Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

Hand of Hope ಹಾಗೂ ಗ್ರಾಮ ಪಂಚಾಯತ ನಾಗಮಾರಪಳ್ಳಿ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಕರಂಜಿ ಬಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು ,

hand of Hope ಸಂಸ್ಥೆಯು ಮೂಲತಃ ಹೈದ್ರಾಬಾದನ ಸೇವಾ ಸಂಸ್ಥೆಯಾಗಿದ್ದು ಬಡವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಅವಶ್ಯಕತೆ ಇದ್ದ ರೋಗಿಗಳಿಗೆ ಮಾತ್ರೆ,ಸಿರುಪ್,ಹಾಗೂ ಔಷಧಿಗಳನ್ನು ಉಚಿತವಾಗಿ ನೀಡಿದೆ

ಈ ಕಾರ್ಯಕ್ರಮದ ಆಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸಂಜು ಕುಮಾರ್ ತೊಂಟ್ ಹಾಗೂ ಅರಬಿಂದೋ ಫಾರ್ಮ್ ಕಂಪನಿಯ ಸಹೋದ್ಯೋಗಿ ಅನಿಲ್ ಗಂಗರಾಮ್
ಮತ್ತು ಪ್ರದೀಪ್ ಪಟೇಲ್ ಸೇರಿದಂತೆ ಗ್ರಾಮ ಯುವಕರು  ಈ ಕಾರ್ಯಕ್ರಮದ ಆಯೋಜನೆಯನ್ನು ಮಾಡಿದರು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಗಮೇಶ ಸಾವಳೇ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜವ್ವ ಲಚ್ಛಮರಡ್ಡಿ ,ಉಪಾಧ್ಯಕ್ಷ ರವಿ ಸೂರ್ಯವಂಶಿ,ಯೋಗ ಪ್ರಚಾರಕ ರಾಜು ನಾಯಿಕ ಹಾಗೂ ಪಂಚಾಯತ್ ಸಿಬ್ಬಂದಿಗಳು ಸೇರಿದಂತೆ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು