Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love


ಔರದ: ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ ದಿನಾಂಕ :24-01-2022 ರಂದು ಸಂಜೆ 6 ಗಂಟೆಯ ಬಸ್ಸಿನಿಂದ ಕೆಳಗಿಳಿದ ಅಪರಿಚಿತ ವ್ಯಕ್ತಿಯನ್ನು ಗುರುತಿಸಿ ಅವನಿಗೆ ವಿಚಾರಣೆ ಮಾಡಿದಾಗ ಅವನು ಮಹಾರಾಷ್ಟ್ರದ ಒರ್ದಾದವನು ಎಂದು ತಿಳಿದು ಬಂದಾಗ ಅವನಿಗೆ ಬೆಲ್ದಾಳ ಗ್ರಾಮದ ಅಪ್ಪು ಗೆಳೆಯರ ಬಳಗದ ವತಿಯಿಂದ ಒಂದೊತ್ತಿನ ಊಟದ ವ್ಯವಸ್ಥೆ ಮಾಡಿದರು.ಈ ಮಾಹಿತಿಯನ್ನು ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣದ ತಾಲೂಕಾ ಉಪಾಧ್ಯಕ್ಷ ಅಂಬಾದಾಸ ಉಪ್ಪಾರ ಅವರು ಆ ಅಪರಿಚಿತ ವ್ಯಕ್ತಿಯ ಹತ್ತಿರ ಇದ ಡೈರಿಯಲ್ಲಿದಾ ದೂರವಾಣಿಗೆ ಕರೆಮಾಡಿ ವಿಚಾರಿಸಿದಾಗ ಅವನು ಮಹಾರಾಷ್ಟ್ರದ ಒರ್ದಾದವನು ಅವನ ಹೆಸರು ಸ್ವಪ್ನಿಲ್ ತಂದೆ ಸಿದ್ದಾರ್ಥ ಪಾಟಿಲ್ ವಯಸ್ಸು 29 ಅವನು ಮಾನಸಿಕ ರೋಗದಿಂದ ಹುಚ್ಚಾನಾಗಿ ಅವನು ಜನವರಿ 13 ರಿಂದಾ ತಿರುಗುತ್ತಾ ತಿರುಗುತ್ತಾ ಬೆಲ್ದಾಳ ಗ್ರಾಮಕ್ಕೆ ಆಗಮಿಸಿದ ಇದನ್ನು ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಅಪ್ಪು ಗೆಳೆಯರ ಬಳಗದವರು ಅವನಿಗೆ ಒಂದು ರಾತ್ರಿ ಅಡ್ಡೆಪಾ ಸ್ವಾಮೀಯ ಮಂದಿರದಲ್ಲಿ ಅವನ್ನನ್ನು ಮಲಗಿಸಿ ಅವನ ಜೊತೆ ಕರವೇ ತಾಲೂಕಾ ಉಪಾಧ್ಯಕ್ಷ ಅಂಬಾದಾಸ ಉಪ್ಪಾರ ಮತ್ತು ಬಾಬುಮಿಯಾ ಅವರು ಅವನ ಜೊತೆ ಇಡೀ ರಾತ್ರಿ ಮಲಗಿ ತನ್ನ ಮನೆಯವರಿಗೆ ಬೆಲ್ದಾಳ ಗ್ರಾಮದ ಮಾಹಿತಿಯನ್ನು ನೀಡಿದಾಗ ಅವನ ಮನೆಯವರು ಮಾರು ದಿನ ಮುಂಜಾನೆ 11 ಗಂಟೆಗೆ ಬಂದಾಗ ಆ ಅಪರಿಚಿತ ವ್ಯಕ್ತಿಯನ್ನು ಅವರ ಮನೆಯವರ ಜೊತೆ ಮಾತನಾಡಿಸಿದಾಗ ಅವನು ಬಂದಿರುವ ಇವರು ನಮ್ಮ ಮಾವಾ ಎಂದು ಗುರುತಿಸಿದಾಗ ಆ ವ್ಯಕ್ತಿಗೆ ಮತ್ತು ಅವನ ಮನೆಯವರಿಗೆ ಬಂಧುಗಳಂತೆ ಮರಿಯಾದೆಯನ್ನು ನೀಡಿ ಆ ವ್ಯಕ್ತಿಯನ್ನು ತನ್ನ ಮನೆಯವರ ಜೊತೆ ಅವನ ಹುಟ್ಟುರಾದ ಒರ್ದಾಗೆ ಕಳುಹಿಸಲಾಯಿತು.ಈ ಸಂದರ್ಭದಲ್ಲಿ ಕರವೇ ತಾಲೂಕಾ ಉಪಾಧ್ಯಕ್ಷ ಅಂಬಾದಾಸ ಉಪ್ಪಾರ, ಅಪ್ಪು ಗೆಳೆಯರ ಬಳಗದ ಕಾರ್ಯಕರ್ತರಾದ ಅಪ್ಪು ನವೀನ್, ಪವನ್ ವಗ್ಗೆ, ಯಮ್ ಡಿ ತೋಪಿಕ, ಸಚೀನರೆಡ್ಡಿ, ಯೋಗೇಶ್, ನವೀನ್, ನಾಗೇಶ್ ಅವರು ಉಪಸ್ಥಿತರಿದ್ದರು.