Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

*ರಸ್ತೆ ಕಾಮಗಾರಿಕೆ ಚಾಲನೆ ನೀಡಲು ಸಚಿವರಿಗೆ ವಿದ್ಯಾರ್ಥಿಗಳಿಂದ ಮನವಿ*

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣರವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ರತ್ನದೀಪ್ ಕಸ್ತೂರೆ ಮಾತನಾಡಿ ನಮಗೆ ದಿನ ನಿತ್ಯ ಕಾಲೇಜು ಹೋಗಲು ಬಹಳಸಟ್ಟು ತೊಂದರೆಯಾಗುತ್ತಿದೆ ಟೆಂಡರ್ ಆಗಿ ಎರಡು ವರ್ಷ ಕಳೆದರು ಕಾಮಗಾರಿಕೆ ಚಾಲನೆ ಮಾಡಿಲ್ಲ ಏಕೆ? ಮಳೆಗಾಲ ದಂತ್ತು ಕಾಲೇಜು ಹೋಗಲು ಆಗುವುದೇ ಇಲ್ಲ ಅಷ್ಟು ಹದಗೆಟ್ಟ ರಸ್ತೆಯಾಗಿದೆ ದಯವಿಟ್ಟು ವಿದ್ಯಾರ್ಥಿಗಳ ನೋವು ಅರ್ಥಮಾಡಿಕೊಳ್ಳಿ ನಮಗೆ 15 ದಿವಸಗಳ ಒಳಗೆ ಕಾಮಗಾರಿಕೆ ಚಾಲನೆ ನೀಡಬೇಕು ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸ್ನೇಹಾ ರೆಡ್ಡಿ, ಕಾವ್ಯ ರಾಜಕುಮಾರ್,ಅಕ್ಷತಾ ಪಿಟ್ರೆ,ಪಾರ್ವತಿ, ಸಿಂಧೂ, ಪ್ರತೀಕ್ಷಾ, ಅಂಬಿಕಾ, ಪ್ರಿಯಾಂಕಾ, ದ್ಯಾನೇಶ್ವರ್, ರವಿರಾಜ್ ಉಪಸ್ಥಿತರಿದ್ದರು