Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

 

Sunny Leone: ಸನ್ನಿ ಲಿಯೋನ್​ ಹೆಸರಲ್ಲಿ ಲೋನ್​ ಪಡೆದ ಖದೀಮ; ಶಾಕ್​ ಆದ ನಟಿ

 

ನಟಿ ಸನ್ನಿ ಲಿಯೋನ್ (Sunny Leone)​ ಅವರಿಗೆ ಬಾಲಿವುಡ್​ನಲ್ಲಿ ದೊಡ್ಡ ಬೇಡಿಕೆ ಇದೆ. ನೀಲಿ ಸಿನಿಮಾಗಳಲ್ಲಿ ಆ್ಯಕ್ಟೀವ್​ ಆಗಿದ್ದ ಅವರು, ನಂತರ ಅದನ್ನು ತೊರೆದು ಬಾಲಿವುಡ್​ಗೆ ಕಾಲಿಟ್ಟರು. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಕನ್ನಡದ (Sandalwood) ವಿಶೇಷ ಹಾಡಿನಲ್ಲೂ ಸನ್ನಿ ಡ್ಯಾನ್ಸ್​ ಮಾಡಿದ್ದಾರೆ. ಬೇಸರದ ಸಂಗತಿ ಎಂದರೆ ಸನ್ನಿ ಲಿಯೋನ್​ಗೆ  ಮೋಸ ಆಗಿದೆ! ಅವರ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್​ ಪಡೆಯಲಾಗಿದೆ. ಈ ವಿಚಾರವನ್ನು ಕೇಳಿ ಸನ್ನಿ ಲಿಯೋನ್​ ನಿಜಕ್ಕೂ ಶಾಕ್​ ಆಗಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿ ಬೇಸರ ತೋಡಿಕೊಂಡಿದ್ದಾರೆ. ಸನ್ನಿ ಈ ರೀತಿ ಟ್ವೀಟ್​ ಮಾಡಿದ ಬೆನ್ನಲ್ಲೇ ಅನೇಕರು ಇದೇ ಮಾದರಿಯ ಟ್ವೀಟ್​ ಮಾಡಿದ್ದು, ತಮಗೂ ಮೋಸ ಆಗಿದೆ ಎಂದಿದ್ದಾರೆ.

ಸನ್ನಿ ಲಿಯೋನ್​ ಅವರ ನಕಲಿ ಪಾನ್​ ಕಾರ್ಡ್​ ಬಳಕೆ ಮಾಡಿಕೊಂಡು ಈ ಲೋನ್​ ಪಡೆಯಲಾಗಿದೆ. ಧಾನಿ ಸ್ಟಾಕ್​ ಲಿಮಿಟೆಡ್​ ಪ್ಲಾಟ್​ಫಾರ್ಮ್​​ನಲ್ಲಿ ಈ ಮೊಸ ನಡೆದಿದೆ.  ‘ಯಾವುದೋ ಮೂರ್ಖ ನನ್ನ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್​ ಪಡೆದಿದ್ದಾನೆ! ಸಿಬಿಲ್​ ಸ್ಕೋರ್​ಗೆ ತೊಂದರೆ ಆಗಿದೆ. ಇಂಡಿಯಾಬುಲ್​ ಸೆಕ್ಯೂರಿಟಿ ಲಿಮಿಟೆಡ್​​ನಲ್ಲಿ (ಧಾನಿ ಸ್ಟಾಕ್​ ಈ ಮೊದಲು ಇಂಡಿಯನ್​ ಬುಲ್​ ಸೆಕ್ಯೂರಿಟಿ ಆಗಿತ್ತು)ಈ ಫ್ರಾಡ್​ ನಡೆದಿದೆ’ ಎಂದಿದ್ದಾರೆ ಸನ್ನಿ.

ಗ್ರೋಸರಿ ಮೊದಲಾದ ವಸ್ತು ಖರೀದಿ ಮಾಡಲು 5 ಲಕ್ಷ ರೂಪಾಯಿ ವರೆಗೆ ಲೋನ್​ ನೀಡುವ ಸೇವೆಯನ್ನು ಧಾನಿ ಮಾಡುತ್ತಿದೆ. ಈ ರೀತಿಯಲ್ಲಿ ಟ್ವೀಟ್ ಮಾಡಿದ ನಂತರದಲ್ಲಿ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಿದೆ. ಈ ಬಗ್ಗೆಯೂ ಸನ್ನಿ ಟ್ವೀಟ್​ ಮಾಡಿದ್ದು, ‘ಬ್ಯಾಡ್​ ಸಿಬಿಲ್​ ಸ್ಕೋರ್​ ಯಾರಿಗೂ ಇಷ್ಟವಿರುವುದಿಲ್ಲ’ ಎಂದಿದ್ದಾರೆ.  ಈ ರೀತಿಯ ಅನೇಕ ಘಟನೆಗಳು ನಡೆದ ಬಗ್ಗೆ ವರದಿ ಆಗಿವೆ.

ಸನ್ನಿ ಲಿಯೋನ್​ ಕೈಯಲ್ಲಿ ಹಲವು ಸಿನಿಮಾಗಳಿವೆ. 2019ರಿಂದ ಈಚೆಗೆ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ವಿಶೇಷ ಹಾಡಿನಲ್ಲೂ ಅವರು ಹೆಜ್ಜೆ ಹಾಕುತ್ತಿದ್ದಾರೆ.