Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಚಿಂತಾಕಿ ಹೋಬಳಿಯಾದ್ಯಂತ ಕಳೆದ ಐದಾರು ದಿನಗಳಿಂದ ತಣ್ಣನೆ ಗಾಳಿ, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಕುಸುಬೆ ಬೆಳೆಯಲ್ಲಿ ಹೇನುಸೀರು ಹುಳುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಹೋಬಳಿಯ ಚಿಂತಾಕಿ, ರಾಯಪಲ್ಲಿ ,ನಾಗಣಪಲ್ಲಿ ಕರಂಜಿ  ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕುಸುಬೆ ಬೆಳೆ ಉತ್ತಮವಾಗಿ ಬೆಳೆದಿದೆ. ಆದರೆ ಕೆಲವು ದಿನಗಳಿಂದ ವಾತಾವರಣದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಇದರಿಂದ ಹೇನುಸೀರು ಹೆಚ್ಚಾಗಿದ್ದು ಎಲೆ ಹಾಗೂ ಕಾಂಡವನ್ನು ಮೆತ್ತಿಕೊಂಡು ಕುಸುಬೆಗೆ ಅವಶ್ಯಕವಾದ ರಸವನ್ನು ಹೀರಿಕೊಳ್ಳುತ್ತದೆ. ಇದರಿಂದ ಎಲೆಗಳು ಬಾಡಿದಂತಾಗಿ ಉದುರುತ್ತವೆ ಎಂದು  ಗ್ರಾಮದ ರೈತ  ಆತಂಕಪಡಿಸುತ್ತಾರೆ.

ಎಲ್ಲೆಡೆ ಕುಸುಬೆ ಬೆಳೆ ಹುಲುಸಾಗಿ ಬೆಳೆದಿದೆ. ಮೋಡ ಕವಿದ ವಾತಾವರಣದಿಂದ ಹೇನಿನ ಕಾಟವೂ ಹೆಚ್ಚಾಗಿದೆ. ಇದರಿಂದ ಬೇಸರಗೊಂಡಿರುವ ಸಮಯದಲ್ಲಿ ಕುಸುಬೆಗೆ ಎಲೆ ತಿನ್ನುವ ಹುಳುವಿನ ಕಾಟ ಶುರುವಾಗಿದೆ. ಈ ಕೀಟವು ಸಸಿಗಳನ್ನು, ಎಲೆಗಳನ್ನು ತಿಂದು ಬೆಳೆ ನಾಶಗೊಳಿಸುತ್ತವೆ ಎಂದು ಯುವ ರೈತ ಸಂಗಮೇಶ K.G ಆತಂಕ ವ್ಯಕ್ತಪಡಿಸುತ್ತಾರೆ.

ಕುಸುಬಿ ಕೇವಲ ಎಣ್ಣಿಕಾಳು ಬೆಳೆ ಅಲ್ಲದೆ ಹಲವಾರು ಔಷಧೀಯ ಗುಣವನ್ನು ಹೊಂದಿದೆ. ಸೋಪು ಹಾಗೂ ಇತರ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಕುಸುಬಿ ಎಣ್ಣೆ ಹೆಚ್ಚಾಗಿ ಬಳಕೆಯಾಗುತ್ತದೆ. ಮೂಳೆಗಳು ಮುರಿದಾಗ ಮೂಳೆಯನ್ನು ಜೋಡಿಸಿ ಬಿದಿರಿನಿಂದ ಕಟ್ಟನ್ನು ಹಾಕಿ ನಂತರ ಮೂಳೆ ಮುರಿದ ಸ್ಥಳದಲ್ಲಿ ಎಳ್ಳೆಣ್ಣಿ ಹಾಗೂ ಕುಸುಬಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮುರಿದ ಮೂಳೆ ಬೇಗನೆ ಕೂಡಿಕೊಳ್ಳುತ್ತದೆ. ಆರ್ಯುವೇದದಲ್ಲಿ ಕುಸುಬೆ ಎಣ್ಣಿ ಇನ್ನೂ ಹಲವು ರೋಗಗಳ ಶಮನಕ್ಕೆ ರಾಮ ಬಾಣವಾಗಿದೆ’ 

ಡೈಮಿಥೊಯೇಟ್ 30 ಇ.ಸಿ 1.7 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಎಲೆ ತಿನ್ನುವ ಹುಳುವಿನ ಕಾಟ ತಪ್ಪಿಸಲು 0.3ಮಿ.ಲೀ ಇಂಡಾಕ್ಸಾಕಾರ್ಬ್‌ 15 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪ­ಡಿಸಬೇಕು ಮತ್ತು ತೊಂಡಿಲು ಕೊರಕ ಹುಳು ಹತೋಟಿಗೆ ಒಂದು ಮಿ.ಲೀ. ಮೋನೋಕ್ರೊಟೋಪಾಸ್ 36 ಎಸ್.ಎಲ್ ಅಥವಾ 2 ಮಿ.ಲೀ ಕ್ವೀನಾ­ಲ್ಫಾಸ್ 25 ಇಸಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆ ಸಿಂಪಡಣೆ ಮಾಡು­­ವುದರಿಂದ ರೋಗವನ್ನು ಹತೋ­ಟಿಗೆ ತರಲು ಸಾಧ್ಯ’ ಎಂದು ಅನ್ಸಾರಿ ಎಂ ಎ ಕೆ (ಸಹಾಯಕ ಕೃಷಿ ನಿರ್ದೇಶಕರು) ಔರಾದ ಬಾ ತಿಳಿಸುತ್ತಾರೆ.

ನಮ್ಮ ನಾಲ್ಕು ಎಕರೆಯಲ್ಲಿ ಬೆಳೆದ ಕುಸುಬೆ ಬೆಳೆ ಉತ್ತಮವಾಗಿದೆ. ಆದರೆ ಸದ್ಯ ಹೇನು ಕಾಣಿಸಿಕೊಂಡಿವೆ. ಅಲ್ಲದೇ ಎಲೆಗಳು ಒಣಗಿ ಉದುರುತ್ತಿವೆ. ಇದರಿಂದ ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.