Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ತಹಸೀಲ್ದಾರ ಹೀರೆಮಠ ಮೇಲೆ ಹಲ್ಲೆ : ಬೇಡ ಜಂಗಮ ಸಮಾಜದ ಖಂಡನೆ

ಔರಾದ : ಹುಮನಾಬಾದ್ ತಾಲ್ಲೂಕು ಕಚೇರಿಯಲ್ಲಿ ಈಚೆಗೆ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿ ಕಚೇರಿಯಲ್ಲಿನ ಪೀಠೋಪ ಕರಣಗಳನ್ನು ಧ್ವಂಸಗೊ ಳಿಸಿರುವುದು ಖಂಡನೀಯ ಇದು ನಮ್ಮ ಬೇಡ ಜಂಗಮ ಸಮಾಜ ಖಂಡಿಸುತ್ತದೆ. ಗೂಂಡಾ ವರ್ತನೆ ತೋರಿರುವ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಂಗಮ ಸಮಾಜದ ಯುವ ಮುಖಂಡ ಅಮರಸ್ವಾಮಿ ಸ್ಥಾವರಮಠ ಅವರು ಒತ್ತಾಯಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬಿಎಸ್‍ಪಿ ಕಾರ್ಯಕರ್ತರು, ಮನವಿಪತ್ರ ಸ್ವೀಕರಿಸಲು ಸ್ಥಳಕ್ಕೆ ಬರುವಂತೆ ತಹಶೀಲ್ದಾರರಿಗೆ ಮನವಿ ಮಾಡಿದರು.

‘ಆಯುಷ್ಮಾನ್ ಭಾರತ್ ಯೋಜನೆಯಡಿ ಆಹಾರ ಪೂರೈಕೆ ಮಾಡುವವಿತರಕರೊಂದಿಗೆ ಸಭೆ ನಡೆಸುತ್ತಿದ್ದ ಕಾರಣ . ಸಭೆ ಮುಗಿದ ತಕ್ಷಣ ಮನವಿ ಸ್ವೀಕರಿಸುತ್ತೇನೆ.
ಐದು ನಿಮಿಷ ಕಾಯುವಂತೆ ಹೇಳಿದರು. ಅವರು ಈಗಲೇ ತೆಗೆದುಕೊಳ್ಳುವಂತೆ ಒತ್ತಾಯಿಸಿದಾಗ ಗ್ರೇಡ್-2 ತಹಶೀಲ್ದಾರ್ ಬಳಿ ಕೊಡುವಂತೆ ಸೂಚಿಸಿದಕ್ಕೆ . ಅಷ್ಟಕ್ಕೇ ಅವರು ಕಿರುಚಾಡುತ್ತ ತಹಸಿಲ್ದಾರ ಪ್ರದೀಪ ಹಿರೇಮಠ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಗುಪ್ತಾಂಗಕ್ಕೆ ಒದ್ದಿದ್ದಾರೆ. ಅವರ ಹಿಂಬಾಲಕರು ಅಂಗಿ ಹಿಡಿದು ಎಳೆದಾಡಿದ್ದಾರೆ’ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸದೆ ಸಂವಿಧಾನ ಶಿಲ್ಪಿಯ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರುವ ಸಮಾಜ ಘಾತುಕರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ನಮ್ಮ ಸಮಾಜದ ಯಾವುದೇ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಬೇಕು ಎಂದು ಅಮರಸ್ವಾಮಿ ಸ್ಥಾವರಮಠ ಆಗ್ರಹಿಸಿದರು.