Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ಎಬಿವಿಪಿ ವತಿಯಿಂದ ಬಸವೇಶ್ವರ ಡಿ ಎಡ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಆಚರಣೆ*

ಔರಾದ ಪಟ್ಟಣದ ಬಸವ ಗುರುಕುಲ ಸಂಯುಕ್ತಾಶ್ರಯದಲ್ಲಿ ಎಬಿವಿಪಿ ಹಾಗೂ ಬಸವೇಶ್ವರ ಡಿ ಎಡ್ ಕಾಲೇಜು ವತಿಯಿಂದ ಸ್ವಾಮಿ ವುವೆಕಾನಂದರ ಜಯಂತಿ ಆಚರಿಸಲಾಯಿತು. ಉದ್ಘಾಟಕರಾಗಿ ಸಂಸ್ಥೆಯ ಕಾರ್ಯದರ್ಶಿ ಮನ್ಮಥಪ್ಪಾ ಹುಗ್ಗೆ ಉದ್ಘಾಟಿಸಿ ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಎಬಿವಿಪಿ ನಗರ ಅದ್ಯಕ್ಷ ಡಿ ಡಿ ಬೊಳೆಗಾವೆ ಮಾತನಾಡಿ ಸ್ವಾಮಿ ವಿವೇಕಾನಂದರು 1863 ಜನೆವರಿ 12 ರಂದು ಜನಿಸಿದರು ಅವರು ಚಿಕ್ಕ ವಯಸ್ಸಿನಲ್ಲಿಯೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದುತ್ವದ ಬಿಜ ಬಿತ್ತಿದ ಕೀರ್ತಿ ವಿವೇಕರಿಗೆ ಸಲ್ಲುತ್ತದೆ.ಅದೇರಿತಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯು ಸ್ವಾಮಿ ವಿವೇಕಾನಂದರ ಆದರ್ಶದಲ್ಲಿ ಬೆಳೆದು ಜ್ಞಾನ,ಶೀಲ,ಏಕತೆ ಮೈಗೂಡಿಸಿಕೊಂಡು ಇವತ್ತು 75 ವರ್ಷಗಳಿಂದ ರಾಷ್ಟಮಟ್ಟದಲ್ಲಿ ಏಕೈಕ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಸಂಪನ್ಮೂಲ ಶಿಕ್ಷಕ ಡಾ ಶಾಲಿವಾನ ಉದಗಿರೆ ಮಾತನಾಡುತ್ತ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು.ನಿರ್ಭಯತೆಯ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗೆ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಣಿತರಾಗಿದ್ದರು.ಇವರು ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ್ದು ಇಡಿ ಸಮ್ಮೇಳನದ ಲ್ಲಿ ಭಾಗಿಯಾಗಿದ್ದ 7 ಸಾವಿರ ಜನರನ್ನು ಬೆಚ್ಚಿ ಬಿಳಿಸಿತ್ತು.ಅಮೇರಿಕದ ಸಹೋದರ-ಸಹೋದರಿಯರೆ ಅಂದಕೂಡಲೆ ಸಮ್ಮೇಳನದಲ್ಲಿ ಆ ವಾಕ್ಯ ಚಿರಸ್ಮರಣೀಯ ವಾಗಿತ್ತು. ಈ ಸಮ್ಮೇಳನಕ್ಕೆ ಭಾಗಿಯಾಗಿದ್ದ ಜಗತ್ತಿನ ಮಹಾನ್ ವ್ಯಕ್ತಿಗಳು ಇವರ ಉಪನ್ಯಾಸ ಕ್ಕೆ ಅಣಿಯಾಗಿ ಇವರ ವ್ಯಕ್ತಿತ್ವವನ್ನು ಕೊಂಡಾಡಿದರು.ಆದರೆ ಆತಂಕದಲ್ಲಿದ್ದ ವಿವೇಕರು ತಮ್ಮ ಉಪನ್ಯಾಸದ ಸರದಿ ಬಂದಾಗ ಅವರು ಹಿಂದು ದೇವತೆ ಸರಸ್ವತಿಗೆ ನಮಸ್ಕರಿಸಿ ತಮ್ಮ ಭಾಷಣ ಆರಂಭಿಸಿದರು.ಆ ಸಂದರ್ಭದಲ್ಲಿ ಅವರು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದು ಧರ್ಮದ ಬಗೆಗೆ ಆಸಕ್ತಿ ಕೇರಳಿಸಿದರು ಇವರ 39 ವರ್ಷದ ಜೀವನ ಚರಿತ್ರೆ ಸಹ ವಿಸ್ತಾರವಾಗಿ ಡಾ ಶಾಲಿವಾನ ಉದಗಿರೆ ಉಪನ್ಯಾಸ ಮಂಡಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶರಣಪ್ಪಾ ನೌಬಾದೆ ಮಾತನಾಡಿದರು. ಅದೇರಿತಿ ವಿದ್ಯಾರ್ಥಿನಿಯರಾದ ಅಶ್ವಿನಿ ಸುರೆ ಸ್ವಾಗತಿಸಿದಳು ನಿಕಿತಾ ರೆಡ್ಡಿ ವಂದಿಸಿದಳು ಶಾಲೆಯ ಆಡಳಿತ ಅಧಿಕಾರಿ ಅಮರ ದ್ಯಾಡೆ ಉಪನ್ಯಾಸಕಿ ಸುರೇಖಾ ಡಿ, ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ,ಎಬಿವಿಪಿ ನಗರ ಕಾರ್ಯದರ್ಶಿ ನೌನಾಥ ಕೊಳಿ, ಅನೀಲ ಮೆತ್ರೆ,ಮಹಾದೇವ ಸಿಂಧೆ, ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.