Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕಿತ್ತೂರ ರಾಣಿ ವಸತಿ ನಿಲಯ ಹಾಗೂ ಡಾ ಬಿ ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಊಟದಲ್ಲಿ ಹುಳಗಳು ಬಂದಕಾರಣ ಅಲ್ಲಿನ ವಿದ್ಯಾರ್ಥಿಗಳು ಶಾಲೆ ಮುಂಭಾಗದಲ್ಲಿ ಹೋರಾಟ ಮಾಡುತ್ತಿರುವ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಕರೆಗೆ ಓಗೊಟ್ಟು ಕರವೇ ಕಾರ್ಯಕರ್ತರು ವಸತಿ ನಿಲಯಕ್ಕೆ ಭೇಟಿಮಾಡಿ. ಅಲ್ಲಿನ ಸಮಸ್ಯೆಗಳನ್ನು ವಸತಿ ನಿಲಯಕ್ಕೆ ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ ತಾಲೂಕು ಕರವೇ ಅದ್ಯಕ್ಷ ರಾಜಕುಮಾರ ಎಡವೆ ಕರೆ ಮಾಡಿ ಮೂಲಭೂತ ಸಮಸ್ಯಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸಮಾಜ ಕಲ್ಯಾಣ ಜಿಲ್ಲಾಧಿಕಾರಿ ತಾಲೂಕು ಅದ್ಯಕ್ಷ ರಾಜಕುಮಾರ ಎಡವೆಗೆ ಪೊನಿನಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿ ಹಾಗೂ ನಿನ್ಯಾರು ನನ್ನ ವಸತಿ ನಿಲಯಕ್ಕೆ ಹೋಗುವನು ನಿನ್ನ ಮೇಲೆ ಕೇಸದಾಖಲಿಸುವೆ ಎಂದು ಏಕ ವಚನದಲ್ಲಿ ಮಾತನಾಡಿದ ವಸತಿ ನಿಲಯಕ್ಕೆ ಸಂಬಂಧ ಪಟ್ಟ ಜಿಲ್ಲಾಧಿಕಾರಿ..

  1. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಕಾರ್ಯ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಶಕ್ತಿ ಜನಸಾಮಾನ್ಯರಿಗೆ ಇದೆ ಪೊನಿನ ಕರೆಯಲ್ಲಿ ನಮ್ಮ ತಾಲೂಕು ಅದ್ಯಕ್ಷ ರಾಜಕುಮಾರ ಎಡವೆ ಅವರಿಗೆ ಏಕವಚನ ದಲ್ಲಿ ಹಾಗೂ ನಿನ್ನ ಮೇಲೆ FIR ದಾಖಲಿಸುತ್ತೆನೆ ಎಂದು ಅವಾಜ ಹಾಕಿದ ಸಮಾಜ ಕಲ್ಯಾಣ ಜಿಲ್ಲಾಧಿಕಾರಿ ಮಾತನಾಡಿರುವದು ಖಂಡನಿಯವಾಗಿದೆ

    ಎಂದು ಕರವೇ ಕಾರ್ಯಕರ್ತರಾದ ಸಿದ್ದು ಚಾರೆ,ಅಮಿತ ಶಿವುಪೂಜೆ,ಸಾಗರ ಚಿದ್ರೆ,ಸಂತೋಷ ದ್ಯಾಡೆ, ದತ್ತು ಕೆ,ಅಮರ ನಿಸ್ಪತೆ ಖಂಡಿಸಿ.

ದಿನಾಂಕ 8-2-2022 ರಂದು ವಸತಿ ನಿಲಯದ ಎದುರು ತಾಲೂಕು ಕರವೇ ಕಾರ್ಯಕರ್ತರಿಂದ ವಸತಿ ನಿಲಯದ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ  ಪ್ರತಿಭಟನೆ ಮಾಡಲಾಗುವದು ಎಂದರು.