Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಭಾಲ್ಕಿ : ಚಂಬೆಳಕಿನ ಸಾತ್ವಿಕ ಕವಿ, ನವೋದಯ ಮಧ್ಯ ಕಾಲದಲ್ಲಿ ಕುವೆಂಪು, ಬೇಂದ್ರೆ, ಮಧುರಚೆನ್ನರ ಪ್ರಭಾವಕ್ಕೊಳಗಾಗಿ ತನ್ನದೇ ಕಾವ್ಯ ಶೈಲಿಯಿಂದ ಚಿರಪರಿಚಿತ ರಾದ ನಾಡೋಜ, ಪಂಪ ಪ್ರಶಸ್ತಿ ವಿಜೇತ ಕವಿ ಚೆನ್ನವೀರ ಕಣವಿಯವರ ಅಗಲುವಿಕೆಯಿಂದ ಎರಡನೇ ತಲೆಮಾರಿನ ಕೊಂಡಿಯೊಂದು ಕಳಚಿದಂತಾಯಿತು. ಇದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕಸಾಪ ಭಾಲ್ಕಿ ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ರಾದ ನಾಗಭೂಷಣ ಮಾಮಡಿ ತಮ್ಮ ನುಡಿನಮನದಲ್ಲಿ ತಮ್ಮ ಭಾವಪೂರ್ಣ ಸಂವೇದನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಿವಾನಂದ ದಾಡಗೆ, ರಾಜಕುಮಾರ ಸಾಲಿ ಸೇರಿದಂತೆ ಹತ್ತಾರು ಜನ ಅಗಲಿದ ದಿವ್ಯ ಚೇತನಕ್ಕೆ ತಮ್ಮ ಭಾವ ಪೂರ್ಣ ನುಡಿನಮನವನ್ನು ಸಮರ್ಪಿಸಿದರು.

ಶಿವಾನಂದ ದಾಡಗೆ ಮಾತನಾಡಿ ನಾಡೊಜ ಚನ್ನವೀರ್ ಕಣವಿ ಅವರು
ಕುವೆಂಪು ಕಾರಂತರು ಬೇಂದ್ರೆ ಅವರ ಪ್ರಭಾವಕ್ಕೆ ಒಳಗಾಗಿದ್ದರು ಅವರ ವೇಷಭೂಷಣ್ ತಲೆಮೇಲಿನ ಟೋಪಿ ವಿಭಿನ್ನವಾಗಿ ಧರಿಸುವುದರಿಂದ ಬೇಗನೆ ಗುರುತು ಸಿಗುತ್ತಿದ್ದರು
ಮೊನ್ನೆ ಅಷ್ಟೇ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅವರ ಕುಶಲೋಪರಿ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದರು
ನಾಡೊಜ ಚನ್ನವೀರ್ ಕಣವಿ ಅವರ ಮೂರನೇ ಸಂಗ್ರಹ ಆಕಾಶಬುಟ್ಟಿ 1953ರಲ್ಲಿ ಪ್ರಕಟವಾಗಿತ್ತು ಇದರಲ್ಲಿನ ಪ್ರಜಾಪ್ರಭುತ್ವ ಎಂಬ ಕವಿತೆಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬಹುದು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ, ರಾಜಕುಮಾರ ಸಾಲಿ, ರಮೇಶ ಮನಶೆಟ್ಟಿ, ಸಂತೋಷ ಬಿಜಿ ಪಾಟೀಲ, ಶೇಖ ಸಾಬೀರ ಪಟೇಲ, ಬಾಲಾಜಿ ಕಾಂಬ್ಳೆ, ಗದಗಪ್ಪ ಪಾಟೀಲ, ರತ್ನದೀಪ ಹುಲ್ಸುರೇ, ಬಾಜಿರಾವ ಮೆಹತ್ರೆ, ಕಾಶೀನಾಥ ಲದ್ದೆ, ದೀಪಕ ತಮಕೆ, ಬಸವಪ್ರಭು ಸೋಲಾಪುರೆ, ಷಡಕ್ಷರಿ ಹಿರೇಮಠ, ಕುಪೇಂದ್ರ ಜಗಶೇಟ್ಟಿ, ಶಿವಾನಂದ ದಾಡಗೆ, ಸಂಗಮೇಷ ಟೆಂಕಲೇ, ಕೈಲಾಶ್ ಪಾಟೀಲ್, ಶಿವಕಾಂತ್ ಪಾಟೀಲ್ ಮುಂತಾದವರು ನುಡಿನಮನ ಸಲ್ಲಿಸಿದರು.