Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

 

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲಗೆ ಶ್ರದ್ಧಾಂಜಲಿ ಸಲ್ಲಿಕೆ

ಔರಾದ : ನಾಡಿನ ಹಿರಿಯ ಸಾಹಿತಿ, ಸಮಾಜವಾದಿ ಚಿಂತಕ ಹಾಗೂ ಸಾಹಿತ್ಯಿಕ ಹೋರಾಟಗಾರ ಪ್ರೊ. ಚಂದ್ರಶೇಖರ್ ಪಾಟೀಲ್(ಚಂಪಾ.೮೨) ಅವರ ನಿಧನಕ್ಕೆ ಔರಾದ ಕನ್ನಡ ಸಾಹಿತ್ಯ ಪರಿಷತ್ ಬಳಗದ ವತಿಯಿಂದ ಕನ್ನಡ ಭವನದಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಕೋಮುವಾದ-ಜಾತಿವಾದ ಅಂಧಶ್ರದ್ಧೆ ಹಾಗೂ ಬೇರೆಲ್ಲ ಪ್ರತಿಗಾಮಿ ಶಕ್ತಿಗಳ ವಿರುದ್ಧ ದಿಟ್ಟತನದಲ್ಲಿ ಪರಿಣಾಮಕಾರಿಯಾಗಿ ಧ್ವನಿಯೆತ್ತಿದ ನಾಡಿನ ಕವಿ ಪ್ರೊ. ಚಂದ್ರಶೇಖರ ಪಾಟೀಲ್(ಚಂಪಾ) ಅವರ ನಿಧನ ನಾಡಿಗಾದ ಅಪಾರ ನಷ್ಟ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ಮೂಲಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಿವಾನ ಉದಗಿರೆ, ವಿರೇಶ ಅಲ್ಮಾಜೆ, ಜಗನ್ನಾಥ್ ದೇಶಮುಖ, ಅಂಬಾದಾಸ ನೆಳಗೆ,ರಮೇಶ ವಾಘಮೊಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.