Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

IPL 2022 Auction Live Updates in Kannada: ಐಪಿಎಲ್ 2022 ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮವಾಗಿದ್ದು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. 590 ಆಟಗಾರರು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ, 220 ವಿದೇಶಿ ಆಟಗಾರರಾಗಿದ್ದಾರೆ.


ಇಡೀ ಕ್ರಿಕೆಟ್ ಜಗತ್ತನ್ನೇ ತನ್ನತ್ತ ಸೆಳೆದಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ಗೆ (IPL 2022 Mega Auction) ಕ್ಷಣಗಣನೆ ಶುರುವಾಗಿದೆ. ಐಪಿಎಲ್ 2022 ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮವಾಗಿದ್ದು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಈ ಬಾರಿಯ IPL ಹರಾಜಿಗಾಗಿ ಒಟ್ಟು ವಿಶ್ವಾದ್ಯಂತ 1214 ಆಟಗಾರರು ಹೆಸರು ನೊಂದಾಯಿಸಿದ್ದರು.

ಇದರಲ್ಲಿ 896 ಭಾರತೀಯ ಆಟಗಾರರಾಗಿದ್ದರೆ, 318 ವಿದೇಶಿ ಆಟಗಾರರು ಹೆಸರು ನೊಂದಾಯಿಸಿದ್ದರು. ಈ ಪಟ್ಟಿಯನ್ನು ಬಿಸಿಸಿಐ (BCCI) ಪರಿಷ್ಕರಣೆ ಮಾಡಿದ್ದು 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ, 220 ವಿದೇಶಿ ಆಟಗಾರರಾಗಿದ್ದಾರೆ. ಇಂದು ನಡೆಯುತ್ತಿರುವಂತ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ 97 ಆಟಗಾರರ ಹರಾಜು ನಡೆಯಲಿದ್ದು, ಭಾನುವಾರ ಭೋಜನ ವಿರಾಮಕ್ಕೂ ಮುನ್ನ 98 ರಿಂದ 161ನೇ ಆಟಗಾರರ ಹರಾಜು ನಡೆಯಲಿದೆ ಎನ್ನಲಾಗುತ್ತಿದೆ.

ಈ ಬಳಿಕ ಉಳಿದ ಆಟಗಾರರ ಪೈಕಿ ಫ್ರಾಂಚೈಸಿಗಳು ಪಟ್ಟಿ ಮಾಡುವ ಆಟಗಾರರನ್ನಷ್ಟೇ ಹರಾಜು ಹಾಕಲಾಗುತ್ತದೆ. ಈ ಬಾರಿ 10ಕ್ಕೂ ಅಧಿಕ ಕ್ರಿಕೆಟಿಗರಿಗೆ 10 ಕೋಟಿ ರೂ.ಗೂ ಅಧಿಕ ಮೊತ್ತ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರರ ಮೌಲ್ಯ 20 ಕೋಟಿ ರೂ ತಪುಪಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ. ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್ (Shreyas Iyer), ಶಿಖರ್ ಧವನ್, ಕಗಿಸೊ ರಬಾಡಾ, ಕ್ವಿಂಟನ್ ಡಿಕಾಕ್, ಪ್ಯಾಟ್ ಕಮಿನ್ಸ್, ಮಿಚ್ ಮಾರ್ಶ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಮುಂತಾದವರು ಹರಾಜಿನಲ್ಲಿ ಮಿಂಚುವ ಸಾಧ್ಯೆತೆಯಿದೆ. ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಭಾರತೀಯ ಅಂಡರ್ 19 ಆಟಗಾರರೂ ಹರಾಜು ಪಟ್ಟಿಯಲ್ಲಿ ಹೆಸರು ನಮೂದಿಸಿದ್ದಾರೆ.