Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬಚ್ಚಲು ಗುಂಡಿಯಾದ ತುಳಜಾಪುರ ಗ್ರಾಮದೊಳಗಿನ ರಸ್ತೆಗಳು

ಸಚಿವರ ತವರು ಕ್ಷೇತ್ರಗಳಲ್ಲಿ ಇಲ್ಲ ಸ್ವಚ್ಛತೆ

ಕಣ್ಣಿದ್ದು ಕುರುಡರಾದರೆ ಪಂಚಾಯಿತಿ ಅಧಿಕಾರಿ ಅಧ್ಯಕ್ಷ-ಉಪಾಧ್ಯಕ್ಷ ?

ಒಂದೇ ಜಿಲ್ಲೆಯ ಇಬ್ಬರು ಸಚಿವರುಗಳು ಇದ್ದರು ಇಂತಹ ಸಣ್ಣಪುಟ್ಟ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ .ಭಾಷಣ ಮಾಡುವಾಗ ಸ್ವಚ್ಛತೆ ಬಗ್ಗೆ ಹೇಳುತ್ತಾರೆ ಆದರೆ ಈ ರೀತಿಯ ಸಮಸ್ಯೆ ಕಂಡರು ಕೂಡ ಪರಿಹಾರ ಕಂಡುಹಿಡಿಯುವುದರಲ್ಲಿ ವಿಫಲವಾಗುತ್ತಿದ್ದಾರೆ

ನಾನಾ ಓಣಿಯ ರಸ್ತೆ ಬದಿ ನಿರ್ಮಿಸಲಾದ ಚರಂಡಿ ಕಾಮಗಾರಿ ಅಪೂರ್ಣ, ಕೆಲಸ ಮುಗಿದ ಚರಂಡಿಯಲ್ಲಿ ತುಂಬಿದ ತ್ಯಾಜ್ಯ, ಹೂಳು. ಚರಂಡಿ ಮೂಲಕ ಹರಿಯಬೇಕಿದ್ದ ಗೃಹ ಬಳಕೆ ಕೊಳಚೆ ನೀರು ರಸ್ತೆಗೆ ಬಂದರೆ, ಇನ್ನು ಕೆಲವೊಮ್ಮೆ ಸುರಿದ ಮಳೆ ನೀರು ಮನೆಯೊಳಗೆ. ಎಲ್ಲೆಡೆ ಕಾಣುತ್ತಿರುವ ನೈರ್ಮಲ್ಯದ ಸಮಸ್ಯೆ. ಅವ್ಯವಸ್ಥೆಯ ಆಗರದಲ್ಲಿ ನಿತ್ಯ ಜನ ನರಕಯಾತನೆ…


ಔರಾದ ತಾಲೂಕಿನ ಏಕಲಾರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತುಳಜಾಪುರ ಗ್ರಾಮದ ದುಸ್ಥಿತಿಯ ಚಿತ್ರಣ ಇದಾಗಿದೆ. ಗ್ರಾಮದಲ್ಲಿ ನಡೆದ ಅರ್ಧಮರ್ಧ ಕಾಮಗಾರಿಯಿ0ದ ನಾನಾ ಸಮಸ್ಯೆ ಎದುರಿಸುವಂತಾಗಿದೆ. ಹಾಳಾದ ಚರಂಡಿಯಿಂದಾಗಿ ಮನೆ ಕೊಳಚೆ ಮತ್ತು ನಳದ ನೀರು ರಸ್ತೆಗೆ ಹರಿಯುತ್ತಿದೆ. ಅಲ್ಲದೇ ರಸ್ತೆಯ ಮೇಲೆ ಬಿದ್ದ ಗುಂಡಿಗಳಲ್ಲಿ ಹೊಲಸು ನೀರು ನಿಂತು ಗಬ್ಬು ನಾರುತ್ತಿದ್ದು, ಪ್ರದೇಶದ ಜನರಲ್ಲಿ ಸಾಂಕ್ರಮಿಕ ರೋಗದ ಭೀತಿ ಆವರಿಸಿದೆ.

ಸುಮಾರು 1000ಕ್ಕೂ ಅಧಿಕ ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ 3 ಜನ ಗ್ರಾಮ ಪಂಚಾಯತ್ ಸದಸ್ಯ ಇದ್ದು,ಇಲ್ಲದಂತಾಗಿದೆ, ಗ್ರಾಮದೊಳಗಿನ ಚರಂಡಿಯಲ್ಲಿ ಹೂಳು ತುಂಬಿದರೆ, ಮತ್ತೊಂದು ವಾರ್ಡ್‌ನಲ್ಲಿ ಚರಂಡಿ ನಿರ್ಮಾಣ ಮುಗಿಯದೇ ಅಪೂರ್ಣವಾಗಿದೆ. ಹೀಗಾಗಿ ಚರಂಡಿ ನೀರು ರಸ್ತೆಯ ಮೇಲೆ ನಿಂತು ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಚರಂಡಿ ಹಾಗೂ ರಸ್ತೆಯ ಮೇಲೆ ಬಿದ್ದ ತಗ್ಗು ಗುಂಡಿಗಳಲ್ಲಿ ಹೊಲಸು ನೀರು ನಿಂತಿದ್ದರಿಂದ ಇವು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿವೆ.

