Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಅಂಬೇಡ್ಕರ್ ಅವರನ್ನ ದಲಿತಿಕರಣ ಗೊಳಿಸಿದ್ದೆ ಈ ಮನುವಾದಿ ಗಳಿಗೆ ಸಿಕ್ಕ ಮೊದಲ ಹಂತದ ಜಯ ಎಲ್ಲೆಲ್ಲಿ ಯಾವ ಯಾವ ರೀತಿಯಲ್ಲಿ ಬಾಬಾ ಸಾಹೇಬರನ್ನ ಬಳಸಿಕೊಳ್ಳಬೇಕು,ಅವಮಾನಿಸಬೇಕು,ತಿರುಚಬೇಕು ಅನ್ನೋದು ಈ ಮನುವಾದಿ ಗುಂಪುಗಳಲ್ಲಿ ಸದಾ ನಡೆಯೋ ಚರ್ಚೆಗಳ ಪೈಕಿ ಮೊದಲ ಅಂಶವಾಗಿರುತ್ತದೆ.ಯಾಕೆಂದರೆ ಭಾರತದ ನೆಲದಲ್ಲಿ ಸ್ವತಂತ್ರ ನಂತರ ಸಾಮಾಜಿಕ ನ್ಯಾಯ,ಸಮಾನತೆ,ಸೌಹರ್ದತೆ ಸೇರಿದಂತೆ ಪ್ರತಿಯೊಂದು ಜೀವಿಗು ಬದುಕುವ ಹಕ್ಕು,ಸವಲತ್ತು,ರಕ್ಷಣೆ ನೀಡುವ ಸಂವಿಧಾನದ ಬೇರುಗಳು ಬಹಳ ಆಳಕ್ಕೆ ಬೇರು ಬಿಟ್ಟಿವೇ ಆ ಬೇರುಗಳನ್ನ ಕಿತ್ತುಹಾಕುವವರೆಗೂ ಈ ಕೋಮುವಾದಿಗಳ ತಾರತಮ್ಯಪೂರ್ಣವಾದ ಸಾಮಾಜಿಕ ವ್ಯವಸ್ಥೆ ಬೇರೂರಲು ಆಗೋದಿಲ್ಲ ಅನ್ನೋದು ಅವರಿಗೆ ಗೊತ್ತಿರುವ ಸತ್ಯ.

ಹಾಗಾಗಿ ಬಾಬಾ ಸಾಹೇಬರ ನಿರ್ಭಯ,ನಿಷ್ಪಕ್ಷಪಾತ,ನಿರ್ಭಾವುಕ ಬದುಕನ್ನು.ದೇಶ ಮತ್ತು ಜಗತ್ತಿನ ಹಲವಾರು ವಿಷಯಗಳ ಮೇಲೆ ತನ್ನ ವಿಧ್ವತ್ಪೂರ್ಣ ಜ್ಞಾನದಿಂದ ಬೆಳಕು ಚೆಲ್ಲಿ ಬರೆದಿರುವ ಬರಹಗಳನ್ನು.ಅವರ ರಾಜಕೀಯ ನೀತಿಗಳು,ಸಾಮಾಜಿಕ ಚಳುವಳಿಗಳು ಎಲ್ಲವೂ ತಿರುಚುವ ಮೂಲಕ ಬಾಬಾ ಸಾಹೇಬರ ಅನುಯಾಯಿಗಳ ದಾರಿ ತಪ್ಪಿಸುವ ಹುನ್ನಾರ ಸತತವಾಗಿ ನಡೆಯುತ್ತಲೆ ಬಂರುತ್ತಿದೆ ಇದು ಒಂದೆಡೆಯಾದರೆ ಇನ್ನೊಂದೆಡೆ ಅವರ ಬದುಕು ಬರಹ ನೀತಿಗಳು ಎಲ್ಲಿ ತಿರುಚಲು ಆಗೋದಿಲ್ಲವೋ ಅಲ್ಲಿ ಬಾಬಾ ಸಾಹೇಬರ ಮೇಲೆ ಅವರ ಅನುಯಾಯಿಗಳು ಇಟ್ಟುಕೊಂಡಿರುವ ಭಾವನಾತ್ಮಕ ವಿಷಯಗಳ ಮೇಲೆ ಸದಾ ಒಂದಲ್ಲ ಒಂದು ರೀತಿಯಲ್ಲಿ ದಾಳಿ ಮಾಡಿ ಬಹುಜನರ ತಾಳ್ಮೆಯನ್ನ ಮೇಲಿಂದ ಮೇಲೆ ಪರೀಕ್ಷೆ ಮಾಡಲಾಗುತ್ತಿದೆ.

ಮುಖ್ಯವಾಗಿ ಬಾಬಾ ಸಾಹೇಬರನ್ನ ಅವರು ಕೊಟ್ಟಿರುವ ಸಂವಿಧಾನವನ್ನ ಬಳಸಿಕೊಂಡೆ ಅವಮಾನಿಸುವಲ್ಲಿ ಭಾರತದ ಬಹುದೊಡ್ಡ ಗುಂಪು ಕಾರ್ಯಚರಿಸುತ್ತಿದೆ.ಕೆಲವು ಸಲ ರಾಜಕಾರಣಿಗಳಿಂದ ಇಲ್ಲ ಸಲ್ಲದ ಅವಹೇಳನಕಾರಿ ವಿಚಾರಗಳು ಅವರ ತಳಬುಡವಿಲ್ಲದ ಭಾಷಣಗಳಲ್ಲಿ ಕೇಳಿ ಜನರು ಉದ್ರೇಕಗೊಂಡರೆ‌.ಕೆಲವೊಮ್ಮೆ ಮೇಲ್ಜಾತಿ ಹಿತಾಸಕ್ತಿಗಳ ಅಜ್ಞಾನಕ್ಕೆ ಗುರಿಯಾಗಿ ಅಂಬೇಡ್ಕರ್ ಅವರು ಮತ್ತೆ ಅವಮಾನಿತರಾಗುತ್ತಾರೆ ಅಲ್ಲಿ ಬಹುಜನ ಸಮುದಾಯ ಮತ್ತೆ ಪ್ರಚೋದನೆಗೆ ಒಳಗಾಗಿ ಬಿಡುತ್ತದೆ.ಇನ್ನೂ ಬಾಬಾ ಸಾಹೇಬರು ಮತ್ತು ಅವರು ರಚಿಸಿದ ಸಂವಿಧಾನದ ಮೇಲಿರುವ ಕೋಪವನ್ನ ಮೇಲ್ಜಾತಿ ಹಿತಾಸಕ್ತಿಗಳು ಮತ್ತು ಕೋಮುವಾದಿ ಮನಸ್ಥಿತಿಗಳು ದಲಿತರನ್ನ ಅಪಮಾನಿಸುವುದರ ಮೂಲಕ,ಹಲ್ಲೆ ಮಾಡುವುದರ ಮೂಲಕ ದಲಿತರ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುತ್ತಾರೆ.ಇವೆಲ್ಲದರಿಂದ ಕೋಪಗೊಂಡ ಬಹುಜನರ ಆಕ್ರೋಶದ ಕಟ್ಟೆ ಒಡೆದು ಕೆಲವೊಮ್ಮೆ ಅಲ್ಲಲ್ಲಿ ಸಣ್ಣ ಘರ್ಷಣೆಗಳು ನಡೆದಿವೆ ಇಲ್ಲೂ ಸಲ ಬುದ್ದಿವಂತ ಕೋಮುವಾದಿಗಳು ದಲಿತ ವಿರೋಧಿ ಅಭಿಪ್ರಾಯ ಮೂಡಿಸಲು ಬಳಸಿಕೊಳ್ಳುತ್ತಾರೆ ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ.

