Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೆಂಗಳೂರು : ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ(Ramesh JarakiHoli) ಮತ್ತೆ ಸಂಕಷ್ಟ ಎದುರಾಗಿದ್ದು, ಸಂತ್ರಸ್ತೆ ಪರ ವಕೀಲರಿಂದ ಪ್ರೊಟೆಸ್ಟ್ ಅರ್ಜಿ(Protest Application) ಸಲ್ಲಿಕೆ ಮಾಡಲಾಗಿದೆ.

ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ಮರು ತನಿಖೆ ಕೋರಿದ್ದಾರೆ.
ಈ ಅರ್ಜಿಯಲ್ಲಿ 10 ಅಂಶಗಳನ್ನ ಉಲ್ಲೇಖ ಮಾಡಲಾಗಿದ್ದು, ರಮೇಶ್ ಜಾರಕಿಹೊಳಿಯನ್ನ ಸರಿಯಾಗಿ ವಿಚಾರಣೆ ನಡೆಸಿಲ್ಲ. ಪ್ರಕರಣದ ಕುರಿತು ಎಸ್‌ಐಟಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದಿದ್ದಾರೆ.

ಇನ್ನು ಆರೋಪಿ ರಮೇಶ್ ಬಂಧಿಸಲು ಅವಕಾಶವಿದ್ದರೂ ಬಂಧಿಸಿಲ್ಲ. ಸಂತ್ರಸ್ತೆ ಹೇಳಿಕೆಯನ್ನ ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ. ಇನ್ನು ಪ್ರಕರಣದ ಮಹಜರು ಪ್ರಕ್ರಿಯೆಯನ್ನ ಸರಿಯಾಗಿ ಮಾಡಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕುವಲ್ಲಿ, ಸಂಗ್ರಹಿಸುವಲ್ಲಿ ಲೋಪ ಆಗಿದೆ. ಸಿಡಿಯ ವಿಡಿಯೋದಲ್ಲಿರುವವರ ಹೇಳಿಕೆಯನ್ನ ದಾಖಲಿಸಿಲ್ಲ. ಸಮರ್ಪಕ ವಿಚಾರಣೆ ನಡೆಸಿ ಸರಿಯಾಗಿ ಹೇಳಿಕೆ ದಾಖಲಿಸಿಲ್ಲ. ಈ ಎಲ್ಲ ಅಂಶಗಳನ್ನ ಉಲ್ಲೇಖಿಸಿ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.