Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love
ಉಜನಿ ಗ್ರಾಮದಲ್ಲಿ ಬಾಲ್ಯ ವಿವಾಹ ಕುರಿತು ಕಾರ್ಯಗಾರ

ಔರಾದ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಗ್ರಾಮ ಪಂಚಾಯತ್ ಗುಡ್ಡಳ್ಳಿ ಆಶ್ರಯದಲ್ಲಿ ಬಾಲ್ಯವಿವಾಹ ಕುರಿತು ಕಾರ್ಯಗಾರ ಮತ್ತು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು ,
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನುವಹಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್  ಮಾತನಾಡಿ ಗ್ರಾಮದಲ್ಲಿ ಬಾಲ್ಯವಿವಾಹವನ್ನು ಯಾರು ಮಾಡಬಾರದೆಂದು ಮತ್ತು ಅದರಿಂದ ಉಂಟಾಗುವಂತಹ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದರು, ಅದೇ ರೀತಿ ಮಕ್ಕಳ ಸಹಾಯವಾಣಿ ಸಂಯೋಜಕರಾದ ಸುನಿಲ್ ಕುಮಾರ್ ವಾಗ್ಮಾರೆ  ಮಾತನಾಡಿ ಬಾಲ್ಯವಿವಾಹಗಳು ಮಾಡುವುದರಿಂದ ಮಕ್ಕಳ ಮೇಲೆ ದೈಹಿಕ ಮತ್ತು ಮಾನಸಿಕವಾಗಿ  ಆರೋಗ್ಯದ ಮೇಲೆ ಉಂಟಾಗುವಂತಹ ಪರಿಣಾಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತೆ ಸುರೇಖಾ  ಮಾತನಾಡಿ ಬಾಲ್ಯ ವಿವಾಹ  ಕುರಿತು ವಿವರವಾಗಿ ಕಾನೂನಾತ್ಮಕವಾಗಿ ಇರುವ ಶಿಕ್ಷೆ ಮತ್ತು ದಂಡದ ಕುರಿತು ವಿವರವಾಗಿ ವಿವರಿಸಿದ್ದಾರೆ ಈ ಸಮಯದಲ್ಲಿ ಗ್ರಾಮದ ಮನೆಮನೆಗೆ ಹೋಗಿ ಕರಪತ್ರಗಳನ್ನು ಹಂಚಿ ಜನರಿಗೆ ಅರಿವು ಮೂಡಿಸಲಾಯಿತು ಈ ಸಮಯದಲ್ಲಿ ಮಕ್ಕಳ ಸಹಾಯವಾಣಿಯ ಸದಸ್ಯರಾದ ಗೌತಮ್ ಗಾಯಕವಾಡ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯಾದ ರಜನಿ   ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ಶೋಭಾರವರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಧರ್ಮಪ್ರಕಾಶ ಉಪಸ್ಥಿತರಿದ್ದರು