Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಹುಮನಾಬಾದ್ : ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಸೇರಿದಂತೆ ಇತರೆ ಕಾರ್ಯಕರ್ಯರಿಂದ ಹುಮನಾಬಾದ ತಹಶೀಲ್ದಾರ ಡಾ। ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊನ್ನೆ ಸಿಪಿಐ ಲಂಚ ಪಡೆದಾಗ ಎಲ್ಲಿತು ಈ ಸಂಘಟನೆ?

ಆರೋಪಿಯನ್ನು ಬಂಧಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತಾರೆ ಆದರೆ ತಮ್ಮದೇ ಇಲಾಖೆಯಲ್ಲಿ ಕೋಟಿ ಕೋಟಿ ಹಣ ಲೂಟಿ ಆದರೆ ಅದನ್ನು ಕಡಿವಾಣ ಹಾಕಲು ಯಾಕೆ ಇವರ ಸಂಘಟನೆ ಮುಂದೆ ಬರಲ್ಲ

ಮೊನ್ನೆ ಕೆಡಿಪಿ ಮೀಟಿಂಗ್ ನಲ್ಲಿ ಪ್ರಭು ಚಾವ್ಹಾಣ ಒಂದು ಮಾತು ಹೇಳಿದರು ಅದು ಎನ್ ಗೊತ್ತಾ” ಅಧಿಕಾರಿಗಳೇ ನಿಮ್ಮಗೆ ಕೆಲಸ ಮಾಡುವುದಕ್ಕೆ ಆಗಲ್ಲ ಆದರೆ  ಯೂನಿಯನ್ ಮಾಡುತ್ತೀರಿ ಅಂತ”ಹೇಳಿದರು ಆ ಮಾತು ಸರಕಾರಿ ಅಧಿಕಾರಿಗಳ ನಡತೆಯನ್ನು ನೋಡಿ ಹೇಳಿದರು ಆ ಮಾತು ಇಂದು ಸತ್ಯವಾಗಿದೆ ಅನ್ಸುತ್ತೆ,

ಅಧಿಕಾರಿಗಳು ಮತ್ತು ಸರಕಾರಿ ಸಿಬ್ಬ0ದ್ದಿ ಗಳು ಪ್ರತಿಭಟನೆ ಮಾಡಿದ್ದು ಎಲ್ಲರಿಗೂ ಗೊತ್ತು ಆದರೆ ಒಂದು ಸಲ ಆತ್ಮ ಸಾಕ್ಷಿಯಾಗಿ ಹೇಳಿ ನೀವು ಎಷ್ಟು ಸಲ ಬಡವರಿಂದ ಲಂಚ ಪಡೆದು ಕೆಲಸ ಮಾಡಿದಿರಿ,ಅವಾಗ ನಿಮ್ಮ ಸಂಘಟನೆಯಲ್ಲಿ ಈ ವಿಷಯದ ಕುರಿತು ಚರ್ಚೆ ಮಾಡಿದ್ದೀರಾ?

ಮೊನ್ನೆ ಕೆಡಿಪಿ ಮೀಟಿಂಗ್ ನಲ್ಲಿ ನಿಮ್ಮಗೆ ಕೇಂದ್ರ ಸ್ಥಾನದಲ್ಲಿದು ಕೆಲಸ ಮಾಡಲು ಸಚಿವರು ಹೇಳಿದರು ,ಎಷ್ಟು ಅಧಿಕಾರಿಗಳು ಕೇಂದ್ರ ಸ್ಥಾನಕ್ಕೆ ಬಂದು ವಾಸವಾಗಿದ್ದೀರಿ,ಹೇಳಿ  ಅವಾಗ ನಿಮ್ಮ ಸಂಘಟನೆ ಎಲ್ಲಿ ಇತ್ತು,ಈ ವಿಷಯದ ಬಗ್ಗೆ ನಿಮ್ಮಗೆ ಕೆಲಸ ಮಾಡುವಂತೆ ಆದೇಶ ಮಾಡಿತ್ತಾ,ಹೇಳಿ ಅಧಿಕಾರಿಗಳೇ?

