Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರನಲ್ಲಿ ಜ.27 ರಂದು ವಿಚಾರ ಸಂಕಿರಣ

ಬೀದರ : ಜನೆವರಿ 27 ರಂದು ದಲಿತ ಕೂಲಿ ಕಾರ್ಮಿಕ ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ 73 ನೇ ಗಣರಾಜ್ಯೋತ್ಸವ ನಿಮಿತ್ಯ ಮತಾಂತರ ಕಾಯ್ದೆ ಕ್ರಷಿ ಮತ್ತು ಕಟ್ಟಡ ಕಾರ್ಮಿಕರ ಭವಿಷ್ಯದ ಸವಾಲುಗಳ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ ಪಟ್ಟಣದ ಚನ್ನಬಸವ ಪಟ್ಟದ್ದೆವರ ರಂಗ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಂಚಾಲಕ ಮಾರುತಿ ಬೌದ್ದೆ ತಿಳಿಸಿದ್ದಾರೆ. ಬೀದರ ನಗರದ ಅಂಬೇಡ್ಕರ್ ವ್ರತದಲ್ಲಿ ಕಾರ್ಯಕ್ರಮದ ಕರ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ವಿಚಾರ ಸಂಕಿರಣ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದ್ದು ಭವಿಷ್ಯದ ಸವಾಲುಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ರಮೇಶ ಡಾಕುಳಗಿ. ಬಾಬು ಪಾಸ್ವಾನ್. ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮನ್ನಾಶೇಠ. ಪ್ರಧಾನ ಕಾರ್ಯದರ್ಶಿ ಅನೀಲ ಕುಮಾರ ಬೆಲ್ದಾರ ಅವರು ಕರಪತ್ರ ಬಿಡುಗಡೆ ಮಾಡಿದರು. ರಮೇಶ ಡಾಕುಳಗಿ ಮಾತನಾಡಿ ಸರ್ವಧರ್ಮ ಪ್ರಗತಿ ಏಳ್ಗೆಗಾಗಿ ಕ್ರಷಿ ಮತ್ತು ಕಾರ್ಮಿಕರಿಗೆ ಸರಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಜನರ ಮನೆ ಬಾಗಿಲಿಗೆ ಸರಕಾರದ ಯೋಜನೆಗಳನ್ನು ಕೊಂಡೊಯ್ಯುವ ಕೆಲಸವಾಗಬೇಕು. ಗ್ರಾಮೀಣ ಭಾಗದ ಬಡ ಮುಗ್ದ ಜನರಿಗೆ ಯೋಜನೆಗಳ ಬಗ್ಗೆ ಮಾಹಿತಿಯ ಕೊರತೆ ಕಾಡುತ್ತಿದೆ ಜನರಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡಲು ಎಲ್ಲಾ ಸಂಘಟನೆಯ ಒಕ್ಕೂಟದ ವತಿಯಿಂದ ಉತ್ತಮ ಕೆಲಸ ಮಾಡಬೇಕು ಎಂದು ಸಂಘಟನೆಯ ಪದಾಧಿಕಾರಿಗಳಿಗೆ ಕರೆ ನೀಡಿದರು. ಬೀದರ ಜಿಲ್ಲೆಯಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆಯಲು ಉತ್ತಮ ವೇದಿಕೆಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಜನರು ಮಾಹಿತಿ ಪಡೆಯಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಸಮಾಜ ಸೇವಕ ಶಶಿಕುಮಾರ್ ಪಾಟೀಲ್. ಮಾದಿಗ ದಂಡೊರಾ ಹೋರಾಟ ಸಮಿತಿಯ ಯುವ ಘಟಕದ ರಾಜ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ. ಬಹುಜನ ಜಾಗ್ರತಿ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮೊಳಕೆರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಸಾಮಾಜಿಕ ನ್ಯಾಯಕ್ಕಾಗಿ) ಜಿಲ್ಲಾಧ್ಯಕ್ಷ ಸತೀಷ ವಗ್ಗೆ. ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ. ಸೇರಿದಂತೆ. ಪ್ರೆಮಕುಮಾರ ಕಾಂಬಳೆ. ಗೌತಮ ಭೋಸ್ಲೆ. ಸಂತೋಷ ಪಟವಾರೆ. ಗುಣವಂತ ಶಿಂಧೆ.ವಿನೋದ ಗಾವಕರ. ವಿಜಕುಮಾರ ಪಾಟೀಲ್. ರಾಜಕುಮಾರ ಶೇರಿಕಾರ. ಮಲ್ಲಿಕಾರ್ಜುನ ಫುಲೆ. ಸೂರ್ಯಕಾಂತ ಸಾದುರೆ. ಅಶೋಕ ವಗ್ಗೆ. ಮುಖೇಶ ಶಹಾಗಂಜ್. ಗುಣವಂತ ಶಿಂಧೆ. ಸೇರಿದಂತೆ ದಲಿತ ಸಂಘಟನೆಯ ಹಾಗೂ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Bidar