Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ಸಾರ್ವಜನಿಕ ಆಸ್ಪತ್ರೆಗೆ ಧಿಡಿರ ಭೇಟಿ :ಸಚಿವ ಚವ್ಹಾಣ

ಔರಾದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಧಿಡಿರ ಭೇಟಿ ನೀಡಿ ವೈದ್ಯಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ
ಸೂಮಾರು ಬಾರಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ನನ್ನ ಗಮನಕ್ಕೆ ಬಂದಿವೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಜಿಲ್ಲಾ ಆಸ್ಪತ್ರೆಗೆ ಕಳಿಹಿಸುತ್ತಿರುವದು ಸರಿಯಲ್ಲ.ಪ್ರಾಥಮಿಕ ಚಿಕಿತ್ಸೆ ನಿಡುವಲ್ಲಿ ಯಶಸ್ವಿಯಾಗಿ ಔರಾದ-ಬೀದರ್ ರಸ್ತೆಕಾಮಗಾರಿ ಪ್ರಾರಂಭದಿಂದ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಲು ಸಮಸ್ಯೆ ಉಂಟಾಗುತ್ತಿದೆ ರೋಗಿಗಳಿಗೆ ದೇವರ ರೋಪದಲ್ಲಿ ಕಾಣುವದಾದರೆ ಕೇಲಸ ಮಾಡಿ ಇಲ್ಲದಿದ್ದರೆ ಜಾಗ ಖಾಲಿಮಾಡಿ ಎಂದರು.
ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ವೈದ್ಯಧಿಕಾರಿಗಳು ಬರುತ್ತಿಲ್ಲ ಇಲ್ಲಿನ ಸಿಎಂಓ ಡಾ ಸಿದ್ದಾರ್ಥ ರೊಗಿಗಳಿಗೆ ಗುಂಡಾ ವರ್ತನೆ ತೊರಿಸುತ್ತಿದ್ದಾರೆ.ಗುಣಮಟ್ಟದ ಮಾತ್ರೆಗಳು ಆಸ್ಪತ್ರೆಯಲ್ಲಿ ಲಭ್ಯ ವಿಲ್ಲ ಪ್ರತಿದಿನ ಆಸ್ಪತ್ರೆಗೆ ವೈದ್ಯಧಿಕಾರಿಗಳು ಮುಂಜಾನೆ 11 ಗಂಟೆಯ ನಂತರ ಬರುತ್ತಾರೆ ಸಾಯಂಕಾಲ 4 ಗಂಟೆಯ ನಂತರ ಯಾರು ಇರುವದಿಲ್ಲ ಸಾಯಂಕಾಲ ರೋಗಿಗಳು ತಮ್ಮ ಜೀವದ ಹಂಗನ್ನು ತೊರೆದು ವೈದ್ಯರ ಬರುವಿಕೆಗೆ ಕಾಯಬೇಕಾಗುತ್ತೆ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಟ್ಸೆಸ್ಟಿಂಗ್ ರಿಪೋರ್ಟ್ ಸರಿಯಾಗಿ ಮಾಡುತ್ತಿಲ್ಲ .ವೈದ್ಯ ಡಾ ಪ್ರಮೋದ್ ಒಬ್ಬರೇ ಸರಿಯಾದ ರೀತಿಯಲ್ಲಿ ಸ್ಪಂದಿಸಿ ರೋಗಿಗಳ ದೇವತೆ ಎನಿಸಿಕೊಂಡಿದ್ದಾರೆ ಎಂದು ಪಟ್ಟಣದ ಯುವ ಮುಖಂಡ ಸಂದೀಪ್ ಪಾಟೀಲ್ ಸಚಿವರ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.