ಇನ್ನೂ ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಯ ಬದುಕಿನ ಹಕ್ಕು,ಗೌರವ,ರಕ್ಷಣೆ ಎಲ್ಲವನ್ನ ಎತ್ತಿ ಹಿಡಿಯುತ್ತ‍ದೆ.ಸಂವಿಧಾನ ಒಳಗೊಂಡಿರುವ ಕಾನೂನು ಕಾಯಿದೆಗಳೆಲ್ಲವೂ ದೇಶದ ಪ್ರಜೆಗಳನ್ನ ಹಿತಾಸಕ್ತಿಗಳನ್ನ ಕಾಪಾಡುವ ಉದ್ದೇಶವೇ ಹೊಂದಿವೆ.ವಿಶ್ವದ ಶ್ರೇಷ್ಠ ಸಂವಿಧಾನ ಎಂದು ಕರೆಯಲಾಗುವ ಸಂವಿಧಾನವನ್ನ ಓದಿಕೊಂಡು ಪ್ರತಿಯೊಂದು ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಹುದ್ದೆಗಳಿಗೆ ಏರುವ ಜನರೇ ಮುಂದೆ ಬರಬರುತ್ತಾ ತಾವೂ ಮೇಲೆ ಹತ್ತಲು ಬಳಕೆಯಾದ ಏಣಿಯನ್ನೆ ಒದಿಯುವ ಪ್ರವೃತ್ತಿಯನ್ನ ಬೆಳೆಸಿಕೊಂಡು ಬಿಡುತ್ತಾರೆ ಅದಕ್ಕೆ ಬೇಕಾದಷ್ಟು ಸಾಕ್ಷಿಗಳಾಗಿ ರಾಜಕಾರಣಿಗಳು,ಉದ್ಯಮಿಗಳು,ಬರಹಗಾರರು,ಪತ್ರಕರ್ತರು ಇತ್ಯಾದಿಗಳು ಇದ್ದಾರೆ.ಆದರೆ ಎಲ್ಲಾಕಿಂತ ದೊಡ್ಡ ದುರಂತವೆಂದರೆ ಸಂವಿಧಾನವೇ ಭಾರತೀಯ ಕಾನೂನಿನ ಜೀವಾಳ ಎಂದು ಅರಿತ ನ್ಯಾಯಧೀಶರೇ ಸಂವಿಧಾನದ ಮತ್ತು ಅದರ ನಿರ್ಮಾತೃ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಅಪಮಾನಕ್ಕೆ ಇಳಿದಾಗ ಹೇಗೆ ಸಹಿಸಲು ಸಾಧ್ಯ.

ಮೊನ್ನೆ 26ನೇ ಜನೇವರಿ ಗಣರಾಜೋತ್ಸವ ದಿನದಂದು ರಾಯಚೂರು ಜಿಲ್ಲಾ ನ್ಯಾಯಾಲಯದ ಪ್ರಧಾನ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡ ಅವರು ಗಣರಾಜೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಬೇಕಾಗಿ ಬಂದಾಗ ಗಾಂಧಿಜಿ ಅವರೊಂದಿಗೆ ಇಡಲಾದ ಬಾಬಾ ಸಾಹೇಬರ ಭಾವಚಿತ್ರವನ್ನ ಅಲ್ಲಿಂದ ತೆಗೆದರೆ ಮಾತ್ರ ತಾನೂ ಬಂದು ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡುವುದಾಗಿ ಹೇಳಿ ಸಂವಿಧಾನ ಶಿಲ್ಪಿಗೆ ಅಪಮಾನವಾಗುವಂತೆ ನಡೆದುಕೊಂಡರು.ಈ ಘಟನೆ ರಾಜ್ಯದ್ಯಾಂತ ಬಿರುಗಾಳಿಯಂತೆ ಹಬ್ಬಿ ಎಲ್ಲ ಕಡೆಯಿಂದಲೂ ತೀವೃವಾದ ವಿರೋಧ ಬರ ತೊಡಗಿದಾಗ ತನ್ನ ಅಜ್ಞಾನದ ನಡೆಯನ್ನ ಸಮರ್ಥಿಸಿಕೊಂಡದ್ದು ನಾಚಿಕೆಗೇಡಿನ ಸಂಗತಿ.

