Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದನಲ್ಲಿ ಹರ್ಷ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆ ಪ್ರತಿಭಟನೆ.

ಔರಾದ್: ಶಿವಮೊಗ್ಗದಲ್ಲಿ ಬಜರಂಗದಳ
ಕಾರ್ಯಕರ್ತ ಹರ್ಷನನ್ನು ಬರ್ಬರ ರೀತಿಯಲ್ಲಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಕೊಲೆಗಡುಕರನ್ನು ಎನ್‌ಕೌಂಟರ್ ಮಾಡಿ ತಕ್ಕ ಉತ್ತರ ನೀಡುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು
ಮುಖಂಡ ರಾಜಕುಮಾರ ಎಡವೆ ನುಡಿದರು.

ಗುರುವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕ್ರಾಸ್‌ನಲ್ಲಿ ಹಿಂದೂಪರ ಒಕ್ಕೂಟ ಸಂಘಟನೆಯ ಕಾರ್ಯಕರ್ತರು ಹರ್ಷ ಹತ್ಯೆ ಖಂಡಿಸಿ ಪ್ರತಿಭಟನೆ ಸಮಯದಲ್ಲಿ ಮಾತನಾಡಿದ ಅವರು, ಕಳೆದ ೧೬ ವರ್ಷಗಳಿಂದ ಧರ್ಮ ಮತ್ತು ಸಮಾಜಕ್ಕೆ ದುಡಿಯುತ್ತಿದ್ದ ಸಂಘ ಪರಿವಾರದ ಹಲವು ಕಾರ್ಯಕರ್ತರು ಬಲಿಯಾಗಿದ್ದಾರೆ. ಇನ್ನೆಷ್ಟು ಕಾರ್ಯಕರ್ತರ ಬಲಿಗಾಗಿ ಕಾಯುತ್ತಿದ್ದೀರಿ ಎಂದು ಸರಕಾರವನ್ನು ಪ್ರಶ್ನಿಸಿದರು.

ನಮ್ಮ ದೇಶದಲ್ಲಿ ಹಿಂದು ಧರ್ಮಕ್ಕೆ ರಕ್ಷಣೆಯಾಗಬೇಕು.ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಿಂದು ಪರ‌ ಸರ್ಕಾರಗಳಿದ್ದು ಐದು ವರ್ಷದಲ್ಲಿ ೧೮ ಹಿಂದು ಕಾರ್ಯಕರ್ತರ ಹತ್ಯೆ ಯಾಗಿದೆ ಇನ್ನು ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ.ಇದು ನಮ್ಮ‌ ದುರ್ದೈವದ ಸಂಗತಿಯಾಗಿದೆ ಎಂದು ಎಬಿವಿಪಿ ಮುಖಂಡ ಹಾವಪ್ಪಾ ದ್ಯಾಡೆ ನುಡಿದರು.

ಹತ್ಯೆಗೆ ಸಂಚು ಹಾಕಿದ ಸೂಪಾರಿಗಳನ್ನು ಪೋಲಿಸ್ ರು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡುವಲ್ಲಿ ಮುಂದಾಗಬೇಕು ಎಂದು ಮುಖಂಡ ಬಸವರಾಜ ಹಳ್ಳೆ ಹೇಳಿದರು.

