Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

*ಎರಡು ಶಾಲೆ ಒಂದೆ ಸ್ಥಳದಲ್ಲಿದ್ದು ಇಬ್ಬರು ಪ್ರಾಂಶುಪಾಲರು ಇಬ್ಬರು ವಾರ್ಡನಗಳಿದ್ದು ಮೂಲಭೂತ ಸೌಲಭ್ಯ ಇಲ್ಲದೆ ವಂಚಿತರಾದ ವನಮಾರಪಳ್ಳಿ ವಸತಿ ಶಾಲೆ ಮಕ್ಕಳು*

 

ಔರಾದ :- ತಾಲೂಕಿನ ವನಮಾರಪಳ್ಳಿ ಕಿತ್ತೂರು ರಾಣಿ ವಸತಿ ಶಾಲೆ ಹಾಗೂ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಒಂದೆ ಸ್ಥಳದಲ್ಲಿದ್ದು ಇಬ್ಬರು ವಾರ್ಡನಗಳಿದ್ದರು ಕೂಡಾ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ವಂಚಿತರಾದ ವಿದ್ಯಾರ್ಥಿನಿಯರು ಮೆನುಚಾಟ ಪ್ರಕಾರ ಊಟ ಸಿಗುತ್ತಿಲ್ಲ,ಚಳಿಗಾಲದಲ್ಲಿ ಸ್ನಾನ ಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲ,ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ ಎನಾದರು ಕೇಳಿಕೆ ಹೋದರೆ ಪ್ರಾಂಶುಪಾಲರು ಹಾಗೂ ವಾರ್ಡನ ಅವರು ಹೆದರಿಸುತ್ತಾರೆ ಎನ್ನುತ್ತಾರೆ ವಿದ್ಯಾರ್ಥಿನಿಯರು. ಕರವೇ ಕಾರ್ಯಕರ್ತರಿಂದ ಶಾಲೆಯ ಎದುರು ಪ್ರತಿಭಟನೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಕರವೇ ಅದ್ಯಕ್ಷ ರಾಜಕುಮಾರ ಎಡವೆ.

ಕಿತ್ತೂರ ರಾಣಿ ವಸತಿ ನಿಲಯ ಹಾಗೂ ಡಾ ಬಿ ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಊಟದಲ್ಲಿ ಹುಳಗಳು ಬಂದಕಾರಣ ಅಲ್ಲಿನ ವಿದ್ಯಾರ್ಥಿಗಳು ಶಾಲೆ ಮುಂಭಾಗದಲ್ಲಿ ಹೋರಾಟ ಮಾಡುತ್ತಿರುವ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಕರೆಗೆ ಓಗೊಟ್ಟು ಕರವೇ ಕಾರ್ಯಕರ್ತರು ವಸತಿ ನಿಲಯಕ್ಕೆ ಭೇಟಿಮಾಡಿ. ಅಲ್ಲಿನ ಸಮಸ್ಯೆಗಳನ್ನು ವಸತಿ ನಿಲಯಕ್ಕೆ ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ ತಾಲೂಕು ಕರವೇ ಅದ್ಯಕ್ಷ ರಾಜಕುಮಾರ ಎಡವೆ ಕರೆ ಮಾಡಿ ಮೂಲಭೂತ ಸಮಸ್ಯಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸಮಾಜ ಕಲ್ಯಾಣ ಉಪನಿರ್ದೆಶಕ ಯೊಗೇಶ ಕರವೇ ತಾಲೂಕು ಅದ್ಯಕ್ಷ ರಾಜಕುಮಾರ ಎಡವೆಗೆ ಪೊನಿನಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿ ಹಾಗೂ ನಿನ್ಯಾರು ನನ್ನ ವಸತಿ ನಿಲಯಕ್ಕೆ ಹೋಗುವನು ನಿನ್ನ ಮೇಲೆ ಕೇಸದಾಖಲಿಸುವೆ ಎಂದು ಏಕ ವಚನದಲ್ಲಿ ಮಾತನಾಡಿದ ವಸತಿ ನಿಲಯಕ್ಕೆ ಸಂಬಂಧ ಪಟ್ಟ ಅಧಿಕಾರಿ ಯೊಗೇಶ.

ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಕಾರ್ಯ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಶಕ್ತಿ ಜನಸಾಮಾನ್ಯರಿಗೆ ಇದೆ ಪೊನಿನ ಕರೆಯಲ್ಲಿ ನಮ್ಮ ತಾಲೂಕು ಅದ್ಯಕ್ಷ ರಾಜಕುಮಾರ ಎಡವೆ ಅವರಿಗೆ ಏಕವಚನ ದಲ್ಲಿ ಹಾಗೂ ನಿನ್ನ ಮೇಲೆ FIR ದಾಖಲಿಸುತ್ತೆನೆ ಎಂದು ಅವಾಜ ಹಾಕಿದ ಸಮಾಜ ಕಲ್ಯಾಣ ಜಿಲ್ಲಾಧಿಕಾರಿ ಮಾತನಾಡಿರುವದು ಖಂಡನಿಯವಾಗಿದೆ.

ಕೂಡಲೇ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೊಗೇಶ ಅವರು ಕ್ಷಮೆಯಾಚಿಸಬೇಕು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಊಟ, ಚಳಿಗಾಲದಲ್ಲಿ ಬಿಸಿನೀರಿನ ವ್ಯವಸ್ಥೆ,ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಹೇದರಿಸುವ ಕಾರ್ಯ ಈ ವಸತಿ ನಿಲಯದಲ್ಲಿ ನಡೆಯುತ್ತಿದೆ ಕೂಡಲೇ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಸರಿಪಡಿಸುವಲ್ಲಿ ಮುಂದಾಗಬೇಕು ಎಂದು ಇಂದು ತಾಲೂಕು ಕರವೇ ಕಾರ್ಯಕರ್ತರು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಒಂದು ವಾರದಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಇದ್ದಲ್ಲಿ ಒಂದು ವಾರದಲ್ಲಿ ಜಿಲ್ಲಾ ಪಂಚಾಯತ ಕಾರ್ಯಾಲಯ ಎದುರು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುವದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಔರಾದ ಪಿಎಸ್ಐ ಮಂಜನಗೌಡ ಪಾಟೀಲ್ ಸರಕಾರಿ ನೌಕರರ ಸಂಘದ ತಾಲೂಕು ಅದ್ಯಕ್ಷ ಶಿವುಕೂಮಾರ ಘಾಟೆ, ಕರವೇ ಕಾರ್ಯಕರ್ತರಾದ ಸಿದ್ದು ಚಾರೆ,ಅಮಿತ ಶಿವುಪೂಜೆ,ಸಾಗರ ಚಿದ್ರೆ,ಸಂತೋಷ ದ್ಯಾಡೆ, ದತ್ತು ಕೆ,ಅಮರ ನಿಸ್ಪತೆ,ಶಂಕು ನಿಸ್ಪತೆ, ವಿವೇಕ ನಿರ್ಮಳೆ,ಅನೀಲ ಹೇಡೆ,ರಾಜು ಮುಧಾಳೆ,ಬಾಲಾಜಿ ದಾಮಾ,ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.