Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಆತ್ಮ ರಕ್ಷಣಾ ಕಲೆಯಿಂದ ಕರ್ನಾಟಕದ ಇತಿಹಾಸದಲ್ಲಿ ಕನಸಿನ ಅಧ್ಯಾಯ ಆರಂಭ – ಅರವಿಂದ ಅರಳಿ
ವಿದ್ಯಾರ್ಥಿಗಳಿಗೆ ಸ್ವ ರಕ್ಷಣೆ ಕಲೆಯ ತರೆಬೇತಿ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಕನಸಿದ ಅಧ್ಯಾಯ ಆರಂಭವಾಗಿದೆ.

೧೫ ವರ್ಷ ಹಿಂದೆಯೆ ಸರ್ಕಾರ ಶಾಲಾ ಹಂತದಲ್ಲಿ ಇದನ್ನು ಅನುಷ್ಠಾನ ಮಾಡಬೇಕೆಂಬ ಕೋರಿಕೆ ನಾನು ಮಾಡಿದ್ದೆ. ಅದನ್ನು ಇವತ್ತು ಸರ್ಕಾರ ಸಾಕಾರ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ವಿಧಾನ ಪರಿಷತ್ತು ಸದಸ್ಯ ಅರವಿಂದಕುಮಾರ ಅರಳಿ ನುಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಬಗದಲ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿತ ಜಿಲ್ಲಾ ಮಟ್ಟದ ಓಬವ್ವ ಆತ್ಮ ರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಶಸ್ತç ಇಲ್ಲದೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ತಂತ್ರ ಕರಾಟೆ ಕಲಿಸುತ್ತದೆ. ಇಂದು ಹೆಚ್ಚಾಗುತ್ತಿರುವ ಹೆಣ್ಣು ಮಕ್ಕಳ ಶೋಷಣೆ ಇದರಿಂದ ತಡೆಯಲು ಸಾಧ್ಯವಾಗುತ್ತದೆ ಎಂದು ಅರಳಿ ನುಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಐ.ಎ.ಎಸ್. ಪ್ರೋಬೆಷನರಿ ಅಧಿಕಾರಿ ಕೀರ್ತನಾರವರು ಮಕ್ಕಳು ಸಶಕ್ತರಾದರೆ ಮಾತ್ರ ಸ್ವ ರಕ್ಷಣೆ ಸಾಧ್ಯ. ತಮ್ಮ ತಾವು ರಕ್ಷಿಸುವ ಕಲೆ ಕಲಿತಾಗ ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ಇಂತಹ ಸ್ವ ರಕ್ಷಣಾ ಕಲೆ ಹೆಣ್ಣು ಮಕ್ಕಳಲ್ಲಿದೆ ಎಂದು ಅರಿವಾದರೆ ಯಾವ ದುರುಳನು ಹೆಣ್ಣು ಮಕ್ಕಳನ್ನು ಚುಡಾಯಿಸಲು ಕನಸಿನಲ್ಲೂ ಯೋಚಿಸಲಾರ ಎಂದು ಹೇಳಿದರು. ಈ ಕಲೆ ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ವೃದ್ಧಿಗೆ ಪೂರಕವಾಗಿ ನಮ್ಮತನ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆಯೆಂದು ನುಡಿದರು.


ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಸವರಾಜ ಬಡಿಗೇರ್ ಮಕ್ಕಳಿಗೆ ಕಲಿಕೆಯ ಉತ್ತಮ ವಾತಾವರಣ ನಿರ್ಮಿಸಿ, ಎಲ್ಲ ಅವಕಾಶ ಒದಗಿಸಿ ನಾಡಿಗೆ ಸತ್ಪçಜೆ ನಿರ್ಮಿಸಿಕೊಡುವ ಸದುದ್ದೇಶದಿಂದ ಈ ವಸತಿ ಶಾಲೆಗಳು ಆರಂಭವಾಗಿವೆ. ಈ ಶಾಲೆಗಳಿಂದ ನಾಯಕತ್ವ ಗುಣ ಬೆಳೆಸಿಕೊಂಡು,ಶೃದ್ಧೆ ಮತ್ತು ಸಮರ್ಪಣಾ ಭಾವದಿಂದ ಅಭ್ಯಾಸಿಸಿ ಸಮಾಜಕ್ಕೆ ಕೊಡುಗೆಯಾಗಿ ಮಕ್ಕಳು ನಿಲ್ಲಬೇಕೆಂದು ಅವರು ನುಡಿದರು.


ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್ ಬಿ ಯೋಗೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಅಶೋಕ ಸೇರಿಕಾರ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಮನ್ವಯಾಧಿಕಾರಿ ಶರಣಪ್ಪಾ ಬಿರಾದಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್ ಪ್ರಾಚಾರ್ಯ ಚೆನ್ನಬಸವ ಹೇಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಿನಿ ಮತ್ತು ತಂಡ ನಾಡಗೀತೆ ನಡೆಸಿಕೊಟ್ಟರು. ದೇವಿದಾಸ ಜೋಶಿ ನಿರೂಪಿಸಿದರು. ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕರಾಟೆ ಕಲೆ ಪ್ರದರ್ಶಿಸಿದರು.
ಶಿಕ್ಷಕರಾದ ಶ್ರೀಕಾಂತ ರಾಜಗೀರಾ, ಮಾರುತಿ ಸುಂಕಾ, ಸಿದ್ಧಲಿಂಗಯ್ಯ ಮಠಪತಿ, ಸವಿತಾ ಕಲ್ಲೂರ , ತ್ರಿವೇಣಿ ಮಠಪತಿ, ಪ್ರಶಾಂತ ಹೊನ್ನಾ, ಸಂತೋಷ ಚೆನ್ನವೀರೆ, ಕೃಷ್ಣಾಚಾರಿ, ತುಕಾರಾಮ, ತಿಪ್ಪಣ್ಣಾ ಚಿಂತಾಲೆ, ಮಾಣಿಕ ಸಾಗರ, ಶ್ರೀಕಾಂತ ಭೋಸ್ಲೆ, ಹಾರಿಕಾ ಬಿರಾದಾರ, ಸುವರ್ಣಾ ಬಸವರಾಜ, ಸುಮೀತ ಗಾಯಕವಾಡ, ವಸಂತ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.