Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

*ಔರಾದನಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ*

ಔರಾದ ಪಟ್ಟಣದ ಬಸ್ ನಿಲ್ದಾಣ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶಿವು ಭಕ್ತ ಮಂಡಳಿಯ ಪ್ರಮುಖರಾದ ಶಿವಾಜಿರಾವ ಪಾಟೀಲ್ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿವಾಜಿರಾವ ಪಾಟೀಲ್ ಮಾತನಾಡಿ ಛತ್ರಪತಿ ಶಿವಾಜಿ ಧೈರ್ಯ ಮತ್ತು ಅಸಾಧರಣ ಯುದ್ಧತಂತ್ರಗಳಿಗೆ ಹೆಸರಾಗಿದ್ದರು ಅವರ ದೇಶ ಪ್ರೇಮ ಪ್ರತಿಯೊಬ್ಬ ಭಾರಿತೀಯರನ್ನು ಪ್ರೆರೆಪಿಸುತ್ತದೆ ಶಿವಾಜಿ ಮಹಾರಾಜರ ಜನ್ಮದಿನದಂದು ಅವರಿಗೆ ನನ್ನ ನಮನಗಳು ಅವರ ನಾಯಕತ್ವ ಮತ್ತು ಸಮಾಜ ಕಲ್ಯಾಣ ಕಾರ್ಯಗಳು ಎಲ್ಲರಿಗೂ ಮಾದರಿ ಎಂದರು.

ಖ್ಯಾತ ವೈದ್ಯ ಡಾ ಕಲ್ಲಪ್ಪಾ ಉಪ್ಪೆ ಹಾಗೂ ಬಾಲಾಜಿ ನರೊಟೆ ನೇತ್ರತ್ವದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮ‌ೂಲಕ ಸರಳವಾಗಿ ಸಾರ್ಮಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ರಾಮಶೇಟ್ಟಿ ಪನ್ನಾಳೆ,ಪ ಪ ಅದ್ಯಕ್ಷೆ ಅಂಬಿಕಾ ಕೆರಬಾ ಪವಾರ,ಶಿವಾಜಿರಾವ ಪಾಟೀಲ್ ಮುಂಗನಾಳ, ಪಂಡರಿ ಅಡೆ,ರಹೀಮ ಸಾಬ, ಗೋವಿಂದ ನಿಂಗಳೆ,ಸತೀಶ್ ವಾಸರೆ,ರಾಮರಾವ ಜಾಧವ,ಬಾಲಾಜಿ ಜಾಧವ, ಸಂಬಾಜಿ ಬ್ರಿಗೇಡ್ ಪ್ರಮುಖ ಖಂಡೆರಾವ ರಂದವೆ,ಕೊಂಡಿಬಾ ಬಿರಾದಾರ,ವೇಂಕಟರಾವ ನೇಳಗೆ,ವಿಜಯಕುಮಾರ್ ನುಂದನೂರೆ,ಉದ್ದವರಾವ ನೇಳಗೆ,ಬಾಲಾಜಿ ಜಬಡೆ,ನಾರಾಯಣ ಮುಳೆ,ಶರತ ಪವಾರ,ಹಾಗೂ ಅನೇಕ ಸಂಘ ಸಂಸ್ಥೆಗಳ ಅದ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.