ಜನರಿಗೆ ನ್ಯಾಯ ಒದಗಿಸಲು ಸರಕಾರ ನಿಮ್ಮಗೆ ನೇಮಕ ಮಾಡುತ್ತೆ,ಆದರೆ ನೀವು ಕೆಲಸ ಮಾಡದೆ ಸರಕಾರದ ಹಣವನ್ನು ಲೂಟಿ ಮಾಡಿ  ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿ ಮತ್ತೆ ಶ್ರೀರಾಮ ತರಹ ಪೋಸ್ ನೀಡುತ್ತಾರೆ ,ವಿಚಿತ್ರ ಏನು ಅಂದರೆ ರಾಜಕೀಯ ನಾಯಕರುಗಳಿಗಿಂತ ಹೆಚ್ಚು ಭ್ರಷ್ಟಾಚಾರ ಮಾಡುವವರು ಅಧಿಕಾರಿಗಳೇ,

ಉದಾಹರಣೆಗೆ :ಪಂಚಾಯತನಲ್ಲಿ ಲಂಚ ,ನಾದಕಛೇರಿಯಲ್ಲಿ ಲಂಚ,ತಹಶೀಲ್ದಾರ್ ಕಚೇರಿ ಅಂತೂ ಹೇಳಲ್ಲೇ ಬೇಡಿ ಇದು ನಿಮ್ಮಗೂ ಗೊತ್ತು ಇಡೀ ರಾಜ್ಯದ ಪ್ರತಿಯೊಬ್ಬ ಮಂತ್ರಿಗೂ ಗೊತ್ತು,
ಆದರೆ ಇಂದು ನೀವು ಶ್ರೀರಾಮನ ಹಾಗೆ ತಹಸೀಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ ಮಾಡುವುದು ಹಾಸ್ಯಾಸ್ಪದವಾಗಿದೆ,ಯಾಕೆ ಗೊತ್ತಾ ಹುಮನಾಬಾದ್ ತಹಶೀಲ್ದಾರ್ ಮೆಲೆ  ಹಲ್ಲೆ ನಡೆದರೆ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸುತ್ತೇ ,ಸರಕಾರದ ಅಂಗವಾಗಿದ ನಿಮ್ಮಗೆ ಸರಕಾರದ ಮೇಲೆ ಭರವಸೆ ಇಲ್ಲ ಅಂದರೆ ಸಾಮಾನ್ಯ ಪ್ರಜೆಗಳ ಸ್ಥಿತಿ ಏನು ಅಧಿಕಾರಿಗಳೇ?

ಹಾಗಂತ ಈ ರಾಜ್ಯದಲ್ಲಿ ಉತ್ತಮ ಅಧಿಕಾರಿಗಳು ಇಲ್ಲ ಅಂತ ಅಲ್ಲ ಅನೇಕ ಅಧಿಕಾರಿಗಳು ದೇಶಕ್ಕಾಗಿ ಸೇವೆ ಮಾಡಿದು ಇಂದು ಅಂತ ಅನೇಕ ಅಧಿಕಾರಿಗಳಿಗೆ ಆದರ್ಶ ವಾಗಿ ಇಟ್ಟುಕೊಳ್ಳುತ್ತೇವೆ,ನೀವುಗಳು ಪ್ರತಿಭಟನೆ ಮಾಡಿ ಸರಕಾರದ ಮೇಲೆ ಒತ್ತಡ ತಂದು ಆರೋಪಿಯನ್ನು ಬಂಧಿಸುವ ಹಾಗೆ ಮಾಡುತ್ತೀರಿ,ಆದರೆ ನಿಮ್ಮ ಇಲಾಖೆಯ ಅಧಿಕಾರಿಗಳು ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಾಗ ಅವಾಗ ಕೂಡ ಇದ್ದೆ ರೀತಿ ಪ್ರತಿಭಟನೆ ಮಾಡಿ ಅವಾಗ ಜೈಲಿಗೆ ಕಳುಹಿಸಿ ಕೊಡಿ ಅವಾಗ ನಿಮ್ಮ ಸಂಘಟನೆಗೆ ಒಂದು ಬೆಲೆ ಇರುತ್ತೆ,

