Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

‘ಕಠಿಣ ವಿಷಯ ಬಹು ಆಸಕ್ತಿಯುತ – ಮನೋಹರ್ ಬಿರಾದರ್’

’10ನೇ ತರಗತಿ ವಿದ್ಯಾರ್ಥಿಗಳು ಕಠಿಣ ವಿಷಯಗಳು ಬಹಳ ಆಸಕ್ತಿಯುತವಾಗಿ ಇರುತ್ತವೆ ಅವುಗಳನ್ನು ಅರಿತು ಅಧ್ಯಯನದ ಬೇಕೆಂದು’ ಮನೋಹರ್ ಬಿರಾದರ್ ಮುಖ್ಯಗುರುಗಳು ಹೇಳಿದರು.

ಔರಾದ ತಾಲೂಕಿನ ಸಂತಪೂರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಾಗಾರ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.

ಎಲ್ಲ ವಿಷಯಗಳಿಗಿಂತ ಸರಳ ವಿಷಯ ಗಣಿತ ವಾಗಿದೆ. ಪರೀಕ್ಷೆಗಳಲ್ಲಿ ಆಗುವ ತಪ್ಪುಗಳು ,ಬಹುಆಯ್ಕೆ, ವಿವರಣೆ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಮೂಲಕ ಹೆಚ್ಚು ಅಂಕಗಳು ಗಳಿಸಬೇಕು ಎಂದರು.

‘ವಿಜ್ಞಾನ ಓದುವ ಸರಳವಾದ ವಿಷಯ ಅವುಗಳಲ್ಲಿ ವಿಜ್ಞಾನಿಯ ಹೆಸರು, ಸಮೀಕರಣ ಬಿಡಿಸುವುದು, ಸೂತ್ರ ಬರೆಯುವುದು ಮತ್ತು ಚಿತ್ರಗಳು ಬಿಡಿಸುವ ಮೂಲಕ ವಿಜ್ಞಾನ ಅಧ್ಯಯನ ಮೂಲಕ ಅರ್ಥಮಾಡಿಕೊಳ್ಳಬಹುದು’ ಎಂದು ಜ್ಞಾನೇಶ್ವರ್ ಪಾಂಚಾಳ್ ಮುಖ್ಯಗುರುಗಳು ತಿಳಿಸಿದರು.

‘ವಿದ್ಯಾರ್ಥಿಗಳು ಆಧುನಿಕ ಜಗತ್ತಿನಲ್ಲಿ ಬಹಳಷ್ಟು ಸ್ಪರ್ಧಾತ್ಮಕವಿದ್ದು ಇಂಥ ಸಮಯದಲ್ಲಿ ತನ್ನ ಸಾಧನೆ ಮತ್ತು ಗುರಿಗಾಗಿ ಆಯ್ಕೆ, ಅಧ್ಯಯನ ಬಹಳ ಮಹತ್ವ’ ಎಂದು ಪ್ರಾಂಶುಪಾಲ ನವಿಲಕುಮಾರ್ ಉತ್ಕಾರ್ ಪ್ರಾಸ್ತವಿಕ ಮಾತನಾಡಿದರು.

ಮುಖ್ಯಗುರುಗಳು ಅಜಯಕುಮಾರ್ ದುಬೆ ಮಾತನಾಡಿದರು. ಶಿಕ್ಷಕರಾದ ಯಶವಂತ ಬ್ಯಾರೆಕೆ, ಅನಿಲಕುಮಾರ್ ಬನ್ಸೋಡೆ, ಆದರ್ಶ ಗಂದಿಗುಡೆ, ಸಂಗಮೇಶ್ ಬ್ಯಾಳೆ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ವನದೇವಿ ಎಕ್ಕಳೆ, ಸ್ವಾತಿ ಸಿರಂಜಿ, ಭೂಷಣ ಪಾಟೀಲ್, ವಂದನಾ ಮಾಳಿಗೆ, ಮೀನಾಕ್ಷಿ ಪಾಂಡ್ರೆ, ಯೋಹಾನ ಬರೂರಕರ್ ಇತರರು ಇದ್ದರು.

ಇದೇ ಸಂದರ್ಭದಲ್ಲಿ 6 ಪ್ರೌಢಶಾಲೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಾಲೇಜು ವತಿಯಿಂದ ಏರ್ಪಡಿಸಿ ಪ್ರಥಮ ,ದ್ವಿತೀಯ, ತೃತೀಯ ಸ್ಥಾನ ಪಡೆದ 26 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.