Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ದ್ವಿತಿಯ ಪಿಯುಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ

(ಸರಕಾರಿ ಪದವಿ ಪೂರ್ವ ಕಾಲೇಜ್ ಶಿಕ್ಷಕರ ಕಾಲೊನಿ ಔರಾದ )

ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಓದುವುದು ಜೊತೆಗೆ ಬರಹಕ್ಕೂ ಹೆಚ್ಚು ಮಹತ್ವ ನೀಡಿದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಅನುಕೂಲವಾಗುತ್ತದೆ ಎಂದು ಎಂ. ಆಂಜನೇಯ ಉಪನಿದೇ೯ಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೀದರ ಅವರು ಔರಾದ್ ಪಟ್ಟಣದಲ್ಲಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜು ಔರಾದನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆ ಪಲಿತಾಂಶ ಸುಧಾರಣೆ ಕುರಿತು (ವಿಶೇಷ ತರಗತಿಗಳು)ಎರಡು ದಿನಗಳ ಕಾಯ೯ಗಾರವನ್ನು ಉದ್ಘಾಟನೆ ಮಾಡಿ ದಿನಾಂಕ 28/01/2022 ರಂದು ಮಾತಾನಾಡಿ ಎಲ್ಲಾ ವಿದ್ಯಾಥ೯ಗಳಿಗೆ ಒ೦ದೆ ರೀತಿಯ ಪ್ರಶ್ನೆ ಪತ್ರಿಕೆ ಇದ್ದರು ಫಲಿತಾ೦ಶದಲ್ಲಿ ನಿರೀಕ್ಷೀತ ಫಲಿತಾ೦ಶ ಕ೦ಡು ಬರುತ್ತಿಲ್ಲಾ.ಉಪನ್ಯಾಸಕರು ಪ್ರಮಾಣಿಕವಾಗಿ ಪ್ರಯತ್ನ ಮಾಡಿದರೆ ಗಡಿ ಭಾಗದ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ. ಶಿಕ್ಷಣ ಹಾಗೂ ವಿದ್ಯಾಥ೯ಗಳ ಬಗ್ಗೆ ಅಪಾರ ಪ್ರೀತಿ ಹೊ೦ದಿರುವ ಪ್ರಾ೦ಶುಪಾಲರಾಗಿ ಓ೦ಪ್ರಕಾಶ ದಡ್ಡೆಯಾವರು ಔರಾದನಲ್ಲಿ ಕ್ರೀಯಾಶಿಲರಾಗಿ ಕಾಯ೯ನಿವ೯ಹಿಸುತ್ತಿದ್ದಾರೆ.
ಅತಿಥಿಗಳಾಗಿ ಆಗಮಿಸಿರುವ ಬೀದರ ಜಿಲ್ಲೆಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಓಂಕಾರ ಸೂಯ೯ವಂಶಿ ಅವರು ಮಾತಾಡಿ .ವಿದ್ಯಾರ್ಥಿಗಳು ತಂದೆ ತಾಯಿ ಮತ್ತು ಗುರುಗಳ ಕನಸು ನನಸಾಗುವ ರೀತಿಯಲ್ಲಿ ಓದುವುದು ಜೊತೆಗೆ ದೇಶಭಕ್ತಿ ಮತ್ತು ನೈತಿಕ ಶಿಕ್ಷಣಕ್ಕೆ ಮಹತ್ವ ಕೊಡಬೇಕೆಂದು ತಿಳಿಸಿದರು.

ಕಾಯ೯ಗಾರ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ ಮಾತನಾಡಿ ಬೀದರ ಜಿಲ್ಲೆಯ ವಿಷಯವಾರು ಅನುಭವದ ಉಪನ್ಯಾಸಕರಿಗೆ ಕರೆಸಿಕೊಂಡು ವಿಶೇಷ ತರಗತಿಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಪಡೆಯಲು ಅನುಕೂಲವಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಮಾಣಿಕರಡ್ಡಿ, ಬಾಲಾಜಿ ಜಾದವ ಅವರಿಗೆ ಗೌರವಿಸಿ ಸನ್ಮಾನ ಮಾಡಲಾಯಿತು. ಕಾಯ೯ಕ್ರಮದ ಸಂಚಾಲನೆ ಉಪನ್ಯಾಸಕರಾದ ಶಾಂತಕುಮಾರ್ ಸಂಗೋಳಗ್ಗಿ ಸ್ವಾಗತ ಸತೀಶ ರುಮ್ಮಾ ಮಾಡಿದರೆ ವಂದನೆ ಜಯಶ್ರೀ ಮೇಡಂ ಅವರು ಮಾಡಿದರು ಉಪನ್ಯಾಸಕರಾದ ಪ್ರಲ್ಹಾದ ಪಾಟೀಲ್ ಶಿಲ್ಪಾರಾಣಿ ಸೇರಿದಂತೆ ಅಥಿತಿ ಉಪನ್ಯಾಸಕರುಗಳಾದ ಅಮರ ಕೊಳ್ಳುರ, ಉತ್ತಮ ದಾ೦ಡೆ, ಸಿದ್ಧಾಥ೯ ಕಾ೦ಬಳೆ,ಶಾರಲೇಟ, ವಿದ್ಯಾರ್ಥಿಗಳು ಭಾಗವಹಿಸಿದ್ದರು.