ಈ ಘಟನೆಗೆ ವ್ಯಾಪಕ ವಿರೋಧ ಶುರುವಾಗಿ ದೊಡ್ಡ ದೊಡ್ಡ ರಾಜಕೀಯ ನಾಯಕರು ಇದನ್ನ ತೀವೃವಾಗಿ ವಿರೋಧಿಸಿದರಿ.ರಾಜ್ಯದಾದ್ಯಂತ ಪ್ರತಿಭಟನೆಗಳು,ಧರಣಿ ಸತ್ಯಾಗ್ರಹ ಮಾಡುವ ಮೂಲಕ ಜನತೆಯು ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಅವಮಾನಿಸಿದ ನ್ಯಾಯಧೀಶನಿಗೆ ಸರ್ಕಾರವು ಅವರ ಹುದ್ದೆಯಿಂದ ವಜಾಗೊಳಿಸಿ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಮನವಿ ಪತ್ರಗಳು ಕೊಟ್ಟಿದ್ದಾರೆ ಹಲವೂ ಕಡೆ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಪ್ರಕರಣಗಳು ದಾಖಲಿಸಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನಲ್ಲಿಯೂ ಕೂಡ ಹಲವಾರು ದಲಿತ ನಾಯಕರು ನ್ಯಾಯಧೀಶನನ್ನ ಹುದ್ದೆಯಿಂದ ವಜಾ ಮಾಡುವಂತೆ ಮತ್ತು ಆತ ತೋರಿದ ದುರ್ವರ್ತನೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಪತ್ರ ನೀಡಲು ತಹಶೀಲ್ ಕಚೇರಿಗೆ ಬಂದಾಗ ತಹಶೀಲ್ದಾರ ಅವರು ಮನವಿ ಪತ್ರ ಸ್ವಿಕರಿಸಲು ಉದ್ದೇಶ ಪೂರ್ವಕವಾಗಿಯೇ ತಡಮಾಡಿದ್ದಾರೆ ಅಲ್ಲದೆ ಮನವಿಪತ್ರ ಸ್ವಿಕರಿಸಲು ಬರುವಂತೆ ಕೇಳಿಕೊಂಡಾಗ ಉಪ ತಹಶೀಲ್ದಾರ ಅವರನ್ನ ಕಳುಹಿಸಿದ್ದಾರೆ ಪರಿಸ್ಥಿತಿಯ ಗಂಭೀರತೆಯ ಕನಿಷ್ಠ ಅರಿವು ಇಲ್ಲದ ತಹಶೀಲ್ದಾರ ಪ್ರದೀಪ್ ಕುಮಾರ್ ಹಿರೇಮಠ್ ಅವರು ಹೋರಾಟಗಾರರೊಂದಿಗೆ ಬಹಳ ಅಹಂಕಾರದಿಂದ ನಡೆದುಕೊಂಡಿದ್ದಾರೆ.