Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಭಕ್ತರ ಹರ್ಷೋದ್ಘಾರ ಹಾಗೂ ಜಯಘೋಷ ಗಳೊಂದಿಗೆ ಅಮರೇಶ್ವರ ಅಗ್ನಿ ಪೂಜೆ ಸಂಪನ್ನ

ಔರಾದ : ನಗರದ ಆರಾಧ್ಯ ದೈವ ಬೇಡಿದ ವರ ಕರುಣಿಸುವ ಕಾಮಧೇನು ಈ ಭಾಗದ ಜನರ ಸಂಕಷ್ಟ ಪರಿಹರಿಸುವ ಕಲ್ಪತರು ಉದ್ಭವಲಿಂಗ ಅಮರೇಶ್ವರ ಅಗ್ನಿ ಪೂಜೆ ವಿವಿಧ ಧಾರ್ಮಿಕ ಪದ್ಧತಿಗಳಿಂದ ಅತಿ ವಿಜೃಂಭಣೆಯಿಂದ ಜರುಗಿತು.

ಔರಾದ ನಗರದ ವಿವಿಧ ಬಡಾವಣೆಗಳ ಮೂಲಕ ಸಕಲ ವಾದ್ಯಗಳೊಂದಿಗೆ ಶ್ರೀ ಅಮರೇಶ್ವರರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಪಟ್ಟಣದ ದೇಶ್ಮುಖ ಓಣಿ, ಖೂಬಾ ಗಲ್ಲಿ, ಶೆಟಕಾರ ಗಲ್ಲಿಯ ಮೂಲಕ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆದು ಪಶು ಆಸ್ಪತ್ರೆ ಎದುರಿಗೆ ಇರುವ ಅಗ್ನಿ ಕುಂಡಕ್ಕೆ ಬಂದು ಅಗ್ನಿ ತುಳಿಯುತ್ತಾರೆ. ದೇವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಅಗ್ನಿ ತುಳಿದ ಮೇಲೆ ಸರ್ವ ಭಕ್ತರು ಶ್ರೀ ಅಮರೇಶ್ವರರ ಜೈ ಘೋಶದೊಂದಿಗೆ ಓಂ ಭಲಾ ಶಂಕರ ಭಲಾ ಎನ್ನುತ್ತ ಅಗ್ನಿ ತುಳಿದು ಭಕ್ತಿ ಭಾವ ಮೆರೆದರು.

ಈ ಸಂದರ್ಭದಲ್ಲಿ ಉದ್ಭವಲಿಂಗ ಶ್ರೀ ಅಮರೇಶ್ವರರ ಚಾರಿಟೇಬಲ ಟ್ರಸ್ಟನ ವತಿಯಿಂದ ೧೧ ಕ್ವಿಂಟಲ ಲಾಡು ಪ್ರಸಾದ ವಿತರಣೆಗೆ ಟ್ರಸ್ಟ ಅಧ್ಯಕ್ಷ ಸುನೀಲಕುಮಾರ ದೇಶಮುಖ ಮತ್ತು ಸಿಪಿಐ ರವೀಂದ್ರನಾಥ, ಪಿಎಸ್ಐ ಮಂಜನಗೌಡ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ ಮಾಧವರಾವ ನರೋಟೆ ಟ್ರಸ್ಟ ಸದಸ್ಯರಾದ ಸಿದ್ದು ರಾಗಾ, ಮಹೇಶ ಅಲ್ಮಾಜೆ, ಸಂದೀಪ್ ಪಾಟೀಲ, ರವಿಕುಮಾರ ಕೂಡ್ಲೆ, ಮಹೇಶ ದೇಶಮುಖ, ಮಾರುತಿ ಕೊಳೆಕರ, ಶಿವಾನಂದ ಬೆದ್ರೆ, ಅಂಬಾದಾಸ ನೆಳಗೆ, ಸಂತೋಷ ಫೂಲಾರಿ, ಓಂಬಸವ ಪಟ್ನೆ, ಶರಣಬಸಪ್ಪ ಸಾವಳೆ, ಆನಂದ ಪಾಂಚಾಳ, ಹಾವಪ್ಪಾ ದ್ಯಾಡೆ, ಮಲ್ಲು ಏಡವೆ, ಸಚ್ಚಿದಾನಂದ ಸ್ವಾಮಿ, ಅನಿಲ ಫುಲಾರಿ, ಪಪ್ಪು ಪವಾರ, ರಮೇಶ ವಾಘಮಾರೆ, ಲೋಕೇಶ ಗಂದಗೆ ಸೇರಿದಂತೆ ಇನ್ನಿತರರು ಪ್ರಸಾದ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕು ಆಡಳಿತ ಮಂಡಳಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೊಲೀಸ ಸಿಬ್ಬಂದಿಗಳು ಅಗ್ನಿ ಪೂಜೆಯಲ್ಲಿ ವ್ಯವಸ್ಥೆ ಕಲ್ಪಿಸಿದರು.