.ಗಾಥ ಎಂದರೆ ಶ್ರೀ ಜ್ಞಾನೇಶ್ವರಿ ಮಹಾರಾಜರು ಬರೆದಿರು ಭಾಗವತಗೀತೆಯ ಮರಾಠಿ ಭಾವರ್ಥವಾಗಿದೆ.

ತೆಲಂಗಾಣ ಮತ್ತು ಮಹಾರಾಷ್ಟ್ರ ದ ಗಡಿ ತಾಲೂಕು ಆಗಿರುವ ಔರಾದ ಬಾ ನಲ್ಲಿ ಮರಾಠಿಯ ಭಜನೆ ಹಾಡು ಮತ್ತು ಕೀರ್ತನೆಗೆ ಹೆಸರುವಾಸಿಯಾಗಿದೆ.ಪ್ರತಿ ವರ್ಷ ಈ ಗ್ರಾಮದ ಹನುಮಾನ ಮಂದಿರದಲ್ಲಿ 7 ದಿನಗಳ ಕಾಲ ಸಪ್ತಾಹ ಭಜನೆ ಮತ್ತು ಕೀರ್ತನೆ ಮಾಡಿ ದೇವರಿಗೆ ಆರಾಧನೆ ಮಾಡುತ್ತಾರೆ.ಮತ್ತು ಪ್ರತಿ ದಿನ ಮುಂಜಾನೆ ಜ್ಞಾನೇಶ್ವರಿ ಮಹಾರಾಜರ ಜ್ಞಾನೇಶ್ವರಿ ಗ್ರಂಥವನ್ನು ಅನೇಕ ಯುವಕರು ಮತ್ತು ವಿದ್ಯಾರ್ಥಿಗಳು ಓದುತ್ತಾರೆ.ಗ್ರಾಮಕ್ಕೆ ಭಜನೆ ಕೀರ್ತನೆಗೆ ಬಂದ ಭಕ್ತ ಸಮೂಹಕ್ಕೆ ಗ್ರಾಮದ ಕೇಲವು ಗಣ್ಯರು ಪ್ರತಿ ದಿನ ಒಬ್ಬರಂತೆ 7 ದಿನಗಳ ಕಾಲ ಊಟದ ವ ವ್ಯವಸ್ಥೆ ಮಾಡುತ್ತಾರೆ.ಸಪ್ತಾಹದ 7 ದಿನವನ್ನು ಗಾಥ ಪೂಜೆ ಎಂದು ಕರೆಯುತ್ತಾರೆ. ಮತ್ತು ಮರುದಿನ ಕಾಲ ಕೀರ್ತನ ಎಂದು ಆಚರಿಸುವುದು ವಾಡಿಕೆ ಉಂಟು 

ಪ್ರತಿ ವರ್ಷವೂ ಈ ಸಪ್ತಾಹ ಕಾರ್ಯಕ್ರಮಕ್ಕೆ ನಾನಾ ಕಡೆಯ ಜನರು ಬರುತ್ತಾರೆ ಅದು ಅಲ್ಲದೆ ಗ್ರಾಮ ಪ್ರತಿ ಒಬ್ಬರು ಎಲ್ಲೇ ಇದ್ದರೂ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ.

ಕರಂಜಿ ಕೆ ಗ್ರಾಮದಲ್ಲಿ ಪ್ರತಿ ವರ್ಷವೂ ಈ ಸಪ್ತಾಹವನ್ನು ಸಕಲ ಹಿಂದೂ ಧರ್ಮದ ಹಿರಿಯರು ಮತ್ತು ಕಿರಿಯರು ಸೇರಿ ಭರ್ಜರಿ ಆಗಿ ಹಬ್ಬದಂತೆ ಆಚರಿಸುತ್ತಾರೆ.

ಮತ್ತು ಪ್ರತಿ ವರ್ಷ ಗಾಥ ಪೂಜೆ ದಿನದಂದು ಗ್ರಾಮದ ಜನರಿಗೆ  50ಕೆಜಿಯ ಹಳ್ಳಿ ಶೈಲಿಯ ಹುಗ್ಗಿ ಪ್ರಸಾದವಾಗಿ ನೀಡುತ್ತಾರೆ .ಇಂತಹ ಅತಿ ರುಚಿಕರವಾದ ಹುಗ್ಗಿ ಸವಿಯುವುದು ನಮ್ಮ ಭಾಗ್ಯ ಎನ್ನುತ್ತಾರೆ ಗ್ರಾಮಸ್ಥರು.

ಈ ಗಾಥ ಪೂಜೆ ವೇಳೆ ಗ್ರಾಮದ ರಮೇಶ ಚಿಟಗಿರೆ.ದೇವರಾವ ನಾಯ್ಕ.ರಾಜು ನಾಯಿಕ .ಮಾರುತಿ ನಾಯಿಕ.ಮತ್ತು ರಾಜುಕೋಳಿ. ತುಕರಾಮ ಕೋಳಿ.ಮತ್ತು ಪಂಢರಿ ಕೋಳಿ ಮತ್ತು ಗ್ರಾಮದ ಹಿರಿಯರು ಮತ್ತು ಕಿರಿಯರು ಉಪಸ್ಥಿತರಿದ್ದರು.

ಪ್ರತಿ ವರ್ಷ ನಮ್ಮ ಊರಿನ ಹುಗ್ಗಿಯ ರುಚಿ ಆಸುಪಾಸಿನ ಊರುಗಳಲ್ಲಿ ಚರ್ಚೆ ಆಗುತ್ತೆ 
:ಪಂಢರಿ ಕೋಳಿ 

ಪ್ರತಿ ವರ್ಷ ಈ ಸಪ್ತಾಹ ಕಾರ್ಯಕ್ರಮದಿಂದ ನಮ್ಮ ಗ್ರಾಮದ ಜನರಲ್ಲಿ ಏಕತೆ ಮೂಡಿಸುತ್ತದೆ.ಮತ್ತು ನಮ್ಮಗೆ ಈ 7 ದಿನಗಳು ಹಬ್ಬದಂತೆ ಕಾಣುತ್ತವೆ..

 ಗೋವರ್ಧನ ನಾಯ್ಕ್ ಗ್ರಾಮದ ಯುವಕ

ಹಿಂದೂ ಪರಂಪರೆಯ ಅನೇಕ ಕೀರ್ತನೆ ಮತ್ತು ಭಜನೆಯ ಹಾಡುಗಳು ಮೂಲಕ ಗ್ರಾಮದ ಜನರಲ್ಲಿ ಶಾಂತಿ ಮನೆ ಮಾಡುತ್ತಿದೆ..
:ರಾಜುಕುಮಾರ ಕೋಳಿ

ಜಾತಿ ಭೇದವಿಲ್ಲದೆ ನಾವು ಆಚರಿಸುವ ಈ ಸಪ್ತಾಹ ಕಾರ್ಯಕ್ರಮ ನಮ್ಮ ಗ್ರಾಮದ ಘನತೆ ಹೆಚ್ಚಿಸುತ್ತದೆ.
ಮಾನವರು ಎಲ್ಲರೂ ಒಂದೇ ಸಂದೇಶ ಸಾರುವ
ಈ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ಸಹೋದರತ್ವ ಭಾವ ಮೂಡಿಸುತ್ತಿದೆ

 ರಾಜುಕುಮಾರ ನಾಯಕ ಜಿಲ್ಲಾ ಯೋಗ ಪ್ರಚಾರಕರು