Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ಔರಾದನಲ್ಲಿ ನಡೆ ದಾಡುವ ದೇವರ ಪುಣ್ಯ ಸ್ಮರಣೆ ಆಚರಣೆ*

ಔರಾದ ಪಟ್ಟಣದ ಎಪಿಎಂಸಿ ಬಸ್ಸ ನಿಲ್ದಾಣದಲ್ಲಿ ಸಿಧಗಂಗಾ ಮಠದ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ತ್ರಿವಿಧ ದಾಸೋಹಿ ನಡೆದಾಡುವ ದೇವರು ಲಿಂಗೈಕ್ಯೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 3 ನೇ ಪುಣ್ಯ ಸ್ಮರಣೆಯನ್ನು ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಣ್ಯ ಸ್ಮರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಣ ಅಧಿಕಾರಿ ಎಸ್ ಎಸ್ ನಗನೂರ ಮಾತನಾಡಿ ತುಮಕೂರು ಮಠದಲ್ಲಿ ಕಲಿತ ವಿದ್ಯಾರ್ಥಿಗಳು ಇವತ್ತು ರಾಜ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಲಸ ನಿರ್ವಹಿಸುತ್ತಿದ್ದಾರೆ.ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಿದ್ದಗಂಗಾ ಮಠದಲ್ಲಿ ಕಲಿತ ವಿದ್ಯಾರ್ಥಿಗಳು ಮಠದ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪಿಸಿ ಪೂಜ್ಯರ ಪುಣ್ಯ ಸ್ಮರಣೆ, ಜನ್ಮದಿನಾಚರಣೆ ಹಾಗೂ ದಾಸೋಹ ಮಾಡುತ್ತಿರುವದು ಸಂತೋಷ ವಿಷಯ ಎಂದು ಹೇಳಿದರು.ಅದೇ ಸಂದರ್ಭದಲ್ಲಿ ಮಠದ ಹಳೆಯ ವಿದ್ಯಾರ್ಥಿ ಶಿಕ್ಷಕರ ಸಂಘದ ತಾಲೂಕು ಅದ್ಯಕ್ಷ ಗಜಾನಂದ ಮಳ್ಳಾ ಮಾತನಾಡಿ ಕೊವಿಡ್ ಇರುವ ಕಾರಣ ಸರಳವಾಗಿ ಪುಣ್ಯ ಸ್ಮರಣೆ ಮಾಡಲಾಗಿದೆ ಮುಂದೆ ಪೂಜ್ಯರ ಜನ್ಮದಿವನ್ನು ಅದ್ದೂರಿಯಾಗಿ ಶ್ರೀ ಮಠದ ಹಳೆಯ ವಿದ್ಯಾರ್ಥಿ ಸಂಘ ಔರಾದ ವತಿಯಿಂದ ದಾಸೋಹ ವ್ಯವಸ್ತೆ ಮಾಡಿ ಆಚರಿಸಲಾಗುತ್ತದೆ ಎಂದರು.
ಪೂಜ್ಯರು ಲಿಂಗೈಕ್ಯರಾದ ಕೂಡಲೇ ಕೊವಿಡ್ ಜಾರಿಯಾಯಿತು ಇಡೀ ರಾಜ್ಯವೆ ತಲ್ಬಣವಾಯಿತು ಇಂದು ಪೂಜ್ಯರು ನಮ್ಮ ನಿಮ್ಮ ಜೊತೆಯಲ್ಲಿ ಇದ್ದರೆ ಇವತ್ತು ಕೊವಿಡ್ ಬರುತಿಲ್ಲ ಅನ್ನಿಸುತ್ತದೆ ಎಂದು ಶ್ರೀ ಮಠದ ಹಳೆಯ ವಿದ್ಯಾರ್ಥಿ ಸೂರ್ಯಕಾಂತ ಎಕಲಾರ ನುಡಿದರು. ಈ ಸಂದರ್ಭದಲ್ಲಿ ತಾಲೂಕು ಕಸಾಪ ನಿಕಟಪೂರ್ವ ಅದ್ಯಕ್ಷ ಜಗನಾಥ ಮುಲಗೆ, ಶಿಕ್ಷಕ ಅಮೃತರಾವ ಬಿರಾದಾರ,ಮಲ್ಲಿಕಾರ್ಜುನ ಟಂಕಸಾಲೆ,ಬಾಲಾಜಿ ಅಮರವಾಡಿ,ಕೇರಬಾ ಪವಾರ, ಅಶೋಕ ಶೆಂಬೆಳ್ಳಿ, ಶ್ರೀಕಾಂತ ಚಿದ್ರೆ, ಶ್ರೀ ಮಠದ ಹಳೆಯ ವಿದ್ಯಾರ್ಥಿಗಳಾದ ಗಜಾನಂದ ಮಳ್ಳಾ,ಕೈಲಾಸಪತಿ ಕೇದಾರೆ,ಮಾಹಾದೇವ ಚೀಟಗಿರೆ,ಸೂರ್ಯಕಾಂತ ಎಕಲಾರ,ರಾಜಕೂಮಾರ ಮಳ್ಳೆ,ಮಹೇಶ ಎಂನಗುಂದಾ,ಸಚಿನ್ ಚಿದ್ರೆ,ಗಣಪತಿ ಚೊಪಡೆ ಅನೇಕರು ಉಪಸ್ಥಿತರಿದ್ದರು.