ಕಚೇರಿಯ ಹೊರಗೆ ಕಾದು ಕಾದು ಸುಸ್ತಾದ ಹೋರಾಟಗಾರರು ನೇರವಾಗಿ ತಹಶೀಲ್ದಾರ ಅವರು ಸಭೆ ನಡೆಸುತ್ತಿರುವ ಹಾಲಿಗೆ ಹೋದಾಗ ಹೋರಾಟಗಾರರನ್ನ ಏರುಧ್ವನಿಯಲ್ಲಿ ಮಾತಾಡಿಸುತ್ತಾ “ಐದ್ನಿಮಿಷ್ ಕಾಯ್ ಹೋಗ್ರಿ ದಿನಾ ಮನವಿ ಪತ್ರ ಕೊಡಲು ಬರುತ್ತಾರೆ ದಿನಾ ಸಾಯೋರಿಗೆ ಅಳುವವರು ಯಾರು” ಅನ್ನೋ ರೀತಿಯಲ್ಲಿ ಮಾತಾಡಿದ್ದಾರೆ.ಹತ್ತತ್ರ ಒಂದು ವರೆ ತಾಸು ಕಾದು ಕುಳಿತ ಹೋರಾಟಗಾರರ ಬಗ್ಗೆ ಕನಿಷ್ಠ ಸೌಜನ್ಯವೂ ತೋರದ ತಹಶಿಲ್ದಾರ ಪ್ರದೀಪ್ ಕುಮಾರ್ ಹಿರೇಮಠ್ ಅವರು ಹೋರಾಟಗಾರರ ಮೇಲೆ ಅರ್ಥಹೀನವಾಗಿ ಗರಂ ಆಗಿ ತಾನೂ ಮಾಡಿದ ತಪ್ಪಿನ ಅರಿವಾಗದೆ ಮಾತಾಡಲು ಶುರು ಮಾಡಿದಾಗ ಮೊದಲೇ ನ್ಯಾಯಧೀಶ ಮಾಡಿದ ಘಟನೆಯಿಂದ ನೊಂದು ಆಕ್ರೋಶಗೊಂಡಿದವರ ತಾಳ್ಮೆಯು ಮಿತಿ ಮೀರಿದಾಗ ಹೋರಾಟಗಾರರು ತಹಶೀಲ್ದಾರ ಅವರನ್ನ ಎಳದಾಡಿದ ಘಟನೆ ನಡೆದಿದೆ.

ಈ ಘಟನೆಯ ವಿಡಿಯೋ ಚಿತ್ರಿಕರಣ ಮಾಡಿದವರು ಬಹಳ ಬುದ್ದಿವಂತರು ಯಾಕೆಂದರೆ ತಹಶೀಲ್ದಾರ ಹೋರಾಟಗಾರರ ಮೇಲೆ ಇಟ್ಟುಕೊಂಡು ಅಸಹನೇ ಮತ್ತು ಅಹಂಕಾರಿಕ ಮನಸ್ಥಿತಿಯಿಂದ ಹೊರಬಂದ ಮಾತುಗಳು ಸೆರೆ ಹಿಡಿಯದೆ ತಹಶೀಲ್ದಾರ ಅವರ ಮಾತುಗಳಿಂದ ಪ್ರಚೋದನೆಗೆ ಒಳಗಾಗಿ ಅಂಕುಶ್ ಗೋಖಲೆ ಮತ್ತು ಇತರೆ ಸಂಗಾತಿಗಳು ಎಳೆದಾಡಿದ ಸಮಯದಲ್ಲಿ ಮಾತ್ರ ವಿಡಿಯೋ ಮಾಡಿದ್ದಾರೆ.ಇವರು ಕಾದು ಕಾದು ಕುಳಿತದ್ದು,ಮನವಿಪತ್ರ ಸ್ವಿಕರಿಸಲು ಬರುವಂತೆ ಕೇಳಿಕೊಂಡದ್ದು,ಸಾಕಾಗಿ ಸಭೆಯನ್ನ ಮಧ್ಯ ಪ್ರವೇಶಿಸುವಷ್ಟು ತಾಳ್ಮೆಗೆಡುವಷ್ಟು ಕಾಯಿಸಿದ್ದನ್ನು,ಮತ್ತು ಹೋರಾಟಗಾರರಿಗೆ ಪ್ರಚೋದಿಸಲು ಆಡಲಾದ ಮಾತುಗಳನ್ನು,ಹಾವಭಾವ,ತಿರಸ್ಕಾರದ ಮಾತುಕತೆಗಳನ್ನು ಯಾರು ಸೆರೆ ಹಿಡಿಯುತ್ತಾರೆ ಇದಲ್ಲವೇ ಅಸಲಿ ಕುತಂತ್ರ ಅಂದರೆ.