Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕಿತ್ತೂರ ಶಾಲೆಯಲ್ಲಿ 75ನೇ ಅಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಧೂಪತಮಹಾಗಾಂವ ಇವರ ಸಂಯುಕ್ತಾಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವನಮಾರಪಳ್ಳಿಯಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ ದಿನಾಂಕ 29 ರಂದು ಮ: 3 ಗಂಟೆಗೆ ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ತಾಲೂಕು ಉಪ ತಹಸಿಲ್ದಾರರಾದ ಮಲಶೇಟ್ಟಿ ಚಿದ್ರೆ ಉದ್ಘಾಟಿಸಿ ಮಾತನಾಡಿದರು ನಾವು ಸ್ವತಂತ್ರ ಪಡೆದು 75 ವರ್ಷ ಕಳೆದವು ನಮ್ಮ ದೇಶ ಸ್ವತಂತ್ರ ಪಡೆಯಬೇಕಾದರೆ ಮಹಾನ್ ಹೋರಾಟ ಗಾರರು ಗಣ್ಯ ವ್ಯಕ್ತಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಬ್ರಿಟಿಷ್‌ರ ಆಳ್ವಿಕೆಯಲ್ಲಿದ್ದ ನಮ್ಮ ದೇಶ ತಮ್ಮ ವಶಕ್ಕೆ ಪಡೆಯಲು ಕಾರಣಿಕರ್ತರಾದ ಮಹಾತ್ಮ ಗಾಂಧಿ,ಸುಭಾಷ್ ಚಂದ್ರಭೋಷ ,ಭಗತಸಿಂಗ,ಲಾಲ ಲಜಪತರಾಯ ಹಾಗೂ ಅನೇಕ ಮಹಾನ್ ಪುರುಷರ ಹೋರಾಟದ ಪರಿಶ್ರಮದಿಂದ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಿರುವದು ಅದು ಇವತ್ತಿಗೆ 75 ವರ್ಷ ಕಳೆದಿವೆ.ಈಗಿನ ಮಕ್ಕಳಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಗ್ಗೆ ಶಿಕ್ಷಕರು ಪಾಠದ ಜೊತೆಯಲ್ಲಿ ಹೇಳಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಧಿಕಾರಿಗಳಾದ ಎಚ್.ಎಸ್.ನಗನೂರ ವಹಿಸಿಕೊಂಡು ಮಕ್ಕಳನ್ನ ಉದ್ದೇಶಿಸಿ ಮಾತನಾಡಿದರು ಮಕ್ಕಳೆ ನಮ್ಮ ದೇಶದ ಸ್ವತಂತ್ರ ದ ಪುಟವನ್ನು ತಿರುಗಿಸಿ ನೂಡಿ ಸ್ವಾತಂತ್ರ್ಯ ವನ್ನು ನಮ್ಮ ದೇಶಕ್ಕೆ ಸಿಕ್ಕಿಲ್ಲ ನಾವು ಕಿತ್ತುಕೊಳ್ಳಲಾಯಿತು ಅದು ಇಂದಿಗೂ 75 ವರ್ಷಗಳು ಕಳೆದವು ತಮ್ಮ ಪ್ರಾಣ ತ್ಯಾಗ ಮಾಡಿ ಸ್ವತಂತ್ರ ಪಡೆದುಕೊಂಡರು.ಆದಕಾರಣ ಇವತ್ತು 75 ವರ್ಷಗಳ ನಂತರ ಸಂಭ್ರಮಾಚರಣೆ ಇಡೀ ದೇಶಾದ್ಯಂತ ಅಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮಗಳು ಸಡಗರದಿಂದ ಅಚರಿಸಲಾಗುತ್ತಿದೆ ಎಂದರು.