ಸರಕಾರದ ಸಂಬಳ ಪಡೆದು ಸರಕಾರದ ಮೇಲೆ ಒತ್ತಡ ಹೇರುವುದು ಯಾವ ಪುರುರ್ಷಾಥಕ್ಕೆ ನಿಮ್ಮ ಸಂಘಟನೆ,
ಬಡವರುಗಳಿಗೆ ಒಳ್ಳೆಯ ಜೀವನ ನೀಡಬೇಕು ಅಂತ ದೇಶದ ಪ್ರಧಾನಿ ಹಗಲು ರಾತ್ರಿ ಕಷ್ಟ ಪಟ್ಟರೆ,ನೀವುಗಳು 12 ಘಂಟೆಗೆ ಕಛೇರಿಗೆ ಬಂದು ಮತ್ತೆ 3 ಘಂಟೆಗೆ ವಾಪಸ್ಸು ಹೋಗುತ್ತಿರಿ ಅವಾಗ ನಿಮ್ಮ ಸಂಘಟನೆ ಆ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಬೇಕು,

ಅಧಿಕಾರಿಗಳಿಗೆ ಮುಟ್ಟಿದರೆ ಕೇಸ್,ಹೆಚ್ಚಿಗೆ ಮಾತು ಆಡಿದರೆ ಕೇಸ್ ,ಹೀಗೆ ಅಧಿಕಾರಿಗಳಿಗೆ ಬಚಾವ್ ಮಾಡಲು ಅನೇಕ ಕಾಯ್ದೆಗಳಿವೆ, ಸಂವಿಧಾನದ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಕೇಸ್ ದಾಖಲಿಸಬಹುದು,ಇವರು ಇಂದು ಪ್ರತಿಭಟನೆ ಬಂದಿದ್ದು ಯಾವ ಸಾಧನೆ ಮಾಡುವುದಕ್ಕೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ,

ಬಡ ಜನರಿಗೆ ಇರಲಿಕೆ ಮನೆಯಿಲ್ಲ ಆದರೆ ಪ್ರತಿ ತಾಲ್ಲೂಕಿನಲ್ಲಿ ನೌಕರರ ಭವನ ಬೇಕು,ಎಷ್ಟು ವಿಚಿತ್ರ ಇದು,
ಹಾಗಂತ ನಾನು ಆರೋಪಿ ಪರ ಸುದ್ದಿ ಬರಿಯುತ್ತಿಲ್ಲ,ಆದರೆ ಸತ್ಯ ಏನು ಅಂತ ಜನರ ಮುಂದೆ ಬಿಚ್ಚಿ ಇಡುತ್ತಿದ್ದೇನೆ,

ಸರಕಾರದ ವಿರುದ್ಧ ಜನಸಾಮಾನ್ಯರು ಪ್ರತಿಭಟನೆ ಮಾಡಿದರೆ ಯಾವುದಾದರೂ ಸರಕಾರಿ ಅಸ್ತಿಗೆ ಹಾನಿ ಆದರೆ ಜನರಿಂದ ದುಡ್ಡು ವಸೂಲಿ ಮಾಡುತ್ತೆ,ಈ ದಿನ ಅನೇಕ ಕಡೆ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಗಳು ಪ್ರತಿಭಟನೆಗೆ ಇಳಿದಿದ್ದಾರೆ,ಸರಕಾರದ ಸಂಬಳ ಪಡೆದು ಪ್ರತಿಭಟನೆ ಮಾಡುವುದು ಎಷ್ಟು ವಿಚಿತ್ರ ನಿಮ್ಮಗೆ  ಒಂದು ಹಕ್ಕು ಜನರಿಗೆ ಹಕ್ಕು ಇದು ಯಾವ ನ್ಯಾಯ ?

ನೀವು ಪ್ರತಿಭಟನೆ ಮಾಡಿದ ದಿನದಂದು ಸರಕಾರದ ಸಂಬಳ ಸರಕಾರಕ್ಕೆ ವಾಪಸ್ಸು ಮಾಡಿ ಯಾಕೆಂದರೆ ನಿಮ್ಮಗೆ ಸಂಬಳ ಬರುವುದು ಜನರ ಸೇವೆ ಮಾಡುವುದಕ್ಕೆ ,ಪ್ರತಿಭಟನೆ ಮಾಡುವುದಕ್ಕೆ ಅಲ್ಲ

