Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಪ್ರಯಾಣಿಕ ಹಾಗೂ KSRTC ಚಾಲಕನ ಮದ್ಯ ಮಾರಾಮಾರಿ

ಔರಾದ ಘಟಕದ ಚಾಲಕ ಬಾಪುರಾವ ಬ್ಯಾಚ ಸಂಖೆ 1679 ಔರಾದ – ಉದಗೀರ್ ಮಾರ್ಗದಿಂದ ಬರುವ ಸಂದರ್ಭದಲ್ಲಿ ಮುರ್ಕಿ ಬಳಿ ಮಾಳೆಗಾಂವ ತಾಂಡದ ವ್ಯಕ್ತಿ ಚಾಲಕನಿಗೆ ಬಸ್ಸ ನಿಲ್ಲಿಸುವಂತೆ ಕರೆಮಾಡಿದ್ದು ಚಾಲಕ ನಿಲ್ಲಿಸುವ ಸಂದರ್ಭದಲ್ಲಿ ಚಾಲಕನ ಮೇಲೆ ಹಲ್ಲೆಮಾಡಿರುವ ಘಟನೆ ಮುರ್ಕಿ ಗ್ರಾಮದ ಬಳಿ ನಡೆದಿದೆ.
ಚಾಲಕನಿಗೆ ಸಾರ್ವಜನಿಕ ಆಸ್ಪತ್ರೆ ಔರಾದನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಹಾಗೂ ಹಲ್ಲೆ ಮಾಡಿರುವ ವ್ಯಕ್ತಿಯ ನಿಖರವಾದ ಮಾಹಿತಿ ಸಿಕ್ಕಿಲ್ಲ ಎಂದು ಘಟಕ ವ್ಯವಸ್ಥಾಪಕ ನಯುಮ್ ಪಟೇಲ್ ತಿಳಿಸಿದರು.
ನಮ್ಮ ಚಾಲಕರ ಹಾಗೂ ನಿರ್ವಾಹಕರ ಮೇಲೆ ಈ ರೀತಿ ಹಲ್ಲೆಗಳು ನಡೆದರೆ ನಾವು ಸಹಿಸುವುದಿಲ್ಲ ಬಸ್ಸ ಘಟಕದ ಎದುರು ಬಸ್ಸುಗಳನ್ನು ಬಂದಮಾಡಿ ಹೋರಾಟ ಮಾಡಲಾಗುತ್ತದೆ ಎಂದು ಸಿಬ್ಬಂದಿ ನಾಗನಾಥ ಪಾಟೀಲ್ ತಿಳಿಸಿದ್ದಾರೆ.