Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಎಲ್ಲರೂ ಒಂದಾಗಿ ಬಾಳಿದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ: ಅಮರವಾಡಿ

 

ಔರಾದ್: ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಬಾಳಿದರೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಬರಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವನ್ನು ಎಲ್ಲೆಡೆ ಪಸರಿಸಿದಾಗ ಸಮಾಜದಲ್ಲಿ ಉತ್ತಮವಾಗಿ ಶಾಂತಿಯಿಂದ ಬದುಕಲು ಸಾಧ್ಯ ಎಂದು ದಾಸ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಸಾಹಿತಿ ಬಿಎಂ ಅಮರವಾಡಿ ಹೇಳಿದರು.

 

ತಾಲ್ಲೂಕಿನ ವನಮಾರಪಳ್ಳಿ ಗ್ರಾಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಿಳಾ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂತಪೂರ ಸಹಯೋಗದಲ್ಲಿ ಈಚೆಗೆ ಸಾಂಸ್ಕೃತಿಕ ಉತ್ಸವ ಹಾಗೂ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ದಾರ್ಶನಿಕ, ಮಹಾತ್ಮರು ಹೆಳಿಕೂಟ್ಟ ಮಾರ್ಗದಲ್ಲಿ ನಡೆದರೆ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ಮೂಲಗೆ ಮಾತನಾಡಿ, ಈ ಗಡಿನಾಡಿನಲ್ಲಿ ಎಲ್ಲಾ ಸಮುದಾಯದ ಭಾಂಧವವರು ತಮ್ಮ ತಮ್ಮ ಮಾತೃಭಾಷೆಯ ಜತೆಯಲ್ಲಿ ಇತರೆ ಭಾಷೆಗಳಿಗೆ ಪ್ರೀತಿಸುವ ಮೂಲಕ ಸೌಹಾರ್ದತೆ ಬೆಳೆಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ವಕ್ಕೂಟದ ಅದ್ಯಕ್ಷ ವಿಜಯಕುಮಾರ್ ಸೋನಾರೆ ಹಾಗೂ ಕಸಾಪ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ, ಸಾಮಾಜಿಕ ಚಿಂತಕ ರಿಯಾಜಪಾಶಾ ಕೊಳ್ಳೂರ, ಗ್ರಾಪಂ ಅಧ್ಯಕ್ಷೆ ಅನಿತಾ ಬಿರಾದಾರ, ಚಿನ್ನಮ ಲಾಧಾ, ಶಿವಾಜಿ ಬಿರಾದಾರ, ಶಕುಂತಲಾ ಬಿರಾದಾರ, ಕಲ್ಲಪ್ಪ ಟಮಕೆ, ಸಂಗಮೇಶ ಮಾಟುರೆ ಬೆಲ್ದಾಳ, ಸಿದ್ದಯ್ಯ ಸ್ವಾಮಿ, ಮಾರುತಿ ರಾವಣಗಾವೆ ಸಂಗಮೇಶ ಸೇರಿದಂತೆ ಇತರರು ಇದ್ದರು. ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಹಾಗೂ ಭಾವೈಕತೆಯ ಹರಿಕಾರ ಪದ್ಮಶ್ರೀ ಇಬ್ರಾಹಿಂ ಸುತಾರ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದರು.