Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಭಾಲ್ಕಿ

ಇದೇ ತಿಂಗಳು ಫೆಬ್ರುವರಿ 19 ಶನಿವಾರದಂದು ಹಿಂದವಿ ಸ್ವರಾಜ್ಯ ಸಂಸ್ಥಾಪಕರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಭಾಲ್ಕಿ ಪಟ್ಟಣದಲ್ಲಿ ಆಚರಿಸಲಾಗುತ್ತಿದ್ದು ತಾಲೂಕಿನಾದ್ಯಂತದ ಎಲ್ಲ ಸಮಾಜದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕ ಶಿವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ವೈಜನಾಥ್ ತಗಾರೇ ಅವರು ಮನವಿ ಮಾಡಿದರು

ಪಟ್ಟಣದ ಜಿಜಾ ಮಾತಾ ಗ್ರಂಥಾಲಯದಲ್ಲಿ ಸಾರ್ವಜನಿಕ ಶಿವ ಜಯಂತಿ ಉತ್ಸವ ಆಚರಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇದೆ 19 ಫೇಬ್ರುವರಿ ಶನಿವಾರ ದಂದು ಪಟ್ಟಣದ ಗ್ರಾಮದೇವತೆ ಶ್ರೀ ಭಾಲ್ಕೆಶ್ವರ ದೇವಸ್ಥಾನದಲ್ಲಿ ಮಂಗಳಾರುತಿ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ದೇವಸ್ಥಾನದಿಂದ ಪ್ರಾರಂಭಗೊಳ್ಳುವ ಮೆರವಣಿಗೆಯೂ ಭೋಮಗೊಂಡೇಶ್ವರ ವೃತ್ತ, ಅಂಬೇಡ್ಕರ ವೃತ, ಗಾಂಧಿ ವೃತದ ಮಾರ್ಗದಿಂದ, ಛತ್ರಪತಿ ಶಿವಾಜಿ ಮಹಾರಾಜರ ವೃತಕ್ಕೆ ಭಜನೆ, ಕೀರ್ತನೆ, ಕೋಲಾಟ, ಡೊಳ್ಳು ಕುಣಿತ ಹೀಗೆ ಹತ್ತಾರು ಸಾಂಸ್ಕೃತಿಕ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತ ಬಂದು ತಲುಪುವುದು ಸಾಯಂಕಾಲ 5-00 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗುವುದು

ಕಾರ್ಯಕ್ರಮದ ಸ್ವಾಗತ ಭಾಷಣವನ್ನ ಕಿಶನರಾವ ಪಾಟೀಲ್ ಇಂಚುರಕರ ಮಾಡುವರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಜನಾರ್ಧನ ಬಿರಾದಾರ, ಉದ್ಘಾಟನೆಯನ್ನ ಕೇಂದ್ರ ರಾಸಾಯನಿಕ ಖಾತೆ ಮಂತ್ರಿ, ಸಂಸದ ಭಗವಂತ ಖುಭಾ ಮಾಡುವರು, ಬೀದರ್ ಜಿಲ್ಲೆ ಉಸ್ತುವಾರಿ ಸಚಿವರಾದ ಶಂಕರ ಬಿ ಪಾಟೀಲ್ ಮುಖ್ಯ ಅತಿಥಿ ಸ್ಥಾನ ವಹಿಸಿಕೊಳ್ಳುವರು, ರಾಜ್ಯದ ಪಶು ಸಂಗೋಪನಾ ಮಂತ್ರಿಗಳಾದ ಪ್ರಭು ಚೌಹಾನ, ಪ್ರಕಾಶ ಜಿ ಖಂಡ್ರೆ, ಡಿ. ಕೆ. ಸಿದ್ರಾಮ, ಅನೀಲ್ ಶಿಂದೆ, ಸುಭಾಷ ಶೆಡೋಳೆ, ಗೋವಿಂದರಾವ ಮಾವಿನಹಳ್ಳಿ, ಸತೀಶ್ ಕುಮಾರ ಸೂರ್ಯವಂಶಿ, ಕಿರಣ ಖಂಡ್ರೆ, ಜೈರಾಜ್ ಕೊಳ್ಳಾ, ಕೀರ್ತಿರತನ ಸೊನಾಳೆ, ದೀಪಕ್ ಶಿಂದೆ, ಪಾಂಡುರಂಗ ಕನಸೆ, ಹೀಗೆ ಸರ್ವ ಸಮಾಜದ ಬಾಂಧವರು ಸೇರಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಾರಕರಿ ಸಂಘದ ಅಧ್ಯಕ್ಷರಾದ ನಿವರ್ತಿರಾವ್ ಮಹಾರಾಜ. ಹಲ್ಲಾಳಿಕರ್ ಹಾಗೂ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ದಿವ್ಯ ಸಾನಿಧ್ಯದಲ್ಲಿ, ಸುಪ್ರಸಿದ್ದ ಶಿವಶಾಹಿರ್ ಭಗವಾನ್ ದಾದಾ ಗಾವಂಡೆ ಅಕೋಲಾ ಇವರ ಪೊವಾಡ್ಯದ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಸಮಿತಿಯ
ಸದಸ್ಯರು ತಿಳಿಸಿದರು

ಸಮಿತಿಯ ಯುವ ಮುಖಂಡ ಭರತ ತುಕದೆ ಮಾತನಾಡಿ ಯುವಕರು ಶಿವಾಜಿ ಮಹಾರಾಜರ ತತ್ವ ಸಿದ್ಧಾಂತಗಳನ್ನು ಅವರ ಆದರ್ಶಗಳನ್ನು ಮೈ ಗುಡಿಸಿಕೊಳ್ಳಬೇಕಾಗಿದೆ ಜಾತ್ಯತೀತ ಪಕ್ಷತೀತವಾಗಿ ಜಯಂತಿಯಲ್ಲಿ ಭಾಗವಹಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದರು

ವರದಿ
ಸಂತೋಷ ಬಿಜಿ ಪಾಟೀಲ
ಭಾಲ್ಕಿ