ವಿಶೇಷ ಉಪನ್ಯಾಸ ವನ್ನು ಯುವ ಸಾಹಿತಿ ಬಾಲಾಜಿ ಕುಂಬಾರ ವಹಿಸಿಕೊಂಡು ಗಡಿನಾಡಿನಲ್ಲಿ ಕನ್ನಡದ ಭಾಷೆಯ ಸ್ಥಿತಿಗತಿ ಉದ್ದೇಶಿಸಿ ಉಪನ್ಯಾಸ ಮಂಡಿಸಿದರು.ಬೀದರ ಜಿಲ್ಲೆಯ ಗಡಿ ಭಾಗದ ಜನರಿಗೆ ಕನ್ನಡ,ಮರಾಠಿ, ಉರ್ದು, ತೆಲಗು ಭಾಷೆಯನ್ನು ಮಾತನಾಡುವಲ್ಲಿ ಪರಿಣಿತರು ಸಿಗುತ್ತಾರೆ ಆದರೆ ನಾಡು ನುಡಿ ಕನ್ನಡ ಭಾಷೆ ಮಾತನಾಡುವದು ಮರೆಯಾಚಿಕೆಯಾಗುತ್ತಿದ್ದು ಕನ್ನಡ ಭಾಷೆ ಮಾತನಾಡುವಲ್ಲಿ ಹಾಗೂ ಕಲಿಸುವಲ್ಲಿ ನಾವುಗಳು ಮುಂದಾಗಬೇಕು ನಮ್ಮ ಬೀದರ ಭಾಷೆ ಎಲ್ಲಿಹೊದರು ಗುರುತು ಹಿಡಿಯುವಂತ ಭಾಷೆಯಾಗಿದೆ ಪಠ್ಯಕ್ರಮದ ಭಾಷೆಗೆ ಅನುಗುಣವಾಗದ ಕಾರಣ ನಮ್ಮ ಗಡಿ ಭಾಗದಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ ನಾವು ಕರ್ನಾಟಕ ರಾಜ್ಯದವರಾಗಿದ್ದು ಕನ್ನಡ ಭಾಷೆಗೆ ಪ್ರಾಶಸ್ತ್ಯವನ್ನು ನೀಡಬೇಕಾದ ಜವಾಬ್ದಾರಿ ನಮ್ಮ ದಾಗಿದೆ ಬೇರೆ ಭಾಷೆಗೆ ಗೌರವಿಸಬೇಕು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವಲ್ಲಿ ಶಿಕ್ಷಕರು ಮಕ್ಕಳು ಮುಂದಾಗಬೇಕು ಎಂದು ನುಡಿದರು.

ಯುವ ಸಾಹಿತಿ ಸೂರ್ಯಕಾಂತ ಎಕಲಾರ ಮಾತನಾಡಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಸವಿಸ್ತಾರವಾಗಿ ಹಾಗೂ ನಾಡು ನುಡಿ ದೇಶದ ಮಹಾನ್ ಪುರುಷರು ಸ್ವಾತಂತ್ರ್ಯ ಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ವನ್ನು ದೊರುಕುವಲ್ಲಿ ಯಶಸ್ವಿಯಾಗಿದ್ದು ಸಂತೋಷದ ಸಂಭ್ರಮಾಚರಣೆಗಳು ಎಂದು ಸಂಕ್ಷಿಪ್ತವಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕಿತ್ತೂರ ಶಾಲೆಯ ಮಕ್ಕಳು ಸಾಂಸ್ಕೃತಿಕ ನೃತ್ಯವನ್ನು ಮಾಡಿ ಅತಿಥಿಗಳ ಗಮನ ಸೆಳೆದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅದ್ಯಕ್ಷೆ ಅನೀತಾ ಎಸ್ ಬಿರಾದಾರ ವಹಿಸಿದರು
ಉದ್ಘಾಟಕರಾಗಿ ತಹಶಿಲ್ದಾರ ಮಲಶೇಟ್ಟಿ ಚಿದ್ರೆ, ಶಿಕ್ಷಣಧಿಕಾರಿ ಎಚ್ ಎಸ್ ನಗನೂರ, ಮುಖ್ಯ ಅತಿಥಿ ಗಳಾಗಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಕುಂತಲಾ ಪಾಟೀಲ್, ಪುನಿತ್ ಸಾಳೆ,ಶಿವಾಜಿ ಬಿರಾದಾರ, ಜೈ ಕರವೇ ಅದ್ಯಕ್ಷರಾದ ಶರಣಪ್ಪಾ ಪಾಟೀಲ್ ಪತ್ರಕರ್ತರಾದ ಅಂಬಾದಾಸ ನಳಗೆ, ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಕಲ್ಲಪ್ಪಾ ಟ್ಮಕ್ಕೆ,
ಕೃಷ್ಣ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.ಜೀವನ ಕೊಟಗಿರೆ ನಿರೂಪಿಸಿದರು
ರವಿ ಅಲಮಾಜೆ ವಂದಿಸಿದರು.