ಈ ಘಟನೆಯನ್ನ ತಮಗೆ ಬೇಕಾದಂತೆ ಚಿತ್ರಿಕರಿಸಿ ಬಳಸಿಕೊಳ್ಳುವ ಬುದ್ದಿವಂತಿಕೆ ಪಾಪ ದಲಿತ ಹೋರಾಟಗಾರರಿಗೆ ಎಲ್ಲಿಂದ ಬರಬೇಕು..? ಇಷ್ಟೆಲ್ಲಾ ಆದ ಮೇಲು ಮೇಲ್ಜಾತಿಯ ಹಿತಾಸಕ್ತಿಗಳು ಈ ಎಳೆದಾಟದ ಘಟನೆಯನ್ನ ಮತ್ತೆ ಜಾತಿಗಳ ತಿಕ್ಕಾಟದ ಚೌಕಟ್ಟಿಗೆ ತಂದು ನಿಲ್ಲಿಸಿದ್ದಾರೆ ಇಲ್ಲಿಯೂ ಸಂಪೂರ್ಣವಾಗಿ ದಲಿತ ವಿರೋಧಿ ಅಭಿಪ್ರಾಯವನ್ನ ಜನರ ಮನಸ್ಸಲ್ಲಿ ಹುಟ್ಟುವ ಹಾಗೆ ಕುತಂತ್ರ ಮಾಡಿದರು ಹೊರತು ಇಷ್ಟೆಲ್ಲಾ ಘಟನೆಗೆ ಕಾರಣವಾದ ತಹಶೀಲ್ದಾರರಾದ ಪ್ರದೀಪ್ ಕುಮಾರ್ ಹಿರೇಮಠ ಅವರ ಕೋಮುವಾದಿ ಮಾನಸಿಕತೆ,ದಲಿತರ ಮೇಲಿರುವ ತಮ್ಮ ತಾತ್ಸರದ ಮನೋಭಾವ ಯಾರಿಗೂ ಕಾಣಲೇ ಇಲ್ಲಾ..?

ಇರಲಿ ಇದಾದ ಮೇಲೆ ಆಡಿದ ಆಟಗಳು ಇದೆಯಲ್ಲ ಅದು ಪಕ್ಕಾ ಜಾತಿವಾದದ ಲೆಕ್ಕಚಾರದಲ್ಲಿ ಶುರು ಮಾಡಿದ್ದು ನೋಡಿದರೆ ಇವರಲ್ಲಿರುವ ದಲಿತ ವಿರೋಧಿ ಮನಸ್ಥಿತಿಯ
ಸ್ಪೋಟವಾಗಿದೆ‌.ತಹಶೀಲ್ದಾರು ತಮ್ಮ ಜಾತಿಯವರೆಂದು ಲಿಂಗಾಯತರು,ಬೇಡ ಜಂಗಮರು ಇತ್ಯಾದಿಗಳು ದಲಿತ ಹೋರಾಟಗಾರರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದಲ್ಲದೆ ಇಡಿ ಬಹುಜನ ಸಮುದಾಯವೇ ತಪ್ಪು ಎಂದು ಬಿಂಬಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಅದಕ್ಕೆ ಬೇಕಾದ ಸಾಕ್ಷಿ ಎಂದರೆ ಕೆಲವು ಕಡೆದ ನಡೆದ ಹೋರಾಟಗಳು ಮತ್ತು ಹಲವರು ನೀಡಿದ ಪತ್ರಿಕಾ

