Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ ಪಟ್ಟಣದ ವಾರ್ಡ್ ನಂ. 14 ರಲ್ಲಿ ಸ್ವಚ್ಛತೆಯಿಲ್ಲದ ಕಾರಣ ಸಾರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರ್ಡಿನಲ್ಲಿ ಚರಂಡಿ ಇಲ್ಲದೆ ರಸ್ತೆ ಮೇಲೆ ನಿಂತಿರುವ ನೀರು
ರಸ್ತೆ ಮೇಲೆ ನೀರು ನಿಂತಿರುವ ಕಾರಣ ಮೊಟರ್ ಸೈಕಲ್‌ ಹೋಗುವಾಗ ಸ್ಥಳಿಯರು ಬಿದ್ದಿರುವುದು ಕಂಡುಬಂದಿದೆ ಶಾಲೆಗೆ ಹೊಗುವ ಮಕ್ಕಳಿಗೆ ಸಮಸ್ಯ ಉಂಟಾಗುತ್ತಿದೆ.

ಸೂಮಾರು ವರ್ಷಗಳಿಂದ ಚರಂಡಿ ಮಾಡಿಸುವಂತೆ ಮನವಿ ಮಾಡಿದರು ಉಡಾಫೆ ಉತ್ತರ ನಿಡುತ್ತಿದ್ದಾರೆ ಅಧಿಕಾರಿಗಳು ಅನ್ನುತಾರೆ ಸ್ಥಳೀಯರು.

ಸ್ವಚ್ಚ ಭಾರತ ಹೆಸರಿನಲ್ಲಿ ಸಾವಿರಾರು ಕೋಟಿ ಹಣ ಬಂದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಸ ಸೇರಿದಂತೆ ಎಲ್ಲರ ಮನೆಯ ಬಚ್ಚಲಗುಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆಯೇ ಹಾಳುತಿಪ್ಪೆಗುಂಡಿಯಂತೆ ಆಗಿದೆ.

ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ಸ್ವಚ್ಛಗೊಳಿಸಿ ಚರಂಡಿ ವ್ಯವಸ್ಥೆ ಮಾಡಿಸಬೇಕೆಂದು ಸ್ಥಳೀಯರಾದ ರವಿ ಸ್ವಾಮಿ ,ಪ್ರಭು ಸ್ವಾಮಿ, ರಮೇಶ ವಾಘಮೊರೆ,ವೈಭವ ದ್ಯಾಡೆ,ರಾಜಕೂಮಾರ ಹಲಮಡಗೆ,ಮೊಶಿನ ಸೈಯದ್,ಮಹಿಮುದ್ ಚೌದರಿ, ಒತ್ತಾಯಿಸಿದ್ದಾರೆ.