Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಹೊರಗಡೆ ಉರ್ದು ಬೋರ್ಡ್ ಹಾಕಿ ಕನ್ನಡ ಕಲಿಸಿದ ಹೆಗ್ಗಳಿಕೆ ಚನ್ನಬಸವ ಪಟ್ಟದ್ದೆವರದು

ಗಡಿ ಉತ್ಸವದಲ್ಲಿ ರಾಜ್ಯ ಅದ್ಯಕ್ಷ ನಾರಾಯಣ ಗೌಡ

ಪೂಜ್ಯ ಡಾ ಚನ್ನಬಸವ ಪಟ್ಟದೇವರ 132 ನೇ ಜಯಂತಿ ಹಾಗೂ
ತಾಲೂಕು ಗಡಿ ಕನ್ನಡೊತ್ಸವ ಕಾರ್ಯಕ್ರಮ

ಔರಾದ
ಔರಾದ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪೂಜ್ಯ ಮ ಘ ಚ ಚನ್ನಬಸವ ಪಟ್ಟದ್ದೆವರ ಜಯಂತಿ ಹಾಗೂ ಗಡಿ ಕನ್ನಡೊತ್ಸವ ಕಾರ್ಯರಮವು ಆರಾಧ್ಯ ದೈವ ಅಮರೇಶ್ವರ ದೇವಸ್ಥಾನ ದಿಂದ ಮೆರವಣಿಗೆಗೆ ಚಾಲನೆ ನೀಡಿದ ಪಟ್ಟಣ ಪಂಚಾಯತ್ ಅದ್ಯಕ್ಷೆ ಅಂಬಿಕಾ ಕೇರಬಾ ಪವಾರ ಹಾಗೂ ಮೀನಾಕ್ಷಿ ಹಲಬರ್ಗೆ ಮತ್ತು ರಂವಿಂದ್ರ ಸ್ವಾಮಿ ಹಾಗೂ ಅನೇಕ ಗಣ್ಯರು ಪೂಜ್ಯರ ಹಾಗೂ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಡೊಳ್ಳು ಭಾರಿಸುವ ಮುಲಕ ಮೇರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಅನೇಕ ಕಲಾವಿದರು ತಮ್ಮ ಕಲೇಯನ್ನು ಪ್ರದರ್ಶಿಸಿ ಯುವಕರು ಡಿಜೆ ಹಾಡಿನ ಮುಲಕ ಕುಣಿದು ಕುಪ್ಪಳಿಸಿ ಬಸವೇಶ್ವರ ಚೌಕ ಮಾರ್ಗವಾಗಿ ಕನ್ನಡಾಂಬೆ ವೃತ್ತ ದಿಂದ ಡಾ ಗುರುಪಾದಪ್ಪಾ ಕಲ್ಯಾಣ ಮಂಟಪಕ್ಕೆ ತಲುಪಿದರು.
ಕಾರ್ಯಕ್ರಮದ ಉದ್ಘಾಟನೆಯು ಶ್ರೀ ಈಶ್ವರ ಖಂಡ್ರೆ ಕಾರ್ಯದ್ಯಕ್ಷರು ಕೆ ಪಿ ಸಿ ಸಿ ಹಾಗೂ ಶಾಸಕರು ಭಾಲ್ಕಿ ನರೆವೆರಿಸಿ ಮಾತನಾಡಿದ ಅವರು ಇಂದು ನಮ್ಮ ಗಡಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕ್ರಮದ ಜೊತೆಯಲ್ಲಿ ನಮ್ಮ ನಾಡಿನ ನಡೆದಾಡುವ ದೇವರ ಜಯಂತಿ ಆಚರಿಸುತ್ತಿರುವದು ಸಂತೋಷದ ವಿಷಯ ವಾಗಿದೆ. ನಾವೆಲ್ಲರು ದೇವರನ್ನು ನೊಡಿಲ್ಲ ದೇವರಂತೆ ಪೂಜ್ಯರನ್ನು ನೊಡಿದ್ದೆವೆ ಅವರೆ ನಮ್ಮ ಡಾ ಮ ಘ ಚ ಚನ್ನಬಸವ ಪಟ್ಟದ್ದೆವರು. ಈ ಭಾಗದಲ್ಲಿ ಮರಾಠಿ ಪ್ರಭಾವವಿತ್ತು ಆದರೆ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಶಾಲೆ ನಡೆಸಿದ ಹೆಗ್ಗಳಿಕೆ ನಮ್ಮ ಭಾಲ್ಕಿ ಶ್ರೀ ಪೂಜ್ಯರದಾಗಿತ್ತು.ಬಸವ ತತ್ವದ ಅನುಯಾಯಿಗಳಾಗಿ ಕಲ್ಯಾಣ ಕ್ರಾಂತಿಯ ನಾಯಕರು ದಾಸೋಹ ಪತಿ ಡಾ ಚನ್ನಬಸವ ಪಟ್ಟದ್ದೆವರಿಗೆ ಸಲ್ಲುತ್ತದೆ. ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು 20 ನೇ ಶತಮಾನದಲ್ಲಿ ಶಿಕ್ಷಣದ ಕ್ರಾಂತಿಯ ಮೂಡು ಛಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಅವರು ತೋರಿಸಿ ಕೊಟ್ಟಂತ ಕಾಯಕ ಇಂದಿನ ಪೂಜ್ಯ ಬಸವಲಿಂಗ ಪಟ್ಟದ್ದೆವರು ಮಾಡುತ್ತಿದ್ದಾರೆ.

ಜೊತೆಯಲ್ಲಿ ಈ ಭಾಗದಲ್ಲಿ ನಾವುಗಳು ಕನ್ನಡ ಉಳಿಸುವಂತ ಬೆಳೆಸುವಂತ ಕೇಲಸ ನಾವು ಮಾಡಬೇಕಾಗಿದೆ.ಈ ಭಾಗಕ್ಕೆ ಸರ್ಕಾರ ಸಂಪೂರ್ಣ ಕಡೆಗಣಿಸುತ್ತಿದೆ ನಮ್ಮ ಬೀದರ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗಬೆಕಾಗಿದೆ.ಕನ್ನಡ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳು ಭರ್ತಿಯಾಗಬೇಕು ಅದು ಯಾವಾಗ ಕಾಯ್ದುನೊಡಬೆಕಾಗಿದೆ.ಇವತ್ತು ಕನ್ನಡ ಭಾಷೆಯ ಇತಿಹಾಸ ವಿದೆ ಅದನ್ನು ತಿಳಿದುಕೊಳ್ಳೊಣ ಗಡಿಭಾಗದವರು ಇದರಂತ ಸರಳ ಭಾಷೆ ಯಾವುದು ಅಲ್ಲ.ನಾಮಕೆ ವಾಸ್ತೆ ಅನ್ನುವಹಾಗೆ ಮಹಾಜನ್ ವರದಿ ಅನುಷ್ಟಾನ ಗೊಂಡಿದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಗಲಾಟೆಗೆ ಕೈತಬ್ಬುತ್ತಿದೆ.