ಹೇಳಿಕೆಗಳು,ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳು ಕಾಣಬಹುದು.ಅಲ್ಲಾ ಸ್ವಾಮಿ ಇವತ್ತು ಲಿಂಗಾಯತ ಅಧಿಕಾರಿಗೆ ಅನ್ಯಾಯವಾಗಿದೆ ಅನ್ನೋರು ಯಾವತ್ತಾದರು ಬಡ ಲಿಂಗಾಯತರ ಮೇಲೆ ಅನ್ಯಾಯವಾದಾಗ ಹೋರಾಟ ಮಾಡಿದ್ದಿರಾ…? ಲಿಂಗಾಯತ ಧರ್ಮ ಗುರುಗಳಾದ ವಿಶ್ವಗುರು ಬಸವಣ್ಣನವರಿಗೆ ಇದೆ ಕೋಮು ಕ್ರೀಮಿಗಳು ಅಪಮಾನಿಸಿದಾಗ ಹೋರಾಟ ಮಾಡಿದಿರಾ…? ಏನೆ ಆಗಲಿ ನಿಮ್ಮ ಹಠ ಸಾಧಿಸಿದ್ದಿರಿ ಹೋರಾಟಗಾರರನ್ನ ಬಂಧಿಸಲು ಒತ್ತಾಯಿಸುವ ಮೂಲಕ.ಇನ್ನು ಅಂಕುಶ್ ಗೋಖಲೆ ಮತ್ತೆ ಸಂಗಡಿಗರು ತನ್ನ ಗುಪ್ತಾಂಗದ ಮೇಲೆ ಒದ್ದಿದ್ದಾರೆ ಅಂತ ಪ್ರಕರಣ ದಾಖಲಿಸಿದ್ದಾರೆ
ಅಂತಹ ಘಟನೆಯಿಂದ ಅಷ್ಟೊಂದು ದೈಹಿಕವಾಗಿ ನೋವಾಗಿದ್ದರೆ ಆ ಕ್ಷಣಕ್ಕೆ ಆಸ್ಪತ್ರೆಗೆ ದಾಖಲಾಗಬಹುದಿತ್ತಲ್ಲ ತಹಶಿಲ್ದಾರ ಸಾಹೇಬರು ಆದರೆ ಅವರು ದಾಖಲಾಗಿದ್ದು ಬಹಳಷ್ಟು ಹೊತ್ತಿನ ನಂತರ ಮತ್ತೊಂದು ಸುತ್ತಿನ ಕುತಂತ್ರ ಸಿದ್ದವಾದ ನಂತರ ಆ ಕುತಂತ್ರ ತಂತ್ರಿಗಳು ಯಾರೆಂಬುದು ದಲಿತರು ಅರ್ಥ ಮಾಡಿಕೊಳ್ಳಬೇಕು ನಿಮಗೆ ದೈಹಿಕವಾಗಿ ನೋವಾಗಿದೆ ಆದರೆ ಅಸಂಖ್ಯಾತ ಬಾಬಾ ಸಾಹೇಬರ ಅನುಯಾಯಿಗಳ ಮನಸಿನ ಮೇಲೆ ನ್ಯಾಯಧೀಶರು ಸುರಿದ ಬೆಂಕಿಯ ನೋವನ್ನ ಯಾರಲ್ಲಿ ಹೇಳೋಣಾ,ಯಾರಿಗೆ ತೋರಿಸೋಣಾ…? ತಮಗಿರುವ ವ್ಯಾಪ್ತಿಯಲ್ಲಿ ನೋವನ್ನ ಕೇಳುವವರಲ್ಲಿ ಬಂದಾಗ ಪ್ರಚೋದಿಸುವ ಮಾತುಗಳು,ಅಹಂಕಾರಿ ಹಾವಭಾವ,ತಿರಸ್ಕಾರದ ನೋಟದಿಂದ ಹೋರಾಟಗಾರರ ತಾಳ್ಮೆ ಪರೀಕ್ಷೆ ಮಾಡುತ್ತಿರಿ ಏನಾದರು ಘಟನೆ ಸಂಭವಿಸಿದರೆ ಸಾಕು ಹೋರಾಟಗಾರರು ಮತ್ತವರ ಇಡಿ ಸಮುದಾಯವನ್ನ ದೂರುವುದು ಈ ಬುದ್ದಿವಂತಿಕೆ ದಲಿತರಲ್ಲಿ ಬರಲು ಸಾಧ್ಯವೇ..? ಇವರೆನಿದ್ದರು ಬಲಿತವರ ಬಲಿಪಶುಗಳು ಅಷ್ಟೆ.

