Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೀದರ ಜಿಲ್ಲೆಯ ಹುಮನಾಬಾದ ತಹಸಿಲ್ದಾರ ಡಾ. ಪ್ರದೀಪ ಹೀರೆಮಠ ಅವರ ಮೇಲಿನ ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಔರಾದ ಬೇಡ ಜಂಗಮ ಸಮಾಜದ ಮುಖಂಡರು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲರಿಗೆ ಔರಾದ ತಹಸಿಲ್ದಾರ್ ಅವರ ಮುಖಾಂತರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೇಡ ಜಂಗಮ ಸಮಾಜದ ಯುವ ಮುಖಂಡ ಸಿದ್ದೇಶ್ ಸ್ವಾಮಿ ಅವರು ಮಾತನಾಡಿ ಬೀದರ ಜಿಲ್ಲೆ ಹುಮನಾಬಾದ ತಾಲೂಕು ತಹಸಿಲ್ದಾರರಾದ ಡಾ. ಪ್ರದೀಪ ಹೀರೆಮಠ ಅವರು ಕರ್ತವ್ಯನಿರತರಾಗಿದ್ದ ಸಂದಂರ್ಭದಲ್ಲಿ ಏಕಾಏಕಿ ಕಚೇರಿಗೆ ನುಗ್ಗಿ ಕಾರ್ಯನಿರತ ತಹಸಿಲ್ದಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಿರುವ ಜೊತೆಗೆ ಕಚೇರಿ ಪಿಠೋಪಕರಣಗಳನ್ನು ಧ್ವಸಗೊಳಿಸಿರುವ ಪ್ರಕರಣವನ್ನು ಔರಾದ ಬೇಡ ಜಂಗಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಈತ್ತಿಚಿಗೆ ಜಂಗಮ ಸಮೂದಾಯದ ಅಧಿಕಾರಿಗಳ ಮೇಲೆ ಮತ್ತು ಸಮಾಜದ ಮುಖಂಡರ ಮೇಲೆ ವಿನಾಕಾರಣ ದೌರ್ಜನ್ಯ ,ಹಲ್ಲೆ ಪ್ರಕರಣಗಳು ನಡೆಯುತಿದ್ದು ಸೂಕ್ತ ರಕ್ಷಣೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸದೆ ಪ್ರತಿಭಟನೆ ಹೆಸರಿನಲ್ಲಿ ಹಕ್ಕು ದುರ್ಬಳಕೆ ಮಾಡಿಕೊಂಡು ನಮ್ಮ ಸಮಜದ ಅಧಿಕಾರಿಗಳ ಮೇಲೆ ಹಾಗೂ ಸಮಾಜ ಮುಖಂಡರ ಮೇಲೆ ಅನ್ಯಾಯ , ದೌರ್ಜನ್ಯ, ಹಲ್ಲೆ ನಡೆಸುವುದು ನಮ್ಮ ಬೇಡ ಜಂಗಮ ಸಮಾಜ ತೀವೃವಾಗಿ ಖಂಡಿಸುತ್ತದೆ. ಸರ್ವ ಸಮೂದಾಯದವರನ್ನು ತೆಗೆದುಕೊಂಡು ಹೋಗುವ ಸಮಾಜ ನಮ್ಮ ಬೇಡ ಜಂಗಮ ಸಮಾಜ. ಡಾ. ಬಾಬಾ ಸಾಹೇಬರು ನೀಡಿರುವ ಸಂವಿಧಾನ ರಕ್ಷಣೆ ಮಾಡುವುದು ನಮ್ಮೇಲ್ಲರ ಹೊಣೆ. ವಿನಾಕಾರಣ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿರುವ ಸಮಾಜ ಘಾತುಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೀರೆಶ ಸ್ವಾಮಿ, ದಯಾನಂದ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಮಹೇಶ ಸ್ವಾಮಿ, ಗಣೇಶ ಸ್ವಾಮಿ, ಕುಮಾರಸ್ವಾಮಿ, ರವಿ ಸ್ವಾಮಿ ನಾಗೂರ, ಅಮರಸ್ವಾಮಿ ಸ್ಥಾವರಮಠ, ಅಮರಲಿಂಗ ಸ್ವಾಮಿವೀರೆಶ ಸ್ವಾಮಿ ಮಠಪತಿ, ಅಭಿಜಿತ್ ಸ್ವಾಮಿ ಸೇರಿದಂತೆ ಸಮಾಜ ಮುಖಂಡರು ಉಪಸ್ಥಿತರಿದ್ದರು.