Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

 

*ಇಬ್ಬರು ಸಚಿವರ ಕ್ಷೇತ್ರದಲ್ಲಿ ಸಮಸ್ಯಗಳೆ ಸಮಸ್ಯೆಗಳು*

ಔರಾದ ಪಟ್ಟಣದ ವಾರ್ಡ್ ನಂಬರ್ 14ರ ಅಂಬಿಕಾ ಕಾಲೋನಿಯಲ್ಲಿ ಸುಮಾರು ವರ್ಷಗಳಿಂದ ಬಡಾವಣೆಯಲ್ಲಿ ಗಬ್ಬುನಾರುತ್ತಿರುವ ಚರಂಡಿ ನೀರು ಚರಂಡಿ ಇಲ್ಲದ ಕಾರಣ ಮನೆಯ ಮುಂದೆ ನೀರು ನಿಲ್ಲುತ್ತಿದ್ದು ಪಟ್ಟಣ ಪಂಚಾಯತ್ ಇಲಾಖೆ ಸುಮಾರು ಸರಿ ಪತ್ರ ನೀಡಿದ್ದರು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಅಧಿಕಾರಿಗಳು ಹಾಗೂ ಸದಸ್ಯರು ಎನ್ನುತ್ತಾರೆ ಸ್ಥಳೀಯರು.
ನಿಂತಿರುವ ದುರ್ವಾಸನೆಯ ನೀರಿನಿಂದ ಮನೆಯಲ್ಲಿ ಗಬ್ಬುವಾಸನೆ ಬರುತ್ತಿದ್ದು ಮಕ್ಕಳು ವೃದ್ಧರು ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ ಕೂಡಲೇ ಮೇಲಾಧಿಕಾರಿಗಳು ಮಧ್ಯಪ್ರವೇಶಿಸಿ ನಿಂತಿರುವ ನೀರನ್ನು ಪರಿಗಣಿಸಿ ಸೂಕ್ತ ವ್ಯವಸ್ಥೆ ನೀಡಬೇಕೆಂದು ಪತ್ರಿಕೆಯ ಮೂಲಕ ಮನವಿ ಮಾಡುತ್ತೇವೆ ಎನ್ನುತ್ತಾರೆ ಸ್ಥಳೀಯರು

ವಿಪರ್ಯಾಸದ ಸಂಗತಿಯೆಂದರೆ ಉದ್ಯಾನದಲ್ಲಿ ಹನುಮಾನ ದೇವಸ್ಥಾನ ವಿದ್ದು ದೇವಸ್ಥಾನದ ಸುತ್ತಮುತ್ತ ಚರಂಡಿ ನೀರು ನಿಂತಿದ್ದು ನೀರಿನಲ್ಲಿಯೇ ನಡೆದುಕೊಂಡು ದೇವರ ದರ್ಶನ ಪಡೆಯುವ ಪರಿಸ್ಥಿತಿ ನಮ್ಮದಾಗಿದೆ ಎಂದ ಸ್ಥಳಿಯ ನಿವಾಸಿ ಸಂದೀಪ್ ಕೊಂಡೆ. ಇಲ್ಲಿನ ಉದ್ಯಾನಗಳು ಚರಂಡಿಗಳಾಗಿ ಮಾರ್ಪಟ್ಟಿವೆ ಒಟ್ಟಾರೆಯಾಗಿ ಔರಾದ ಪಟ್ಟಣದಲ್ಲಿ 20 ವಾರ್ಡಗಳಿದ್ದು ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತರಾದ ಪಟ್ಟಣದ ನಿವಾಸಿಗಳು ಚುನಾವಣೆ ಬಂದ ಸಂಧರ್ಭದಲ್ಲಿ ಚುಣಾವಣೆ ಭಹಿಸ್ಕರಿಸಲಾಗುತ್ತೆ ಎನ್ನುತ್ತಾರೆ ಕೆಲವರು.
ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಔರಾದ ಪಟ್ಟಣದ ಬಡಾವಣೆಗಳ ಸಮಸ್ಯೆ ನೋಡಿ ಸ್ಥಳೀಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಮುಂದಾಗಬೇಕು ಎಂದ ಸ್ಥಳೀಯರಾದ ಧನರಾಜ್ ಸೇರೆ, ಅಮರೇಶ್ವರ ವಟ್ಟ ಮವಾರ್, ಲಖನ ಘೊಡಕೆ, ಲಕ್ಷ್ಮಣ್ ಕೋಳಿ, ರವಿ ಸ್ವಾಮಿ, ರೇವಣಯ್ಯ ಸ್ವಾಮಿ, ರಾಜಪ್ಪ ನಿಷ್ಪತ್ತೆ,ಸಂಜು ಆರ್ ಕೆ, ಕಬೀರ್ ಕೋಟೆ, ತಮ್ಮ ಸಮಸ್ಯೆಗಳನ್ನು ಪತ್ರಿಕಾ ಮಾಧ್ಯಮದವರ ಮುಂದೆ ಹಂಚಿಕೊಂಡರು.