ಪೊಲೀಸ್ ಇಲಾಖೆ ಕೂಡಲೇ ಸರಕಾರದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತ ನಾನು  ಕೂಡ ಒತ್ತಾಯಿಸುತ್ತೇನೆ,

ತಹಶೀಲ್ದಾರ ಕಚೇರಿ ಬಂದ್

ತಹಶಿಲ್ದಾರ ಮೇಲೆ ಹಲ್ಲೆ ಖಂಡಿಸಿ ತಹಶೀಲ್ದಾರ ಕಚೇರಿಯಲ್ಲಿನ ವಿವಿಧ ಇಲಾಖೆಗಳ ಸಿಬ್ಬಂದಿಗಳು ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಮೇಲೆ ಸಿಬ್ಬಂದಿಗಳ ಗತಿ ಏನು ಎಂದು ಸಿಬ್ಬಂದಿಗಳು ಕೇಳುತ್ತಿದ್ದಾರೆ. ಕೂಡಲೇ ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ನ್ಯಾಯ ದೊರೆಯುವಂತೆ ಆಗಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ಚಿಟಗುಪ್ಪ ಕಂದಾಯ ಸಿಬ್ಬಂದಿಗಳ ಪ್ರತಿಭಟನೆ.

ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಚಿಟಗುಪ್ಪ ತಾಲೂಕಿನ ಕಂದಾಯ ಸಿಬ್ಬಂದಿಗಳು ಕಾರ್ಯಕಲಾಪಗಳು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.

ಔರಾದನಲ್ಲಿ ನಡೆದ ಸುದ್ದಿ:

ಹುಮನಾಬಾದ್ ತಹಶೀಲ್ದಾರ್ ಮೆಲೆ ನಡೆದಹಲ್ಲೆಯನ್ನು ಖಂಡಿಸಿ ಔರಾದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ವರ್ಗ ಹಾಗೂ ಸರಕಾರಿ ನೌಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಂದ ಪ್ರತಿಭಟನೆ ಮಾಡಲಾಯಿತು ತಕ್ಷಣ ಆರೋಪಿ ಬಂಧಿಸಬೇಕೆಂದು ಮಾನ್ಯ ಔರಾದ  ತಹಶೀಲ್ದಾರ್ ಮುಖಾಂತರ  ಮಾನ್ಯ ಮುಖ್ಯ ಮಂತ್ರಿಗಳಿಗೆ ಮತ್ತು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ, ಪದಾಧಿಕಾರಿಗಳಾದ ಕಾಶಿನಾಥ್ ರಾಠೋಡ, ಬಾಲಾಜಿ ನಾಯ್ಕೊಡೆ, ರವಿ, ಸೂರ್ಯವಂಶಿ, ಕಂದಾಯ ಇಲಾಖೆಯ ಸಂಘದ ಪದಾಧಿಕಾರಿಗಳಾದ ಮಂಜುನಾಥ ಗೌರಾ, ವರಪ್ರಸಾದ, ಶ್ರೀದೇವಿ ನವಾಡೆ, ನಾಮದೇವ ಮೇತ್ರೆ, ರವಿಕಾಂತ ಬಂಬುಳ್ಗೆ, ಅನ್ವರ್, ಪ್ರಭಾಕರ, ಸಚೀನ, ಕ್ರಾಂತಿ, ಜ್ಞಾನೇಶ್ವರ, ಪಂಡಿತ್ ಶಿಂದೆ, ಬಾಬುರಾವ್ ಮುಂತಾದವರು ಉಪಸ್ಥಿತರಿದ್ದರು

ಈ ಸುದ್ದಿ ಬರೆದ ನನ್ನಗೆ ಬದರಿಕೆ ಬರುವುದು ಸರ್ವ ಸಾಮಾನ್ಯ ನಾನು ಯಾವುದೇ ತಪ್ಪು ಮಾಹಿತಿ ಹಾಕಿಲ್ಲ ಕಾನೂನಿನ ಅಡಿಯಲ್ಲಿ ಸುದ್ದಿ ಬರೆದಿದ್ದೇನೆ

ನನ್ನಗೆ ಸಹಾಯ ಮತ್ತು ಸಹಕಾರ ಮಾಡುವರು ಕೂಡಲೇ ಸಂಪರ್ಕ ಮಾಡಿ