Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಹದಗೆಟ್ಟ ರಸ್ತೆಯಿಂದ ಸಂಚಾರಕ್ಕೆ ಅಡೆತಡೆ

ಕಣ್ಣಿದು ಕುರುಡರಾದರೆ ಜನಪ್ರತಿನಿಧಿಗಳು

ಅಂಗೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣ

ಔರಾದ್: ತಾಲೂಕಿನ ತುಳಜಾಪುರ ದಿಂದ ಚಿಂತಾಕಿ ಗ್ರಾಮದ ವರೆಗಿನ  10 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಮಹಿಳೆಯರು, ಮಕ್ಕಳು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ರಸ್ತೆ 2008ರಲ್ಲಿ   ತುಳಜಾಪು ದಿಂದ ಚಿಂತಾಕಿ ಗ್ರಾಮಕ್ಕೆ ತೆರಳುವ ಹತ್ತು ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆ ದುರಸ್ತಿಗೆ ಮುಂದಾಗದಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಡುತ್ತಿದೆ. ದಶಕ ಕಳೆದರೂ ಈ ರಸ್ತೆ ದುರಸ್ತಿ ಕಾಣದೇ ಬರೀ ಗುಂಡಿಗಳೇ ರಾರಾಜಿಸುತ್ತಿವೆ. ಪರಿಣಾಮ ಎಕಲಾರ, ಕೊಳ್ಳೂರ, ಬರದಾಪೂರ, ಬೆಲ್ದಾಳ ನಡುವಿನ ರಸ್ತೆಯಲ್ಲಿ ನಿತ್ಯವೂ ಬೈಕ್‌ ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳ ಸವಾರರು ಸರ್ಕಸ್‌ ಮಾಡಿ ಊರು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. 

ಇದರಿಂದಾಗಿ ಶಾಲಾ-ಕಾಲೇಜು ಮಕ್ಕಳು, ರೈತರು, ಮಹಿಳೆಯರು, ವೃದ್ಧರು   ದಿನ ನಿತ್ಯ ಹೈರಾಣಾಗುತಿದ್ದಾರೆ. ಕೇಲ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಈ ರಸ್ತೆ ತೆಲಂಗಾಣ ಮತ್ತು ಕರ್ನಾಟಕ ಅಂತರರಾಜ್ಯ ಗಡಿ ಸಂಪರ್ಕಿಸುವ ರಸ್ತೆ ಇದಾಗಿದೆ. ಕಳೆದ 13 ವರ್ಷಗಳಿಂದ  ರಸ್ತೆ ತೀರಾ ಹದಗೆಟ್ಟಿದ್ದೆ.  ತೀವ್ರ ಹದಗೆಟ್ಟಿರುವ ರಸ್ತೆಯುದ್ಧಕ್ಕೂ ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಡಾಂಬರು ಕಾಣದೆ ದಶಕಗಳೇ ಕಳೆದಿವೆ. ಕಲ್ಲು-ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿರುವುದರಿಂದ ಸಂಚಾರಕ್ಕೆ ಇನ್ನಿಲ್ಲದ ಅಡಚಣೆಯಾಗುತ್ತಿದ್ದು. ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಔರಾದ್ ತಾಲ್ಲೂಕಿನ ಶಾಸಕರು ಮೂರು ಬಾರಿ ಗೆದ್ದು ಸಚಿವರಾದರು ಈ ರಸ್ತೆಗೆ ದುರಸ್ತಿ ಭಾಗ್ಯ ಬಂದಿಲ್ಲ ಎಂಬ ಗೋಳು ಸಾರ್ವಜನಿಕರಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.