ಇಲ್ಲಿ ಒಟ್ಟು ನೋಡೋದಾದರೆ ತಪ್ಪು ಮಾಡಿದ್ದು ದಲಿತ ನಾಯಕರು ಮತ್ತವರ ಇಡಿ ಸಮುದಾಯ ಮಾನ್ಯ ತಹಶೀಲ್ದಾರರಾದ ಪ್ರ‍ದೀಪ್ ಕುಮಾರ್ ಹಿರೇಮಠ್ ಅವರು ಯಾವ ತಪ್ಪು ಮಾಡಿಲ್ಲ ಹಾಗಾಗಿ ಅವರ ಬೆನ್ನಿಗೆ ಅವರ ಜಾತಿಯ ರಾಜಕೀಯ ನಾಯಕರು,ಸರ್ಕಾರಿ ನೌಕರರು,ಮತ್ತವರ ಜಾತಿಯ ಸಂಘಟನೆಗಳು ನಿಂತಿವೆ.ಬಹಳ ಖುಷಿಯ ವಿಚಾರ ಒಬ್ಬರಿಗಾದ ನೋವು ನಿಮ್ಮ ಇಡಿ ಜಾತಿ ಜನಾಂಗಕೆ ಎಚ್ಚರಿಸಿ ತಹಶೀಲ್ದಾರ ಸಾಹೇಬರ ಜೊತೆಗೆ ನಿಲ್ಲಿಸಿದೆ ಆದರೆ ಇಂತಹ ಸಾವಿರಾರು ತಹಶೀಲ್ದಾರುಗಳು ಎದ್ದು ನಿಲ್ಲಲು ಕಾರಣವಾದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಗೆ ಅವಮಾನವಾದಾಗ ಇದನ್ನ ಖಂಡಿಸಲು ನೀವುಗಳು ಬರೋದಿಲ್ಲ ಯಾಕೆಂದರೆ ಅಂಬೇಡ್ಕರವರು ದಲಿತರು ಅನ್ನೋ ಜಾತಿವಾದಿ ಮಾನಸಿಕತೆಗೆ ಒಳಗಾದವರು.ಈ ದೇಶದ ಸಂವಿಧಾನ ಮತ್ತದರ ರಚನೆಕಾರ ಪ್ರತಿಯೊಬ್ಬ ಮನೆ ಮನದ ಭಾವನೆ,ವಿಚಾರ,ತಿಳುವಳಿಕೆ ಆಗಬೇಕಿತ್ತು ಅದು ಆಗಲಿಲ್ಲಾ ಹಾಗಾಗಿ ಸಂವಿಧಾನದಲ್ಲಿರು ಲಾಭಗಳು ಜಾತಿವಾರು ಪ್ರಮಾಣದಲ್ಲಿ ಬೇಕು ಆದರೆ ಅದಕ್ಕಾಗುವ ಅಪಮಾನದಲ್ಲಿ ಪಾಲುದಾರಿಕೆ ಬೇಡ.ಬಾಬಾ ಸಾಹೇಬರು ರೂಪಿಸಿರುವ ಸಾಮಾಜಿಕ ನ್ಯಾಯದ ಹಲವಾರು ಲಾಭಗಳು ಬೇಕು ಆದರೆ ಅವರಿಗೆ ಅವಮಾನವಾದಾಗ ಆ ವಿಷಯ ಬೇಡ.ಅಂಬೇಡ್ಕರ್ ಅವರಿಗೆ ಅವಮಾನವಾದರೆ ಇಡಿ ಭಾರತಿಯರಿಗೆ ಆದ ಅವಮಾನ ಕಾರಣ ಈ ಸಂವಿಧಾನ ಬಾಬಾ ಸಾಹೇಬರು ರೂಪಿಸಿದ್ದು ಇದು ಮರೆಯದೆ ಇದ್ದರೆ ಸಾಕು..

ರಾಜೇಶ್ ಸಿಂಧೆ