Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love
*ಪಟ್ಟಣ ಪಂಚಾಯತ್ ಕಾರ್ಯಲಯದಲ್ಲಿ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಪೂರ್ವಭಾವಿ ಸಭೆ*
ಔರಾದ ಪಟ್ಟಣದ ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಇಂದು ಮಹಾಶಿವ ರಾತ್ರಿ ಹಾಗೂ ಶ್ರೀ ಉದ್ಭವಲಿಂಗ ಅಮರೇಶ್ವರರ ಜಾತ್ರೆ ಅಂಗವಾಗಿ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳನ್ನು ವದಗಿಸುವದು,ಇಡೀ ಪಟ್ಟಣಕ್ಕೆ ಸ್ವಚ್ಚತೆಯಿಂದ ಕಂಗೊಳಿಸುವದು ಜೊತೆಗೆ ಪಟ್ಟದ ಮುಖ್ಯರಸ್ತೆಗಳು ದೀಪಗಳಿಂದ ಬೇಳಗುವಂತೆ ಮುಖ್ಯರಸ್ತೆಗಳಲ್ಲಿ ಹಾಗೂ ಒಣಿಗಳಲ್ಲಿ ದೀಪಗಳಿಂದ ಅಲಂಕರಿಸುವದು.ಇಡೀ ಪಟ್ಟಣವು ಸ್ವಚ್ಚತೆಯಿಂದ ಕಂಗೊಳಿಸಬೇಕು ಅದೇರಿತಿ ದೇವರ ಮೆರವಣಿಗೆಯಲ್ಲಿ ಯಾವುದೇ ಅಡಚಣೆ ಆಗದಂತೆ ನೊಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ ಪಂಚಾಯತ್ ಅದ್ಯಕ್ಷೆ ಅಂಬಿಕಾ ಪವಾರ ಹಾಗೂ  ಉಪಾಧ್ಯಕ್ಷ ಸಂತೋಷ ಪೊಕಲವಾರ ಸಭೆಯಲ್ಲಿ ಅಭಿಪ್ರಾಯ ಪಟ್ಟರು.ಒಟ್ಟಾರೆಯಾಗಿ ಮಹಾ ಶಿವರಾತ್ರಿ ಹಾಗೂ ಅಮರೇಶ್ವರ ಜಾತ್ರೆ ಬೆಳಕಿನಿಂದ ಕಂಗೊಳಿಸಬೇಕು ಶಾಂತಿ ಸೌಹಾರ್ದತೆಯಿಂದ ಹೆಸರಾಗಬೇಕು ಎಂದು ಪ ಪ ಸದಸ್ಯ ಸುನಿಲಕೂಮಾರ ದೇಶಮುಖ ನುಡಿದರು.
ಜಾತ್ರೆಯು ಸ್ವಚ್ಚತೆಯಿಂದ ಕಂಗೊಳಿಸಬೇಕು ಕೊವಿಡ್ ನಿಯಮ ಪಾಲಿಸುವದರ ಮೂಲಕ ಜಾತ್ರೆ ಯಶಸ್ವಿಯಾಗಿ ಗೊಳಿಸಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರವಿ ಸೂಕುಮಾರ ನಿರ್ಧರಿಸಿದರು. ಈ ಸಂದರ್ಭದಲ್ಲಿ ಪ ಪ ಸದಸ್ಯರಾದ ಸುನಿಲಕುಮಾರ ದೇಶಮುಖ,ಧೊಂಡಿಬಾ  ನರೊಟೆ,ದಯಾನಂದ ಘುಳೆ,ಸಂಜು ವಡಿಯಾರ,ಯಾದು ಮೇತ್ರೆ,ಸಂತೋಷ ಖಾನಾಪುರೆ,ಅಫಜಲ ಪಟಾಣ,ಗುಂಡಪ್ಪ ಮುಧಾಳೆ,ಸುರೇಖಾ ಶಿಂಗೆ,ಬನ್ಸಿನಾಯಕ,ಚೇತನ ಕಪ್ಪಿಕೇರೆ,ಶ್ರೀ ಕಾಂತ ಅಲಮಾಜೆ,ಸುಂದರ ಮುಧಾಳೆ, ವಿಜಯ ದೇವಕತೆ. ಔರಾದ ಪೊಲೀಸ್ ಠಾಣೆ ಪಿಎಸ್ಐ ಮಂಜನಗೌಡ ಪಾಟೀಲ್, ಜೆಸ್ಕಾಂ ಎಇಇ ರವಿ ಕಾರಬಾರಿ,ಮುಖ್ಯಾಧಿಕಾರಿ ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.