ಹಿರಿಯ ಜೀವಿ ಕಲ್ಲಪ್ಪಾ ದೇಶಮುಖ ಮಾತನಾಡಿ ನಮ್ಮ ದೇಶದಲ್ಲಿನ ಮುಸ್ಲಿಮರೆ ಎನಾದರು ಹಿಂದೆ ಮಾಡುವಂತ ಕೃತ್ಯಗಳನ್ನು ಬಿಟ್ಟು ಮುಂದೆ ಬನ್ನಿ ನೋಡಿಕೊಳ್ಳೊಣ ನಮ್ಮ ನಿಮ್ಮ ಶಕ್ತಿ ಮನೆಯಲ್ಲಿಟ್ಟುಕೊಂಡು ಮೊದಲು ದೇಶ ಸೇವೆಯಲ್ಲಿ ತೊಡಗೊಣ ಬೆನ್ನಿನಲ್ಲಿ ಚೂರಿಹಾಕುವದನ್ನು ಬಿಟ್ಟು ಬಿಡಿ ಎಂದರು.
ಹಿಂದು ಸಮಾಜಕ್ಕೆ ತಲತಲಾಂತರ ವರ್ಷಗಳ ಇತಿಹಾಸವಿದೆ. ಹಲವು ಮತಗಳ ದಾಳಿಗೆ ತುತ್ತಾದರೂ ಮತ್ತೇ ಸಿಡಿದೆದ್ದು ನಿಂತಿದೆ. ಹಿಂದು ಧರ್ಮ ಹಿಂಸಾಚಾರವನ್ನು ಕಲಿಸಿಲ್ಲ. ಧರ್ಮಕ್ಕೆ ದಕ್ಕೆಯಾದಾಗ
ಹಲವಾರು ಮಹಾಪುರುಷರು ಜನ್ಮನೀಡಿದ್ದರು. ದೇಶ,
ಕಾನೂನು,ಸಂವಿಧಾನ, ಸಂಸ್ಕೃತಿಗೆ ಗೌರವ ನೀಡಿ ಬದುಕಲು ಕಲಿಯಿರಿ. ಅದು ಸಾಧ್ಯವಿಲ್ಲದೇ ಹೋದಲ್ಲಿ ತಮಗೆ ಬೇಕಾದ ಅನುಕೂಲ ಇರುವ ದೇಶವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅಕ್ರೋಷ ವ್ಯಕ್ತಪಡಿಸಿದರು.

ಪ್ರತಿಭಟನೆಯೂ ಪಟ್ಟಣದ ಎಪಿಎಂಸಿ ಕ್ರಾಸ್ ನಿಂದ ಹಿಡಿದು ಕೇಂದ್ರ ಬಸ್ ನಿಲ್ದಾಣ, ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮೂಲಕ ಜರುಗಿತು. ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು.ನಂತರ ಮುಖ್ಯಮಂತ್ರಿ ಹಾಗು ಗೃಹ ಸಚಿವರಿಗೆ ಬರೆದ
ಮನವಿಯನ್ನು ತಹಸೀಲ್ದಾರ್ ಅರುಣಕುಮಾರ್ ಕುಲಕರ್ಣಿ ಅವರಿಗೆ ನೀಡಲಾಯಿತು.

ಪ್ರತಿಭಟನೆಯಲ್ಲಿ ಹಿಂದು ಪರ ಮುಖಂಡರಾದ ರಾಮಶೆಟ್ಟಿ ಪನ್ನಾಳೆ,ಶಿವಾಜಿರಾವ ಪಾಟೀಲ್ ಮುಂಗನಾಳ, ಆನಂದ್ ದ್ಯಾಡೆ, ಅಶೋಕ ಶೆಂಬೆಳ್ಳಿ, ಬಸವರಾಜ್ ಶೆಟಕಾರ್, ಹಾವಪ್ಪ ದ್ಯಾಡೆ, ಕಲ್ಲಪ್ಪ ದೇಶಮುಖ,ಅನೀಲ್ ನಿರ್ಮಳೆ, ಪ್ರಶಾಂತ ದೇಶಮುಖ,ಬಸವರಾಜ್ ಹಳ್ಳೆ,ರಾಜಕುಮಾರ್ ಎಡವೇ, ಬಸವರಾಜ್ ಶೆಟಕಾರ್,ಅನೀಲ ಹೇಡೆ, ಸಂದಿಪ ಪಾಟೀಲ,ಸಂಗು ಪಾಟೀಲ್ ವಿರೇಶ ಅಲ್ಮಾಜೆ,ವಿವೇಕ ನಿರ್ಮಳೆ,ಬಾಲಾಜಿ ದಾಮಾ,ರಮೇಶ ವಾಘಮಾರೆ,ಸಚಿನ ನಿಟ್ಟುರೆ,ಅನೇಕ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಇದ್ದರು.