Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

NABARD ಕನ್ಸಲ್ಟೆನ್ಸಿ ಸರ್ವಿಸಸ್, NABCONS ಸಂಸ್ಥೆಯು ತನ್ನ ದೆಹಲಿಯಲ್ಲಿರುವ ಕಚೇರಿಯಲ್ಲಿ ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ ಪೋಸ್ಟ್‌ಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲು ಅಧಿಸೂಚನೆಯನ್ನು (NABARD Recruitment 2022) ಬಿಡುಗಡೆ ಮಾಡಿದೆ.


ವಾಣಿಜ್ಯ ಪದವೀಧರರಿಗೆ ಈ ಉದ್ಯೋಗವು ಅದ್ಭುತ ಅವಕಾಶವಾಗಿದೆ. ಉದ್ಯೋಗ ಹುಡುಕುತ್ತಿರುವ ಯುವ ಜನರು ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ ಪೋಸ್ಟ್‌ಗಳಿಗೆ ತಮ್ಮ ಅಗತ್ಯ ಮಾಹಿತಿಯನ್ನು ಇಂದೇ ಕಳುಹಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ. ಈ ಉದ್ಯೋಗದ ಕುರಿತು ಸಂಪೂರ್ಣ ವಿವರ ನಿಮಗಾಗಿಯೇ ಇಲ್ಲಿದೆ.

ಸಂಸ್ಥೆಯ ಹೆಸರುNABARD ಕನ್ಸಲ್ಟೆನ್ಸಿ ಸರ್ವಿಸಸ್, NABCONS, ದೆಹಲಿಹುದ್ದೆಯ ಹೆಸರುಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ಹುದ್ದೆಗಳ ಸಂಖ್ಯೆ2ಸಂಬಳ55,000/- ರಿಂದ ರೂ. 60,000/ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಏಪ್ರಿಲ್ 6, 2022.ಕನಿಷ್ಟ ವಿದ್ಯಾರ್ಹತೆಬಿ.ಕಾಮ್ ಪದವಿವಯೋಮಿತಿ25 ರಿಂದ 40 ವರ್ಷಗಳು
ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಹುದ್ದೆಯ ಮಾಹಿತಿ

ಹುದ್ದೆಗಳ ಸಂಖ್ಯೆ: 02

ಹುದ್ದೆಯ ಹೆಸರು: ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್

ಸಂಸ್ಥೆಯ ಹೆಸರು: NABARD ಕನ್ಸಲ್ಟೆನ್ಸಿ ಸರ್ವಿಸಸ್, NABCONS

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 6, 2022.

ವಯೋಮಿತಿ: ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ (ಹಣಕಾಸು ಮತ್ತು ಖಾತೆಗಳು) ಅಭ್ಯರ್ಥಿಯ ವಯಸ್ಸು 25 ರಿಂದ 40 ವರ್ಷಗಳ ನಡುವೆ ಇರಬೇಕು

ಸಂಬಳ ಎಷ್ಟು? ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ (ಫೈನಾನ್ಸ್ ಮತ್ತುಅಕೌಂಟ್ಸ್) ರೂ. 55,000/- ರಿಂದ ರೂ. 60,000/-

ವಿದ್ಯಾರ್ಹತೆ: ಕನಿಷ್ಠ 50% ಅಥವಾ ಪ್ರತಿಷ್ಠಿತ ಸಂಸ್ಥೆಯಿಂದ CGPA ಯಲ್ಲಿ ಸಮಾನ ಅಂಕಗಳೊಂದಿಗೆ ವಾಣಿಜ್ಯ ಪದವಿ/ಬ್ಯಾಚುಲರ್ ಆಫ್ ಕಾಮರ್ಸ್ ಪಡವಿ ಪಡೆದಿರಬೇಕು.

CA/CFA/ICWA ಪದವಿಯನ್ನು ICAI/ICWA ಅಥವಾ ತತ್ಸಮಾನ ಪ್ರತಿಷ್ಠಿತ ಸಂಸ್ಥೆಯಿಂದ ಪಡೆದಿರಬೇಕು. MBA ಫೈನಾನ್ಸ್ ಅಥವಾ ಹೆಸರಾಂತ ವಿಶ್ವವಿದ್ಯಾಲಯದಿಂದ CA (ಇಂಟರ್) ಅಥವಾ M.Com ನಲ್ಲಿ ನೋಂದಣಿಯನ್ನು ಹೊಂದಿರಬೇಕು.

ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಯ ಮಾಹಿತಿ

ಹುದ್ದೆಗಳ ಸಂಖ್ಯೆ02ಹುದ್ದೆಯ ಹೆಸರುಪ್ರಾಜೆಕ್ಟ್ ಅಸೋಸಿಯೇಟ್ವಯೋಮಿತಿ25ರಿಂದ 35ಸಂಬಳ35ರಿಂದ 45 ಸಾವಿರಕಂಪನಿಯ ಹೆಸರುNABARD ಕನ್ಸಲ್ಟೆನ್ಸಿ ಸರ್ವಿಸಸ್, NABCONS, ದೆಹಲಿಕನಿಷ್ಠ ವಿದ್ಯಾರ್ಹತೆವಾಣಿಜ್ಯ ಪದವಿ/ಬ್ಯಾಚುಲರ್ ಆಫ್ ಕಾಮರ್ಸ್ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಏಪ್ರಿಲ್ 6, 2022.
ಹುದ್ದೆಗಳ ಸಂಖ್ಯೆ: 02

ಹುದ್ದೆಯ ಹೆಸರು: ಪ್ರಾಜೆಕ್ಟ್ ಅಸೋಸಿಯೇಟ್

ವಯೋಮಿತಿ: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 25 ರಿಂದ 35ರ ಒಳಗೆ ಇರಬೇಕು

ಸಂಬಳ: ಪ್ರಾಜೆಕ್ಟ್ ಅಸೋಸಿಯೇಟ್ (ಫೈನಾನ್ಸ್ ಮತ್ತುಅಕೌಂಟ್ಸ್) ರೂ 35,000/- ರಿಂದ ರೂ 45,000/-

ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ

ಕನಿಷ್ಠ 50% ಅಥವಾ ಪ್ರತಿಷ್ಠಿತ ಸಂಸ್ಥೆಯಿಂದ CGPA ಯಲ್ಲಿ ಸಮಾನ ಅಂಕಗಳೊಂದಿಗೆ ವಾಣಿಜ್ಯ ಪದವಿ/ಬ್ಯಾಚುಲರ್ ಆಫ್ ಕಾಮರ್ಸ್ ಪಡೆದಿರಬೇಕು.

ಹಣಕಾಸು/ಬ್ಯಾಂಕಿಂಗ್ ಮತ್ತು ಅಕೌಂಟಿಂಗ್‌ನಲ್ಲಿ ಹೆಚ್ಚಿನ ಪದವಿ/ಸರ್ಟಿಫಿಕೇಟ್ ಇದ್ದರೆ ಅನುಕೂಲ.

ಹಣಕಾಸು ವಿಷಯದಲ್ಲಿ ಎಂಬಿಎ ಅಥವಾ ಪ್ರತಿಷ್ಠಿತ ಸಂಸ್ಥೆಗಳಿಂದ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು. MS ಎಕ್ಸೆಲ್ ಮತ್ತು ಪವರ್‌ಪಾಯಿಂಟ್‌ನಲ್ಲಿ ಪ್ರಾವೀಣ್ಯತೆಯೊಂದಿಗೆ MS ಆಫೀಸ್‌ನ ಅತ್ಯುತ್ತಮ ಜ್ಞಾನವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಮತ್ತು ಅದರಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ 23 ಮಾರ್ಚ್ 2022 ರಿಂದ 06 ಏಪ್ರಿಲ್ 2022 ರವರೆಗೆ 15 ದಿನಗಳ ಒಳಗೆ ನಿಗದಿತ ನಮೂನೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕೃತ ನೊಟಿಫಿಕೇಶನ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

ವಾಣಿಜ್ಯ ಪದವೀಧರರಿಗೆ ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಎರಡೂ ಹುದ್ದೆಗಳಿಗೆ ಅನುಕ್ರಮವಾಗಿ ವಯಸ್ಸು 25 ರಿಂದ 40 ವರ್ಷಗಳ ನಡುವೆ ಮತ್ತು 25 ವರ್ಷದಿಂದ 35 ವರ್ಷಗಳ ನಡುವೆ ಇರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ನೈಪುಣ್ಯತೆ ಇರಬೇಕು. ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ (ಫೈನಾನ್ಸ್ ಮತ್ತುಅಕೌಂಟ್ಸ್) ಹುದ್ದೆಗೆ ರೂ. 55,000/- ರಿಂದ ರೂ. 60,000/ ಸಂಬಳವಿದೆ. ಪ್ರಾಜೆಕ್ಟ್ ಅಸೋಸಿಯೇಟ್ (ಫೈನಾನ್ಸ್ ಮತ್ತುಅಕೌಂಟ್ಸ್) ರೂ 35,000/- ರಿಂದ ರೂ 45,000/ ರೂ ಸಂಬಳವಿದೆ.