Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ ತಾಲೂಕಿನ ಬೆಲ್ದಾಳ ಗ್ರಾಮದಲ್ಲಿ ಗಣರಾಜ್ಯೋತ್ಸವದಂದು ದೇಶಕ್ಕೆ ಅವಮಾನವಾಗುವಂತೆ ಮಾಡಿದ್ದಾರೆ.ಈ ಅಂಗನವಾಡಿ ಕೇಂದ್ರಕ್ಕೆ ಯಾರು ದಿಕ್ಕೇ ಇಲ್ಲದಂತಾಗಿದೆ. ಗಣರಾಜ್ಯೋತ್ಸವದಂದು ಅಂಗನವಾಡಿ ಕಾರ್ಯಕರ್ತೆಯಾಗಲ್ಲಿ ಅಂಗನವಾಡಿ ಅಡುಗೆ ಸಹಾಯಕಿಯಾಗಲ್ಲಿ ಯಾರು ಕೂಡಾ ಇದು ಇಲ್ಲದಂತಾಗಿದೆ.ಈ ದಿನದಂದು ಅಂಗನವಾಡಿ ಕೇಂದ್ರ ತೆರೆಯುದಾಗಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುವುದಾಗಲ್ಲಿ ಮತ್ತು ಯಾವುದೇ ರೀತಿಯ ಮಾರ್ಯದೆ ನೀಡಿಲ್ಲಾ.ಅದೆ ರೀತಿಯಾಗಿ ಈ ಅಂಗನವಾಡಿ ಕೇಂದ್ರದಲ್ಲಿ ಸಾಕಷ್ಟು ಕೊರತೆಗಳಿವೆ ಎಂದು ಕೂಡಾ ತಿಳಿದು ಬಂದಿದೆ.ಆದ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕು ಮತ್ತು ಈ ಕೇಂದ್ರದಲ್ಲಿರುವ ಸಮಸ್ಯೆಯನ್ನು ಪರಿಹರಿಸಬೇಕು.ಒಂದು ವೇಳೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲಾ ಅಂದರೆ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣದ ತಾಲೂಕಾ ಉಪಾಧ್ಯಕ್ಷ ಅಂಬಾದಾಸ ಉಪ್ಪಾರ ಅವರು ಅಗ್ರಹೀಸಿದರು.ಈ ಸಂದರ್ಭದಲ್ಲಿ ಉಮಾಕಾಂತರೆಡ್ಡಿ, ನವೀನರೆಡ್ಡಿ, ಯೋಗೇಶ್,ಪ್ರಾಭಾಕರರೆಡ್ಡಿ, ನವೀನ್, ನಾಗೇಶ ಅವರು ಉಪಸ್ಥಿತರಿದ್ದರು.