Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಭಾವೈಕತೆಗಾಗಿ
ವಸ್ತ್ರ ಸಂಹಿತೆ ಪಾಲಿಸುವಂತೆ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಎಬಿವಿಪಿ ಮನವಿ.

ಕಳೆದೆರಡು ವರ್ಷಗಳಿಂದ ಕೋವಿಡನ ಪರಿಣಾಮದಿಂದ ಸರಿಯಾಗಿ ತರಗತಿಗಳು ನಡೆಯದಿರುವ ಕಾರಣ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿರುವ ಘಾಸಿ ಇನ್ನೂ ಮಾಯವಾಗದಿರುವಾಗಲೇ ಸಮಾಜದಲ್ಲಿ ಐಕ್ಯತೆ ಮೂಡಿಸುವಲ್ಲಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಸಂತ ಶಿಶುನಾಳ ಮತ್ತು ಕನಕದಾಸರ ನಾಡಿನಲ್ಲಿ ಇತ್ತೀಚಿಗೆ ಕೆಲ ಕಾಲೇಜುಗಳಲ್ಲಿ ಇದೀಗ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಪ್ರಾರಂಭವಾಗಿರುವುದು ಶೋಚನೀಯ ಸಂಗತಿವಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಭಾವೈಕತೆಯ ಶಿಕ್ಷಣವೇ ಮುಖ್ಯ ಎಂಬ ಸಂವಿಧಾನದ ಆಶಯವನ್ನು ಮರೆತು ಕೆಲವರು ಶಾಲ್ ಮತ್ತು ಹಿಜಾಬ್ ಗಳನ್ನು ಅಸ್ತ್ರವಾಗಿಟ್ಟುಕೊಂಡು ಸುಖಾಸುಮ್ಮನೆ ವಿವಾದಗಳನ್ನು ಸೃಷ್ಟಿಸುವ ಷಡ್ಯಂತ್ರಗಳು ನಡೆಸುತ್ತಿರುವುದು ಖೇದಕರದ ಸಂಗತಿ.

ರಾಜ್ಯದ ವಿದ್ಯಾರ್ಥಿ ಸಮುದಾಯದಲ್ಲಿ ಇಂತಹ ವಿಷ ಬೀಜವನ್ನು ಬಿತ್ತಿ ಸಮಾಜದಲ್ಲಿ ಐಕ್ಯತಾ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿರುವವರ ಕುರಿತಾಗಿ ಸರಕಾರ ಉನ್ನತ ಹಂತದಲ್ಲಿ ತನಿಖೆಯನ್ನು ಮಾಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರಕಾರಕ್ಕೆ ಆಗ್ರಹಿಸುತ್ತದೆ.

ಪರೀಕ್ಷೆಯ ಸಮಯ ತುಂಬಾ ಹತ್ತಿರವಿದ್ದು ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡದೇ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲನ್ನು ಧರಿಸದೇ ಕಾಲೇಜು ಸಮವಸ್ತ್ರವನ್ನು ಧರಿಸಿ ವಿದ್ಯಾರ್ಜನೆ ಕಡೆ ಗಮನ ಹರಿಸಿ ಎಂಬುವುದು ಎಬಿವಿಪಿಯ ಆಶಯವಾಗಿದೆ.

ಸಮಾಜದ ಐಕ್ಯತೆಗಾಗಿ ಮತ್ತು ಯುವಕರ ಒಗ್ಗಟ್ಟಿಗಾಗಿ ಶಾಲಾ ಕಾಲೇಜುಗಳಲ್ಲಿ ಸರಕಾರ ವಸ್ತ್ರ ಸಂಹಿತೆ ಹೇಗಿರಬೇಕೆಂದು ಸುತ್ತೋಲೆಯ ಮೂಲಕ ಸೂಚಿಸಿರುವುದನ್ನು ಪಾಲನೆ ಮಾಡುವಂತೆ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿ ಮಾಡುತ್ತದೆ.

ಧನ್ಯವಾದಗಳೊಂದಿಗೆ.