ಸಕಾಲಕ್ಕೆ ಚರಂಡಿಯ ಹೂಳನ್ನು ತೆಗೆಸಬೇಕಾದ ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಜನರು ಕಲುಷಿತ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ನೈರ್ಮಲ್ಯದ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಜನತೆಗೆ ನೀರಿನ ಪೂರೈಕೆಯು ಸಮರ್ಪಕವಾಗಿಲ್ಲ.

ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಹೀಗಾಗಿ ಮಹಿಳೆಯರು ಬಹಿರ್ದೇಸೆಗೆ ಬಯಲನೇ ಆಶ್ರಯ ಪಡುವಂತಾಗಿದೆ. ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು,ಗೃಹ ಬಳಕೆ ನೀರು ನಳದ ನೀರು ಮನೆಯೊಳಗೆ ನುಗ್ಗುತ್ತಿವೆ. ಈ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. .

ಇದ್ದೇ ತಿಂಗಳು ತುಳಜಾಪುರ ಗ್ರಾಮದ ಗ್ರಾಮ ದೇವತೆ ಅಂಬಾ ಭವಾನಿಯ ಜಾತ್ರ ಮಹೋತ್ಸವ ನಡೆಯಲಿದ್ದು ,ಗ್ರಾಮದ ಪ್ರತಿ ಓಣಿಯಲ್ಲಿ ಭಕ್ತರು ಪಲ್ಲಕ್ಕಿ ಮೆರವಣಿಗೆ ಮಾಡುವುದು ವಾಡಿಕೆ ಉಂಟು ಆದರೆ ಗ್ರಾಮದೊಳಗಿನ ಸಣ್ಣ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ,ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಕಾರ್ಯಾಲಯಕ್ಕೆ ಹೋಗುವಾಗ ಪ್ರತಿ ದಿನ ಗ್ರಾಮದ ಮೂಲಕ ಹೋಗಬೇಕಾಗುತ್ತದೆ,ಪ್ರತಿ ದಿನ ಈ ವ್ಯವಸ್ಥೆ ನೋಡಿ ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ಇರುವುದು ನೋವಿನ ಸಂಗತಿ ಇನ್ನುತ್ತಿದ್ದಾರೆ ಗ್ರಾಮಸ್ಥರು

ನಮ್ಮ ಕಡೆ ಚರಂಡಿ ಇಲ್ಲದ ಕಾರಣ ಮಳೆ ನೀರು ,ನಳದ ನೀರು ರಸ್ತೆಯ ಮೇಲೆ ಹರಿದು ಗಬ್ಬು ನಾರುತ್ತಿದೆ. ಅಲ್ಲದೇ ಕಲುಷಿತ ನೀರು ಸಂಗ್ರಹಗೊಂಡಿದೆ.
ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥ

ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ವರ್ಷಕ್ಕೆ ಒಮ್ಮೆ ಆದರೂ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿ.ನಿಮ್ಮಗೆ ಸರಕಾರ ಸಂಬಳ ನೀಡುವುದು ಜನರ ಸೇವೆ ಮಾಡುವುದಕ್ಕೆ ಆದರೆ ನೀವು ಈ ರೀತಿಯ ನಿರ್ಲಕ್ಷತನ ಮಾಡಿದರೆ ಜನರ ಬದುಕು ಬೀದಿಗೆ ಬರುತ್ತೆ ಅಂತ ಬಿದರಿಯ ಅಡು ಭಾಷೆಯಲ್ಲಿ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ

ರಾಜ್ಯದ ಪಂಚಾಯತ್ ಇಲಾಖೆ ಸಚಿವರೇ ಚುನಾವಣೆ ಬಂದಾಗ ಸ್ವಚ್ಛತೆ ಕುರಿತು ಮಾತಾನಾಡುವ ನೀವು ಈ ರೀತಿಯ ಸಮಸ್ಯೆಗಳ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ.ಚುನಾವಣಾ ಸಂಧರ್ಭದಲ್ಲಿ ಮಾತ್ರ ಜನರು ಬೇಕಾ ? ಕೂಡಲೇ ಸಂಬಂಧ ಪಟ್ಟ ಅಧಿಕಾರಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಸ್ಟ್ ಬೀದರ.ಕಾಂ ಮನವಿ ಮಾಡುತ್ತಿದೆ

ವರದಿ:ಹಣಮಂತ ದೇಶಮುಖ