Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

 

ಔರಾದ

ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ ಚವ್ಹಾಣ ಅವರು ಸರಕಾರದ ಆದೇಶ ದಂತೆ 15 ವರ್ಷಗಳ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿ ಮುಖ್ಯಮಂತ್ರಿ ಅವರ ಆದೇಶದಂತೆ ಪ್ರತಿ ಶಾಲೆಯಲ್ಲಿ 15 ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿ ಗಳು ಲಸಿಕೆ ಪಡೆದುಕ್ಕೊಳ್ಳಬೇಕು ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸುವಲ್ಲಿ ಮುಂದಾಗಬೇಕು ಯಾವುದೇ ಭಯ ಬೇಡ ತಾಲೂಕಿನ ಲ್ಲಿ ಒಟ್ಟು 11 ಸಾವಿರ ವಿದ್ಯಾರ್ಥಿಗಳಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ಕೊಡುವಲ್ಲಿ ಶಾಲೆಯ ಮುಖ್ಯಗುರುಗಳು ಹಾಗೂ ಇಲಾಖೆ ಮುಂದಾಗಬೇಕು.ಆರೋಗ್ಯ ಅಧಿಕಾರಿಗಳು ಒಂದು ವಾರದಲ್ಲಿ ಔರಾದ ತಾಲೂಕಿನ ವಿದ್ಯಾರ್ಥಿಗಳ ಲಸಿಕೆ ಪೂರ್ಣಗೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.ಅದೇರೀತಿ ಶಾಲೆಗೆ ಬಾರದೆ ಇರುವ ಮಕ್ಕಳಿಗೆ ಅವರ ಮನೆಗೆ ಹೋಗಿ ಲಸಿಕೆ ಕೊಡುವಲ್ಲಿ ಯಶಸ್ವಿಯಾಗಿ ಬೇಕು ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ವಿ ಜಿ ರೆಡ್ಡಿ,ತಾಲೂಕು ದಂಡಾಧಿಕಾರಿ ಅರುಣಕೂಮಾರ ಕುಲಕರ್ಣಿ,ತಾಲೂಕು ವೈದ್ಯ ಅಧಿಕಾರಿ ಡಾ ಗಾಯತ್ರಿ ,ಡಾ ಸಿಧಾರ್ಥ,ತಾಲೂಕು ಪಂಚಾಯತ್ ಅಧಿಕಾರಿ ಮಾಣಿಕರಾವ ಪಾಟೀಲ್, ಶಿಕ್ಷಣ ಅಧಿಕಾರಿ ಎಸ್ ಎಸ್ ನಗನೂರ,ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ,ಸಂಗೀತಾ ಬಿರಾದಾರ,ವಿಟ್ಟಲ್ ಘಾಟೆ,ರವಿ ಸೂಕೂಮಾರ,ಶಾಲೆಯ ಮುಖ್ಯಗುರುಗಳಾದ ಧೂಳಪ್ಪಾ ಮಾಳನೂರ,ಶಾಲೆಯ ಸಂಬಂಧಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.