Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

*ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಶಾಲಿವನ ಉದಗಿರೆ ರವರಿಗೆ ಸನ್ಮಾನ ಕಾರ್ಯಕ್ರಮ*
ನಿಕಟಪೂರ್ವ ಅಧ್ಯಕ್ಷರಾದ *ಜಗನಾಥ ಮೂಲಗೆ* ರವರ ನೇತೃತ್ವದಲ್ಲಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಶಾಲಿಮಾನ ಉದಗಿರೆ ದಂಪತಿಗಳಿಗೆ ಸಿಹಿ ತಿನಿಸಿ ಸನ್ಮಾನ ಗೈಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಖ್ಯಾತ ಸಾಹಿತಿ *ಮನ್ಮಥ ಡೋಳೆ* ರವರು ಮಾತನಾಡಿ.ಗಡಿ ಭಾಗದಲ್ಲಿ ಸೂಕ್ತ ವ್ಯಕ್ತಿತ್ವವುಳ್ಳ ಕ್ರಿಯಾಶೀಲ ವ್ಯಕ್ತಿಗೆ ಪರಿಷತ್ತಿನ ಸಾರಥ್ಯ ನೀಡಿರುವುದು ತುಂಬಾ ಸಂತಸ ತಂದಿದೆ.ನೇಮಕಾತಿ ಮಾಡಿರುವ ಸುರೇಶ ಚನಶೆಟ್ಟಿ ಅವರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.ಮುಂಬರುವ ದಿನಗಳಲ್ಲಿ ಹಲವಾರು ರಚನಾತ್ಮಕ ಕಾರ್ಯಗಳ ಮಾಡುವುದರ ಮೂಲಕ ಗಡಿಭಾಗದಲ್ಲಿ ನಾಡು ನುಡಿ ಉಳಿಸುವ ಸೇವೆ ಮಾಡಲಿಕ್ಕೆ ನಾವೆಲ್ಲರೂ ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿ ಸ್ಥಾನ ವಹಿಸಿರುವ ಜಗನ್ನಾಥ ಮೂಲಗೆ ರವರು ಮಾತನಾಡಿ ಬಹು ಮುಖ್ಯ ಪ್ರತಿಭೆವುಳ್ಳ.ಮತ್ತು ಅತ್ಯಂತ ಕ್ರಿಯಾಶೀಲ ಕನ್ನಡದ ಕಟ್ಟಾಳು ವಿಧಾನ ಪರಿಷತ್ತಿನ ಚುಕ್ಕಾಣಿ ನೀಡಿರುವುದು ಇಡೀ ಕನ್ನಡಿಗರಿಗೆ ಸಂತಸ ತಂದಿದೆ ಎಂದು ಹೇಳಿದರು. ಮುಂಬರುವ ಇವರ ಅವಧಿಯಲ್ಲಿ ತಾಯಿ ಭುವನೇಶ್ವರಿ ಸೇವೆ ತುಂಬಾ ಅತ್ಯುತ್ತಮವಾಗಿ ನೆರವೇರಲಿ ಎಂದು ಆ ಭುವನೇಶ್ವರಿಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು.
ಮಲ್ಲಿಕಾರ್ಜುನ ಟಂಕಸಾಲೆ, ರವರು ಸಂಚಲನೆಯನ್ನು ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡದ ಕಟ್ಟಾಳುಗಳು ವಿವಿಧ ಸಂಘಟನೆ ಮುಖ್ಯಸ್ಥರುಗಳಾದ ಅಮೃತರಾವ ಬಿರಾದಾರ, ಅಶೋಕ ಅಲ್ಮಾಜೆ, ಅಶೋಕ ಶೆಂಬೆಳ್ಳಿ ,ವಿರೇಶ ಮೀಸೆ, ಉಮಾಕಾಂತ ಮಹಾಜನ,ಶಿವು ಕಾಂಬಳೆ,ಯಾದು ಮೇತ್ರೆ, ಶಿವಲಿಂಗ ಯರಗಲ,ಸಂಜಯ ಮೇತ್ರೆ ,ಗುರುನಾಥ ತವಾಡೆ, ಶಿವಕುಮಾರ ಪಾಟೀಲ, ಸುರೇಶ ಮಠಪತಿ,ನಾಗನಾಥ ಮಾದೇವಡ, ರಾಮರೆಡ್ಡಿ, ದೇವಿದಾಸ ಮಡಿವಾಳ, ಹಣಮಂತ ನವಾಡೆ ,ಸುಂದರ ಮೇತ್ರೆ,ರಾಜಕುಮಾರ ಡೋಣಗಾಪುರೆ,ದಶರಥ ವಾಗ್ಮರೆ,ಬಸವರಾಜ ಜಾಗವ, ಬಸವರಾಜ ತೇಲಿ, ಸಂಗಮೇಶ್ವರ ಬಿರಾದಾರ, ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಉತ್ತಮ ಅಧ್ಯಕ್ಷರ ಆಯ್ಕೆಯಿಂದ ವಿವಿಧ ಸಂಘಟನೆಯ ಪದಾಧಿಕಾರಿಗಳು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ.