Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಹೇಳಿಕೆಗೆ ಮಾತ್ರ ಶಿಕ್ಷಕರ ನೇಮಕಾತಿ.
ಔರಾದ್ : ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ಪ್ರತಿ ವರ್ಷ ನಡೆಯದೇ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಮಾನ್ಯ ಶಿಕ್ಷಣ ಸಚಿವರು ಶೀಘ್ರದಲ್ಲಿ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂಬ ಹೇಳಿಕೆ ಮಾತ್ರ ಆಗಿರುತ್ತದೆ. ವಯೋಮಿತಿ ಸಮಸ್ಯೆ ಹಲವು ವೃತ್ತಿ ಶಿಕ್ಷಣ ಪಡೆದ ಉದ್ಯೋಗಾಕಾಂಕ್ಷಿಗಳಿಗೆ ಕಾಡಲಾರಂಭಿಸಿದೆ ಸರ್ಕಾರ ಶೀಘ್ರವಾಗಿ ವಿಷಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಂಡು, ವಯೋಮಿತಿ ಮೀರುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ವೃತ್ತಿಪರ ಮತ್ತು ಪದವೀಧರರ ಸಂಘದ ರಾಜ್ಯ ಸಂಘಟನ ಕಾರ್ಯದರ್ಶಿ ರವಿ ಡೋಳೆ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ.ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವುದು ಕಂಡು ಬರುತ್ತಿದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿವಿಧ ವಿಷಯಗಳ ಶಿಕ್ಷಕರನ್ನು 2-3 ವರ್ಷಗಳಿಗೊಮ್ಮೆ ನೇಮಕಾತಿ ಮಾಡಿದರೂ ಇದರಲ್ಲಿ ಸುಮಾರು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲಾ. ವಿಜ್ಞಾನ, ಗಣಿತ,ಸಮಾಜ ವಿಜ್ಞಾನ, ಹಿಂದಿ ವಿಷಯ ಶಿಕ್ಷಕರ ನೇಮಕಾತಿಯೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಕಡ್ಡಾಯವಾಗಿ ಮಾಡಬೇಕಾಗಿದೆ. ದೈಹಿಕ ಶಿಕ್ಷಣ ತರಬೇತಿ ಪಡೆದ ಉದ್ಯೋಗಾಕಾಂಕ್ಷಿಗಳು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.ಇಂದೆಲ್ಲಾ ನಾಳೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡುತ್ತಾರೆ ಎಂದು ಸರ್ಕಾರಗಳನ್ನು ನಂಬಿ ತರಬೇತಿ ಪಡೆದವು ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಡಿ ಪಿ ಇಡಿ, ಬಿ ಪಿ ಇಡಿ, ಎಂ ಪಿ ಇಡಿ ಮುಗಿಸಿ ಕಡಿಮೆ ಸಂಬಳಕ್ಕೆ ತಮ್ಮ ಜೀವನ ಸವಿಯುತ್ತಿದ್ದಾರೆ. ವಯೋಮಿತಿ ಸಮಸ್ಯೆಯಿಂದ ದೈಹಿಕ ಶಿಕ್ಷಣ ತರಬೇತಿ ಪಡೆದ ಅವರು ಏನು ಮಾಡುವುದು ಎಂದು ಚಿಂತಾಜನಕ ಸ್ಥಿತಿ ಅನುಭವಿಸುವಂತಾಗಿದೆ. ಶಿಕ್ಷಣದಲ್ಲಿ ಪಠ್ಯಕ್ರಮವಾಗಿ ದೈಹಿಕ ಶಿಕ್ಷಣವನ್ನು ಸೇರಿಸಲಾಗಿದೆ.ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯೇ ಮಾಡಿಕೊಳ್ಳದಿದ್ದರೆ ಪಠ್ಯಕ್ರಮ ಯಾವ ರೀತಿ ಪ್ರಯೋಜನವಾಗಲಿದೆ ? ಒಂದು ದೇಶದ ರಾಜ್ಯದ ಮಕ್ಕಳ ಹಾಗೂ ಜನರ ಆರೋಗ್ಯ ರಕ್ಷಣೆ ನೀಡುವುದು ಆ ದೇಶದಲ್ಲಿ ಆಡಳಿತ ನಡೆಸುವ ಸರ್ಕಾರಗಳ ಕರ್ತವ್ಯವಾಗಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಗೆ ಹಾಗೂ ಅವರ ಸರ್ವಾಂಗೀಣ ಬೆಳವಣಿಗೆಗೆ ದೈಹಿಕ ಶಿಕ್ಷಣ ಅತ್ಯಗತ್ಯವಾಗಿದೆ. ಒಂದು ಕಡೆ ಶಾಲೆಯಲ್ಲಿ ಪಠ್ಯಕ್ರಮ ಇದ್ದರೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡದೇ ಮಕ್ಕಳಿಗೆ ದೈಹಿಕ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಂತಾಗಿದೆ. ಇನ್ನೊಂದು ಕಡೆ ಸಾವಿರಾರು ಸಂಖ್ಯೆಯಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದು ಉದ್ಯೋಗಕ್ಕಾಗಿ ಸಾವಿರಾರು ಯುವಕರು ಪರದಾಡುವಂತಾಗಿದೆ. ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರನ್ನು ಪ್ರತಿವರ್ಷ ನೇಮಕಾತಿ ಮಾಡಿಕೊಳ್ಳುವ ತೀರ್ಮಾನ ಮಾಡಬೇಕಾಗಿದೆ. ಒಂದು ದೇಶದ ಪ್ರಗತಿ ಆ ದೇಶದ ಮಕ್ಕಳ ಹಾಗೂ ಜನರ ಆರೋಗ್ಯದ ಮಟ್ಟದ ಮೇಲೆ ಅವಲಂಬಿಸಿದೆ. ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿ ಬೆಳವಣಿಗೆ ಕಾಣಬೇಕಾದರೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಮುಂದಾಗಬೇಕಾಗಿದೆ ಎಂದು ರವಿ ಡೋಳೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.