Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ಪಟ್ಟಣದ ಸಮಾಜ ಕಲ್ಯಾಣ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗಿಲ್ಲ ಮೂಲ ಭೂತ ಸೌಲಭ್ಯ. ಗುಣಮಟ್ಟದ ಸಾಂಬಾರ ಮಾಡುವದಿಲ್ಲ,ಮೆನುಚಾಟ ಪ್ರಕಾರ ಊಟ ನಿಡುತ್ತಿಲ್ಲ,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,ಬಿಸಿ ನೀರಿನ ವ್ಯವಸ್ಥೆ ಅಂತು ಇಲ್ಲವೆ ಇಲ್ಲ,ಸರಿಯಾದ ಸಮಯಕ್ಕೆ ವಾರ್ಡ್‌ನ ವಸತಿ ನಿಲಯಕ್ಕೆ ಬರುವುದಿಲ್ಲ,SSLC ಪರೀಕ್ಷೆ ಸಮೀಪ ಬಂದರು ನಮಗೆ ಒದುವಂತ ಮನಸ್ಥಿತಿ ನಮಗಿಲ್ಲಿ ಸಿಗುತ್ತಿಲ್ಲ ಎಂದು ವಸತಿ ನಿಲಯದ ಮಕ್ಕಳು ತಮ್ಮ ಅಳುವು ತೊಡಿಕೊಂಡರು.ಕೂಡಲೇ ಇಲ್ಲಿನ ಮಕ್ಕಳ ಹೇಳಿಕೆಗೆ ಸ್ಪಂದಿಸಿ ಇಲ್ಲಿನ SSLC ಒದುತ್ತಿರುವ ಮಕ್ಕಳ ಫಲಿತಾಂಶ ಗಮನದಲ್ಲಿ ಇಟ್ಟುಕೊಂಡು ಸಮಾಜ ಕಲ್ಯಾಣ ಅಧಿಕಾರಿಗಳು ಮೂಲಭೂತ ಸೌಲಭ್ಯಗಳನ್ನು ವದಗಿಸುವಲ್ಲಿ ಮುಂದಾಗಬೇಕು ಎಂದು ABVP ಪ್ರಮುಖ ರಮೇಶ್ ವಾಗಮಾರೆ ತಿಳಿಸಿದರು.ಒಂದು ವೆಳೆ ಮೂಲಭೂತ ಸೌಲಭ್ಯ ಸಿಗದೆ ಇದ್ದಲ್ಲಿ ಒಂದು ವಾರದಲ್ಲಿ ಎಬಿವಿಪಿ ಔರಾದ ಶಾಖೆ ವತಿಯಿಂದ ವಸತಿ ನಿಲಯದ ಎದುರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.