ಅದೇರೀತಿ ಕಾರ್ಯಕ್ರಮದ ಅದ್ಯಕ್ಷರಾದ ಟಿ ಎನ್ ನಾರಯಣ ಗೌಡ ಮಾತನಾಡಿ ಈ ಗಡಿನಾಡು ಉತ್ಸವದಲ್ಲಿ ಬಂದಂತವರು ಯಾರೆ ಇರಲಿ ಅವರು ಕನ್ನಡದವನಾಗಿರಬೇಕು ನಮ್ಮ ಭಾಷೆ ಕಲಿಬೇಕು ನಮ್ಮ ಭಾಷೆಗೆ ಗೌರವಿಸಬೇಕು ನಮ್ಮ ಭಾಷೆ ಬಗ್ಗೆ ಪುಂಡಾಟಿಕೆ ಮಾಡಿದ್ದೆ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಇತ್ತಿಚಿಗೆ ನಡೆದ ಬೆಳಗಾವಿಯಲ್ಲಿ ನಡೆದ ಎಮ್ ಇ ಎಸ್ ಪುಂಡರಿಗೆ ಈ ವೇದಿಕೆ ಮೂಲಕ ಎಚ್ಚರಿಕೆ ನೀಡುತ್ತೆನೆ ನಿಮ್ಮ ಯಾವುದೆ ಗೂಂಡಾ ವರ್ತನೆ ಹಾಗೂ ಪುಂಡಾಟಿಕೆಗೆ ಸಹಿಸಲ್ಲ ಬೆಳಗಾವಿ ಕರ್ನಾಟಕದ್ದೆ ಕರ್ನಾಟಕದಲ್ಲಿಯೇ ಇರುತ್ತದೆ. 25 ವರ್ಷ ಯಾವ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಕನ್ನಡಿಗರ ಪಾಲಿಗೆ ತರುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಬಂತು.25 ವರ್ಷಗಳ ಕಾಲ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌ ಮಾಡುವ ಕೀರ್ತಿ ಕ ರ ವೇ ಸಲ್ಲುತ್ತದೆ.ಮಹಾರಾಷ್ಟ್ರ ಎಕಿಕರಣ ಸಮಿತಿಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಆದರೆ ಸರ್ಕಾರ ಮಾಡಲಿಲ್ಲ ಇವತ್ತು ಆ ಎಮ್ ಇ ಎಸ್ ಪುಂಡರು ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಡುವಂತ ಕೇಲಸದಲ್ಲಿ ತೊಡಗಿದ್ದಾರೆ.
1999 ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದಲ್ಲಿ ಉದಯವಾಗದೆ ಇದ್ದಲ್ಲಿ ಇಂದು ಕರ್ನಾಟಕ ಪೂರ್ತಿ ಅವರ ವಶಕ್ಕೆ ಪಡೆಯುವದರಲ್ಲಿ ಸಂಶಯವಿಲ್ಲ ಎಂದರು. ಮಾನ್ಯ ಪಶುಸಂಗೋಪನೆ ಸಚಿವರಿಗೆ ಈ ವೇದಿಕೆ ಮೂಲಕ ಎಚ್ಚರಿಕೆ ನಿಡುತ್ತಿದ್ದೆನೆ ಕನ್ನಡ ಪರ ಹೊರಾಟಗಾರರಿಗೆ ಜೈಲು ತೊರಿಸುವದು ಸರಿಅಲ್ಲ ನಾನು ಸಹಿಸೊದಿಲ್ಲ ಅಂತಹುದೇನಾದರು ನಮ್ಮ ಕಾರ್ಯಕರ್ತ ಮೇಲೆ ನಡೆದರೆ ನಿವು ವಿಧಾನ ಸೌಧಕ್ಕೆ ಬರುವದು ನಿಲ್ಲಿಸಬೇಕಾಗುತ್ತೆ ಎಚ್ಚರ ಎಂದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ,ಹಣೆಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯರು,ಬಸವಲಿಂಗ ಅವಧುತರು,ಹಾಗೂ ಗುರುಬಸವ ಪಟ್ಟದ್ದೆವರು ತಮ್ಮ ಅಶಿರವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಭಿಮರಾವ ಪಾಟೀಲ್, ಕ ರ ವೇ ರಾಜ್ಯ ಉಪಾದ್ಯಕ್ಷೆ ಅಶ್ವಿನಿ ಗೌಡ,ರಂವಿಂದ್ರ ಸ್ವಾಮಿ ,ದೀಪಕ ಪಾಟೀಲ್ ,ಸಂಜುಕೂಮಾರ ಜುಮ್ಮಾ,ಶರಣಪ್ಪಾ ಪಾಟೀಲ್, ತಾಲೂಕು ಘಟಕ ಅದ್ಯಕ್ಷ ರಾಜಕೂಮಾರ ಎಡವೆ,ರಾಮಣ್ಣಾ ವಡಿಯಾರ,ಡಾ ಫಯಾಜ ಅಲಿ,ರತಿಕಾಂತ ಮಜಗೆ,ಶಂಕು ನಿಸ್ಪತೆ, ಅನೀಲ ಹೇಡೆ,ಅನೇಕ ಕನ್ನಡಾಭಿಮಾನಿಗಳು ಕಲಾತಂಡಗಳು ಉಪಸ್ಥಿತರಿದ್ದರು.