Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಫಸ್ಟ್ ಸಲಾ ಗೈರಾದರೆ ರಿಪೋರ್ಟ್  ಸೆಕೆಂಡ್ ಟೈಂ ಗೈರಾದರೆ ಸಸ್ಪೆಂಡ್

ತ್ರೈ ಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ ಸಚಿವರು ಈ ಸಲದ ಪರಿಶೀಲನಾ ಸಭೆಯಲ್ಲಿ ಗೈರಾದವರಿಗೆ ರಿಪೋರ್ಟ್ ಮಾಡಿ ನೋಟಿಸ್ ನೀಡಿ ಮತ್ತು 2ನೆಯ ಸಲ ಸಭೆಗೆ ಗೈರಾದರೆ ಸಸ್ಪೆಂಡ್ ಮಾಡಿ ಅಂತ ಸಂಬ0ಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದರು,

ಗೈರಾದ ಅಧಿಕಾರಿಗಳ ವಿರುದ್ಧ ಗರಂ ಅದ ಸಚಿವರು

ತಾಲ್ಲೂಕು ಪಂಚಾಯತ ಔರಾದ ನಲ್ಲಿ ನಡೆಯುತ್ತಿರುವ  ತ್ರೈ ಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಗೈರಾದ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಅದ ಸಚಿವರು ಬಿದರಿ ಭಾಷೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ,  34 ಇಲಾಖೆಯ ಪೈಕಿ 14 ಇಲಾಖೆಗಳು ಸಭೆಗೆ ವರದಿ ನೀಡಿಲ್ಲ ,ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸುವುದಿಲ್ಲ ,ಬರುವ 15 ದಿನಗಳಲ್ಲಿ ಎಲ್ಲ ಸಂಬಂಧ ಪಟ್ಟ  ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸಬೇಕು .ಇಲ್ಲವಾದರೆ ತಾಲೂಕಿನಿಂದ ಜಾಗ ಖಾಲಿ ಮಾಡಿ ಹೋಗಬೇಕೆಂದು ಸಚಿವ ಚವ್ಹಾಣ ಅಧಿಕಾರಿಗಳ ವಿರುದ್ಧ ಖಾರವಾಗಿ ಗರಂ ಆದ್ದರು

ಅನ್ನದಾತನ ಪರ ಧ್ವನಿ ಎತ್ತಿದ ಸಚಿವರು

ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಅನೇಕ ಫಲಾನುಭವಿಗಳಿಗೆ ಈ ಕಂತಿನ ಹಣ ಬಂದಿಲ್ಲ ,ಕಂತಿನ ಹಣ ಬರದ ಫಲಾನುಭವಿಗಳಿಗೆ ಕೂಡಲೇ ಅವರ ಸಮಸ್ಯೆ ಬಗೆಹರಿಸಿ ಎಂದು ಕೃಷಿ ಅಧಿಕಾರಿಗಳಿಗೆ ಸಭೆ ಶುರುವಾದ ಪ್ರಾರಂಭದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ,
ಇದು ಅಲ್ಲದೆ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ ಉತ್ತಮವಾದ ರೀತಿಯ ಇನ್ಸುರನ್ಸ್ ಕಂಪನಿಯಲ್ಲಿ ರೈತರಿಗೆ ಇನ್ಸುರನ್ಸ್ ಕೊಡಿಸಿ ರೈತರ ಪರ ಕೆಲಸ ಮಾಡಿ ಅಂತ ವಾರ್ನಿಂಗ್ ಮಾಡಿದ್ದರು,

ಹೆಲ್ತ್ ಇಸ್ ವೆಲ್ತ್ ಎಂದು ಸಭೆಯ ಗಮನ ಸೆಳೆದ ಸಚಿವರು

ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ವೈದ್ಯರು ಕೆಲಸ ಮಾಡಿದರೆ ಹುಷಾರ್

ವೈದ್ಯರು ತಪ್ಪದೇ ಸರಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಚಿಕಿತ್ಸೆ ನೀಡಬೇಕು ,ವಿನಹ ಕಾರಣ ರೋಗಿಗಳ ಹತ್ತಿರ ಲಂಚ ಪಡೆದರೆ ಹುಷಾರ್ ಎಂದು ವೈದ್ಯಾಧಿಕಾರಿಗಳಿಗೆ ಹೇಳುವ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಗ್ರಾಮಸ್ಥರು ವೈದ್ಯರ ನಡತೆ ಬಗ್ಗೆ ದೂರು ನೀಡಿದ್ದರು,ಅವರ ದೂರನ್ನು ಆಲಿಸಿದ ಸಚಿವರು ಹೆಣ್ಣು ಮಕ್ಕಳ (ಗರ್ಭಿಣಿಯರ) ಸಮಸ್ಯೆ ಅಲಿಸದಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು ,ಗರ್ಭಿಣಿಯರನ್ನು ಸರಿಯಾಗಿ ನೋಡಿಕೊಳ್ಳಬೇಕು ,ಹಾಗೂ ಆಸ್ಪತ್ರೆಯಲ್ಲಿ ಬಳಸುವ ಬೆಡ್, ಬೆಡ್ ಶೀಟ್ ಸರಿಯಾಗಿ ಶುಚಿಗೊಳಿಸಬೇಕೆಂದು
ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗೆ ಕಲಿಸುವುದನ್ನು ತಪ್ಪಿಸಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವ್ಯವಸ್ಥೆ ಕಲ್ಪಿಸಿಬೇಕು ಎಂದು
ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು,

ತಾಲ್ಲೂಕಿನಲ್ಲಿ ಕರೊನ ಮೂರನೆಯ ಅಲೆಗೆ ಬಗ್ಗೆ ಕಾಳಜಿ ವಹಿಸಿ ಯಾರು ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕು ಎಂದರು.

