Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಯುವಕರ ವಿನೂತನ ಪ್ರಯತ್ನ

 

ಬೀದರ್ ಸ್ವಾಭಿಮಾನಿ ಗೆಳೆಯರ ಬಳಗದ ವತಿಯಿಂದ ಇಂದು ಔರಾದ್ ತಾಲ್ಲೂಕಿನ ಜೀರ್ಗಾ(ಬಿ) ಮತ್ತು ಜೀರ್ಗಾ(ಕೆ) ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮಕ್ಕೆ ಸ್ವಾಭಿಮಾನಿ ಬಳಗದ ಯುವಕರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಚಂದು ಪಡಶೆಟ್ಟಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ದಿನೆ ದಿನೆ ಕಡಿಮೆಯಾಗುತ್ತಿರುವುದು ಅತ್ಯಂತ ದುಃಖದ ಸಂಗತಿ, ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಹೀಗಾಗಿ ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು.
ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ
ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುವ ಕಾರ್ಯಕ್ರಮ ನಮ್ಮ ಗೆಳೆಯರ ಬಳಗದ ಸ್ವಂತ ಖರ್ಚಿನಲ್ಲಿ ಹಮ್ಮಿಕೊಂಡಿದ್ದೆವೆ.
ಇಷ್ಟು ದಿನ ಸ್ವಾಭಿಮಾನಿ ಗೆಳೆಯರ ಬಳಗದ ಚಟುವಟಿಕೆಗಳು ಕೇವಲ ಬೀದರ್ ನಗರಕ್ಕೆ ಸೀಮಿತವಾಗಿತ್ತು ಇದೀಗ ಎಲ್ಲಾ ತಾಲೂಕು ಮತ್ತು ಗ್ರಾಮ ಘಟಕಗಳಲ್ಲಿ ನಡೆಸಲು ಬಳಗದ ಗುರಿಯಾಗಿದೆ. ಪರಿಸರ ಜಾಗೃತಿ, ಬಡ ಮತ್ತು ಸರಕಾರಿ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸ್ವಾಭಿಮಾನಿ ಬಳಗವನ್ನು ಗ್ರಾಮಮಟ್ಟದಲ್ಲಿ ವಿಸ್ತರಿಸಲು ಸಹಕರಿಸುತ್ತಿರುವ ಯುವಕರಾದ ಗ್ರಾಮದ ಮಹೇಶ್ ಕೂಡಗೆ, ಶಿವಾನಂದ ಕೋಟೆ, ರತಿಕಾಂತ ಸ್ವಾಮಿ, ಶಾಲಿವಾನ್ ಕೋಟೆ, ರಾಜಕುಮಾರ್ ಬಂಬುಳಗೆ ಅರಂತಹ ಅನೇಕ ಯುವಕರ ಸಹಕಾರದಿಂದ ಸಮಾಜ ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ
ಪ್ರಮುಖರಾದ ಬಸವರಾಜ ಸ್ವಾಮಿ, ರವಿ ಬೆಳಕುಣೆ ಮತ್ತು ಮಲ್ಲಿಕಾರ್ಜುನ ಭುಶೆಟ್ಟಿ, ಸದಸ್ಯರಾದ ಜಗದೀಶ್ ಜಾಬಾ ರವಿ ಮಠಪತಿ, ಜೀರ್ಗಾ(ಬಿ) ಶಾಲೆಯ ಶಿಕ್ಷಕರಾದ, ಲಕ್ಷ್ಮಣರಾವ್ ಚಂದಾಪುರ, ಜಯರಾಮ್ ಚೌಹಾಣ್ ಮತ್ತು ಲೋಕೇಶ್ ಕೋಟೆ. ಜೀರ್ಗಾ (ಕೆ) ಗ್ರಾಮದ ಶಿಕ್ಷಕರಾದ ರಘುಪತಿ ಮತ್ತು ಕುಶಾಲ್ ರಾವ್ ಪಾಟೀಲ್ ಸಾಥ್ ನೀಡಿದರು.