Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಭಾರತದಲ್ಲಿರುವ ಕೆಲವರು ದೇಶ ವಿರೋಧಿಗಳು ಸಿಖ್ ಫಾರ್ ಜಸ್ಟೀಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುರನ್ನು ಸೇರಿಕೊಂಡು ಇಲ್ಲಿ ಹಿಜಾಬ್ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬಹುದು ಎಂದೂ ಗುಪ್ತಚರ ಸಂಸ್ಥೆಗಳು ಹೇಳಿವೆ.

ನಮ್ಮ ರಾಷ್ಟ್ರ ಮಟ್ಟದಲ್ಲೂ ಅನೇಕರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಿರುವಾಗ ಗುಪ್ತಚರ ಸಂಸ್ಥೆಗಳು ಶಾಕಿಂಗ್​ ಮಾಹಿತಿಯೊಂದನ್ನು ನೀಡಿವೆ. ಭಾರತದ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದವನ್ನು ಇನ್ನಷ್ಟು ಹೆಚ್ಚಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಪ್ರಯತ್ನ ಮಾಡುತ್ತಿದೆ.

ಅದೂ ಕೂಡ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್​ ಫಾರ್​ ಜಸ್ಟೀಸ್​ ಮೂಲಕ ಜಿಜಾಬ್ ವಿವಾದಕ್ಕೆ ಉತ್ತೇಜನ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಮಾಹಿತಿ ನೀಡಿವೆ ಎಂಬುದು ಮೂಲಗಳಿಂದ ತಿಳಿದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಭಾರತದಲ್ಲಿರುವ ಕೆಲವರು ದೇಶ ವಿರೋಧಿಗಳು ಸಿಖ್​ ಫಾರ್ ಜಸ್ಟೀಸ್​ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುರನ್ನು ಸೇರಿಕೊಂಡು ಇಲ್ಲಿ ಹಿಜಾಬ್​ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬಹುದು. ಈ ಮೂಲಕ ಇಲ್ಲಿನ ಪರ-ವಿರೋಧ ವಿವಾದವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದೂ ದೇಶದ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ. ಭಾರತದ ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಉರ್ದುಸ್ತಾನ್​ ಪರಿಕಲ್ಪನೆಗೆ ಉತ್ತೇಜನ ನೀಡಲು, ಈ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಹಿಜಾಬ್​ ಜನಾಭಿಪ್ರಾಯ ಚಳವಳಿ ಪ್ರಾರಂಭಿಸಲು ಮುಸ್ಲಿಮರಿಗೆ ಕರೆ ನೀಡಿದೆ ಎಂದೂ ಹೇಳಲಾಗಿದೆ.

ಅಷ್ಟೇ ಅಲ್ಲ, ಎಸ್ಎಫ್ಜೆ ಮುಖ್ಯಸ್ಥ ಈಗಾಗಲೇ ವಿಡಿಯೋ ಸಂದೇಶದ ಮೂಲಕ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಿದ್ದಾನೆ ಎಂದೂ ತಿಳಿಸಿಲಾಗಿದೆ.

ಭಾರತದಲ್ಲಿ ಉರ್ದುಸ್ತಾನ್ ರಚಿಸಲು ಎಸ್​ಎಫ್​ಜೆ ಎಲ್ಲ ರೀತಿಯ ಸಹಾಯ ಮಾಡುತ್ತದೆ. ಹಿಜಾಬ್​ ವಿವಾದಕ್ಕೆ ಸಂಬಂಧಪಟ್ಟಂತೆ ಜನಾಭಿಪ್ರಾಯ ಸಂಗ್ರಹಣೆ ಮಾಡಲು, ಜನರನ್ನು ಹೆಚ್ಚೆಚ್ಚು ಸಂಘಟಿಸಲು ಧನಸಹಾಯ ಮಾಡುತ್ತದೆ ಎಂದು ಸಂಘಟನೆಯ ಮುಖ್ಯಸ್ಥರು ಭಾರತದ ಮುಸ್ಲಿಮರಿಗೆ ಅದರಲ್ಲೂ ಈ ಹಿಜಾಬ್​ ಪರ ಹೋರಾಟ ನಡೆಸುತ್ತಿರುವವರಿಗೆ ಭರವಸೆ ನೀಡಿದ್ದಾರೆ. ಹಿಜಾಬ್​ಗೆ ಸಂಬಂಧಪಟ್ಟಂತೆ ಜನಾಭಿಪ್ರಾಯ ಸಂಗ್ರಹಣೆ ಮಾಡಲು ಆನ್​ಲೈನ್​ ನೋಂದಣಿ ವೇದಿಕೆಗಳೂ ಶುರುವಾಗಿದ್ದು, ಅದರ ಸ್ಕ್ರೀನ್​ಶಾಟ್​ ಫೋಟೋಗಳು ಸಿಕ್ಕಿದ್ದಾಗಿಯೂ ಭಾರತೀಯ ಗುಪ್ತಚರ ಇಲಾಖೆಗಳು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೆ ವರದಿ ಮಾಡಿದೆ.