Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ ಜಿಲ್ಲಾ ಉಸ್ತುವಾರಿಯಾಗಿ ಪ್ರಭು ಚವ್ಹಾಣರನೇ ನೇಮಿಸಿ: ಸಂತೋಷ ಮೈನಳ್ಳೆ

ಬೀದರ: ಮಾನ್ಯ ಪಶುಸಂಗೋಪನೆ ಸಚಿವ ಪ್ರಭು.ಬಿ.ಚವ್ಹಾಣ ಅವರನ್ನೆ‌ ಮತ್ತೊಮ್ಮೆ ಬೀದರ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಬೇಕೆಂದು ಯುವ ಮುಖಂಡ ಸಂತೋಷ ಮೈನಾಳ್ಳೆ ಒತ್ತಾಯಿಸಿದ್ದಾರೆ.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಭು ಚವ್ಹಾಣ ಅವರು ಕಾರ್ಯ ಉತ್ತಮವಾಗಿದ್ದು. ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಮೂರನೇ ಅಲೆ ಹೆಚ್ಚಿನ ಸಂಖ್ಯೆಯಲ್ಲಿ ರಣ ಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಬೀದರ ಜಿಲ್ಲೆಯ ಅಭಿವೃದ್ಧಿ ಪಥದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವ ಪ್ರಭು ಚವ್ಹಾಣ ಅವರನ್ನು ಸರ್ಕಾರ ಯಾದಗಿರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಮಾಡಿದ್ದು ಸೂಕ್ತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪ್ರಭು ಚವ್ಹಾಣ ಅವರ ಪಶು ಸಂಗೋಪನಾ ಸಚಿವರಾದ ನಂತರ ಗೋಹತ್ಯೆ ಕಾಯ್ದೆ ಜಾರಿಗೆ ತಂದು 400ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಬಕರೀದ್ ಸಂದರ್ಭದಲ್ಲಿ 9000 ಸಾವಿರ ಪಶುಗಳ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯ ಅನೇಕ ಬಡ ಕುಟುಂಬಗಳಿಗೆ ಹಾಗೂ ಅನಾಥ ಮಕ್ಕಳಿಗೆ ಆಶ್ರಯದಾತರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಸೇವೆ ಶ್ಲಾಘನೀಯವಾಗಿದೆ.

ಅತಿ ಹಿಂದುಳಿದ ಜಿಲ್ಲೆಯಾಗಿರುವ ಬೀದರ ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅವುಗಳಿಗೆ ಸೂಕ್ತ ಪರಿಹಾರ ಒದಗಿಸಿಲ್ಲು ಜಿಲ್ಲೆಯ ಸಚಿವರೆ ಅತಿ ಸೂಕ್ತ. ಆದರೆ ಇಂತಹ ಹಿಂದುಳಿದ ಜಿಲ್ಲೆಯನ್ನು ಸಮಸ್ಯೆಯನ್ನು ಆಲಿಸಿ ಅಭಿವೃದ್ಧಿಯ ಕಡೆ ಕೊಂಡೊಯ್ಯುವ ಅದೇ ಜಿಲ್ಲೆಯ ಪ್ರತಿನಿಧಿಯನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿರುವುದು ಎಷ್ಟರಮಟ್ಟಿಗೆ ಸೂಕ್ತವಾಗಿದೆ ಎಂದು ಜಿಲ್ಲೆಯ ಜನರಲ್ಲಿ ಪ್ರಶ್ನೆ ಮನೆಮಾಡಿದೆ. ಬೀದರ ಜಿಲ್ಲೆಯ ಸಚಿವರಾಗಿ ಪ್ರಭು ಚವ್ಹಾಣ ಅವರು ಜಿಲ್ಲೆಯ ಸರ್ವ ಜನತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುತ್ತಾ ಬಂದಿದ್ದಾರೆ. ಕೊರೊನಾದಂತಹ ಅತಿ ಸಂಕಷ್ಟ ಸಮಯದಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ 24 ತಾಸು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಧಿಕಾರಿಗಳಿಗೆ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದರು. ಇಂತಹ ಒಬ್ಬ ಕ್ರಿಯಾಶೀಲ ಸಚಿವರನ್ನು ಬೀದರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಕೈ ಬಿಟ್ಟಿರುವುದು ಸರ್ಕಾರ ಹಿಂದುಳಿದ ಭಾಗದ ಜಿಲ್ಲೆಯ ಜನರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿಘ್ರವೇ ಮುಖ್ಯಮಂತ್ರಿಗಳು ಬೀದರ ಜಿಲ್ಲೆಯ ಅಭಿವೃದ್ಧಿ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಪುನಃರವಾಗಿ ಪ್ರಭು ಚವ್ಹಾಣ ಅವರನ್ನೇ ಸ್ವ ಬೀದರ ಜಿಲ್ಲೆಯ ಸಚಿವರಾಗಿ ಮರು ನೇಮಿಸಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿಕೂಡಬೇಕೆಂದು ಮನವಿ ಮಾಡಿದ್ದಾರೆ.