ರಾಜಕೀಯ ಮಾಡಬೇಡಿ! ಪ್ರತಿ ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸಿ

ತಾಲ್ಲೂಕಿನ ಪ್ರತಿ ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಿ,ಯಾವ ಶಿಕ್ಷಕರು ವಿನಃಹ ಕಾರಣ ಕಚೇರಿ ಸುತ್ತುವುದು ಕಡಿಮೆ ಮಾಡಿ,ಕಾರಣವಿಲ್ಲದೆ ಕಚೇರಿ ಸುತ್ತುವ ಶಿಕ್ಷಕರ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ತಾಲ್ಲೂಕು ಶಿಕ್ಷಣಧಿಕಾರಿಗಳಿಗೆ ತಿಳಿ ಹೇಳಿದರು,

ಸಚಿವರ ಎದುರೇ ಕಣ್ಣಾಮುಚ್ಚಾಲೆ ಆಟ

ರಾಜಕೀಯ ನಾಯಕರ ಗುಣ ಕಲಿತ ಅಧಿಕಾರಿಗಳು

ಹೌದು ಸಚಿವರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಅಧಿಕಾರಿಗಳು ಸುಳ್ಳುಗಳ ಸರಮಾಲೆಯನ್ನು ಪೋಣಿಸಿ ಇಡಲು ಪ್ರಯತ್ನ ಪಟ್ಟರು,ಅವುಗಳನ್ನು ಕ್ಯಾರೆ ಮಾಡದೆ ತರಾಟೆಗೆ ತೆಗೆದುಕೊಂಡು ಜನಪರ ಕೆಲಸ ಮಾಡಬೇಕು  ಮತ್ತು ಕೇಂದ್ರ ಸ್ಥಾನದಲ್ಲಿ ಉಳಿದು ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಎಂದು ಖಾರವಾಗಿ ಬಿದರಿ ಭಾಷೆಯಲ್ಲಿ ಗುಡುಗಿದ್ದರು,

ಪ್ರಶ್ನೆಗೆ ಪರ್ಯಾಯ ಉತ್ತರ ಹುಡುಕಿದ ಪಂಚಾಯತ್ ಇಲಾಖೆ

ತ್ರೈ ಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಬಂದರು ಆದರೆ ಅಭಿವೃದ್ಧಿಯ ಯಾವ ಹಸಿರು ನಿಶಾನೆ ಕಾಣಿಸಿಲ್ಲ ,ಕಾಮಗಾರಿಗಳು ಕಳಪೆ ಇನ್ನು ಶುರುವಾಗದ ಕಾಮಗಾರಿಗಳು ,ಶುರುವಾದಾರು ಅರ್ಧಕ್ಕೆ ನಿಂತ ಕಾಮಗಾರಿಗಳು ಹೀಗೆ ಪಂಚಾಯತ ಇಲಾಖೆಯ ಅಧಿಕಾರಿಗಳಿಗೆ ಇದರ ಸಂಬಂಧ  ಪ್ರಶ್ನೆ ಕೇಳಿದರೆ ಪರ್ಯಾಯ ಉತ್ತರ ಹುಡುಕಿದರು,ಆದರೆ ಸಚಿವರು ಇವರ ಉತ್ತರಕ್ಕೆ ಸರಿಯಾದ ಪ್ರತಿಯುತ್ತರ ನೀಡಿದರು,ಭವನ ನಿರ್ಮಾಣ ಮಾಡುವ ಪ್ರಕ್ರಿಯೆ ಬಗ್ಗೆ ನಿಗವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದರು,

ಕೇಂದ್ರ ಸ್ಥಾನದಲ್ಲಿ ಇದು ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ

ತ್ರೈ ಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ ಸಚಿವರು ಈ ಸಲದ ಪರಿಶೀಲನಾ ಸಭೆಯಲ್ಲಿ ಮತ್ತೊಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಕೇಂದ್ರ ಸ್ಥಾನದಲ್ಲಿ ಇದು ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಪದೇ ಪದೇ ಅಧಿಕಾರಿಗಳು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಒಟ್ಟಾರೆ ಹೇಳುವುದಾದರೆ ಔರಾದ ಬಾ ತಾಲ್ಲೂಕಿನ ಹಣೆಪಟ್ಟಿಯನ್ನು ತೆರುವುಗೊಳಿಸಬೇಕೆಂದರೆ ಮೊದಲು ಅಧಿಕಾರಿಗಳು.ಸ್ಥಳೀಯ ಸಂಸ್ಥೆಗಳು ಸರಿಯಾದ ಕೆಲಸ ಮಾಡಬೇಕು ,ಇಲ್ಲದಿದ್ದರೆ ನಮ್ಮ ತಾಲ್ಲೂಕಿನ ಹಣೆಬರಹ ಬದಲಾಯಿಸಲು ಸಾಧ್ಯವಿಲ್ಲ ,ಕೂಡಲೇ ಸರಿಯಾದ ರೀತಿಯ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ,