Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

‘ಅರಸುತನ ಮೇಲಲ್ಲ ಅಗಸತನ ಕೀಳಲ್ಲ’

ಮಡಿವಾಳ ಮಾಚಿದೇವರು ‘ಅರಸುತನ ಮೇಲಲ್ಲ ಅಗಸತನ ಕೀಳಲ್ಲ ‘ಎಂಬುದು ಜನಕ್ಕೆ ಸಾರಿದ್ದಾರೆ ಎಂದು ಉಪನ್ಯಾಸಕರಾದ ಸ್ವಾತಿ ಸಿರಂಜಿ ಹೇಳಿದರು.

ಔರಾದ ತಾಲೂಕಿನ ಸಂತಪೂರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೀನದಲಿತರ, ಶೋಷಣೆ, ಸಮಾನತೆ, ಸ್ತ್ರೀಯರ ಸ್ಥಾನಮಾನ ಇತ್ಯಾದಿಗಾಗಿ ಹೋರಾಟ ಮಾಡಿದವರು. ವಿದ್ಯಾರ್ಥಿಗಳು ಜೀವನದಲ್ಲಿ ಶರಣ ರಂತಹ ತತ್ವಗಳು ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಮಡಿವಾಳ ಮಾಚಿದೇವರು ‘ಸಾಮಾಜಿಕ ಸುಧಾರಣಾ ಚಳುವಳಿಯ ದಂಡನಾಯಕರು’. ಶರಣರ ಅಂಗರಕ್ಷಕ ರಾಗಿ ಹೋರಾಟ ಮಾಡಿದವರು. ‘ಕಾಯಕವೇ ಭಕ್ತಿ ಜೀವನದ ಉಸಿರು’ಎಂದು ನಂಬಿಕೊಂಡು ‘ಸಮಪಾಲು-ಸಮಬಾಳು’ ಎಂಬುದು ಅವರ ಉದ್ದೇಶವಾಗಿತ್ತು. ‘ಸಾಮಾಜಿಕ ಬಹಿಷ್ಕಾರ ಮತ್ತು ಶೋಷಣೆ ವಿರುದ್ಧ ಧ್ವನಿಯೆತ್ತಿದವರು’ ಮಡಿವಾಳ ಮಾಚಿದೇವರು, 12ನೇ ಶತಮಾನದ ಶರಣರಲ್ಲಿ ಅಗ್ರಮಾನ್ಯರು ಎಂದು ಹೇಳಿದರು.

ಉಪನ್ಯಾಸಕರಾದ ಭೂಷಣ್ ಪಾಟೀಲ್, ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಮೀನಾಕ್ಷಿ ಪಾಂಡ್ರೆ, ವಂದನಾ ಮಾಳಿಗೆ, ಸ್ವಾತಿ ಸಿರಂಜಿ ಇತರರು ಇದ್ದರು.