Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೋರ್ಗಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೌಭಾಗ್ಯ ಒದಗಿಸಿದ ಶಿಕ್ಷಕ ಮುತ್ತಣ್ಣ ರಂಡ್ಯಾಳೆ

ಬೀದರ: ಒಂದು ಕಡೆ ಸರ್ಕಾರಿ ಶಾಲೆಗಳು ಮಕಳಿಲ್ಲಿದೆ ಮುಚ್ಚಲ್ಪಡುತ್ತಿದ್ದರೆ, ಔರಾದ ತಾಲೂಕಿನ ಬೋರ್ಗಿ(ಜೆ) ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಾಲೆಯ ಶಿಕ್ಷಕ ಮುತ್ತಣ್ಣ ರಂಡ್ಯಾಳೆ ತನ್ನ ಸ್ವತಃ ಹಣದಲ್ಲಿಯೇ ಸ್ಮಾರ್ಟ್ ಕ್ಲಾಸ್ ಪ್ರಾರಂಭ ಮಾಡಿ ಜಿಲ್ಲೆಯಲ್ಲಿ ಮಾದರಿ ಶಿಕ್ಷಕರಾಗಿದ್ದಾರೆ.

ಧ್ವನಿ, ದ್ರಶ್ಯ ಮೂಲಕ ಎಲ್ಇಡಿ ಪರದೆ ಮುಖಾಂತರ ಮಕ್ಕಳಿಗೆ ಸ್ಮಾರ್ಟ್ ಶಿಕ್ಷಣ ನಿಡಲಾಗುತ್ತಿದೆ. ಸರ್ಕಾರಿ ಶಾಲೆ ಎಂದೊಡನೆ ಮಕ್ಕಳನ್ನು ಆ ಶಾಲೆಗೆ ಸೇರಿಸಿಲ್ಲ, ಪಾಲಕರು ಹಿಂದೆಟು ಹಾಕುವರು ಏಕೆಂದರೆ ಸರ್ಕಾರಿ ಶಾಲೆಯ ಅವ್ಯವಸ್ಥೆ, ಶಿಕ್ಷಕರ ಅಶಿಸ್ತಿನ ಪಾಠ, ಶಾಲೆಯ ವಾತಾವರಣ ಎಲ್ಲವೂ ಮೂಡಿವೆ, ಆದರೆ ಇಲ್ಲೊಂದು ಶಾಲೆ ಇವೆಲ್ಲವನ್ನೂ ಅಲ್ಲಿಗಳೆದು ಖಾಸಗಿ ಶಾಲೆಗೂ ಸೆಡ್ಡು ಹೊಡೆಯುವಂತೆ ಬೆಳೆದು ಜಿಲ್ಲೆಯ ಬೇರೆಲ್ಲಾ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿ ನಿಂತಿದೆ. ಈ ಸ್ಮಾರ್ಟ್ ಕ್ಲಾಸ್ ಇರುವುದು ಬೀದರ ಜಿಲ್ಲೆಯ ಔರಾದ ತಾಲೂಕಿನ ಬೋರ್ಗಿ(ಜೆ) ಗ್ರಾಮದಲ್ಲಿ ಬೇರೆ ಎಲ್ಲಾ ಸರ್ಕಾರಿ ಶಾಲೆಗಳಂತೆಯೇ ಈ ಶಾಲೆಯಿತ್ತು ಆದರೆ ಇಂದು ತಾಲೂಕಿನ ಮೊದಲ ಸ್ಮಾರ್ಟ್ ಶಾಲೆಯಾಗಿ ಹೊರಹೊಮ್ಮಿದೆ. ಇದು ಸಾಧ್ಯವಾಗಿದ್ದು ಶಿಕ್ಷಕ ಮುತ್ತಣ್ಣ ರಂಡ್ಯಾಳೆ ಅವರಿಂದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಮುತ್ತಣ್ಣ ರಂಡ್ಯಾಳೆ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶಾಲೆಗೆ ಬಂದ ಹೊಸದರಲ್ಲಿ ಈ ಶಾಲೆಗೆ ಯಾವುದೇ ಮೂಲ ಸೌಕರ್ಯಗಳು ಇರಲಿಲ್ಲವಾದ್ದರಿಂದ ಶಿಕ್ಷಕ ಮುತ್ತಣ್ಣ ಈ ಶಾಲೆಯನ್ನು ಕನಸಿನ ಶಾಲೆಯಾಗಿ ಪರಿವರ್ತಿಸಲು ಮುಂದಾದರೂ ಇವರು ಶಾಲೆಗೆ ಬಂದ ನಂತರ ಅವರ ಗೆಳೆಯರ ಬಳಗದ ಸಹಕಾರದಿಂದ 1.43 ಸಾವಿರ ರೂಪಾಯಿ ಜಮೆ ಮಾಡಿ ಆ ಹಣದಲ್ಲಿಯೇ ಶಾಲೆಗೆ 15 ಬ್ಯಾಂಚಸ್, ಸ್ಮಾರ್ಟ್ ಬೋರ್ಡ್, ವಿದ್ಯಾರ್ಥಿಗಳಿಗೆ ಡಿಕ್ಷನರಿ ಹಾಗೂ ಕಂಪಸ್, ಸ್ಮಾರ್ಟ್ ಟಿವಿ ಸೇರಿದಂತೆ ಶಾಲೆಯ ಆವರಣದಲ್ಲಿ ಹಲವಾರು ರೀತಿಯ ಅನೇಕ ಗಿಡಮರ ಬೆಳೆಸಿದ್ದಾರೆ.

ಕಳೆದ ಜನವರಿ 12 ಸ್ವಾಮಿ ವಿವೇಕಾನಂದ ಜಯಂತಿ ದಿನದಂದು ಶಾಲೆಯ ಮಕ್ಕಳಿಂದಲೇ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಲಾಗಿದೆ. 1 ರಿಂದ 8ನೇ ತರಗತಿಯ ವರೆಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ 120 ಇದೆ. ಆದರೆ ಮುಖ್ಯ ಶಿಕ್ಷಕರು ಸೇರಿದಂತೆ ಒಟ್ಟು ನಾಲ್ಕು ಶಿಕ್ಷಕರಿದ್ದಾರೆ. ಇನ್ನು ಇಬ್ಬರ ಶಿಕ್ಷರ ಕೊರತ ಕಾಡುತ್ತಿದೆ, ಈ ಕೊರತೆ ನೀಗಿಸಲು ಸ್ಮಾರ್ಟ್ ಕ್ಲಾಸ್ ಅತ್ಯಂತ ಉಪಯುಕ್ತವಾಗಿದೆ. ಶಿಕ್ಷಕ ಮುತ್ತಣ್ಣ ರಂಡ್ಯಾಳೆ ಅವರು ಮಕ್ಕಳಿಗೆ ನೂತನ ಕಲಿಕೆ ಸೌಲಭ್ಯ ಕಲ್ಪಿಸಿದು ನಮಗೆ ಹೆಮ್ಮೆ ಎನಿಸುತ್ತಿದೆ‌. ಎಂದು ಮುಖ್ಯಗುರು ಪ್ರಕಾಶ ರಾಜೋಳೆ ಅವರು ಹೇಳಿದ್ದಾರೆ.